Xiaomi ತಮ್ಮ ಅಭಿಮಾನಿಗಳಿಗೆ ತಂದ WhatsApp ಆಧರಿತ ಸೇವೆಯನ್ನು ಬಳಸುವುದೇಗೆ ?

HIGHLIGHTS

ನೀವು ಕ್ಸಿಯಾಮಿ ಫೋನ್ ಬಳಕೆದಾರರೇ? ಹಾಗಾದರೆ ಈ ನಂಬರನ್ನು ಸೇವ್ ಮಾಡಿಕೊಳ್ಳಲೇಬೇಕು.

Xiaomi ತಮ್ಮ ಅಭಿಮಾನಿಗಳಿಗೆ ತಂದ WhatsApp ಆಧರಿತ ಸೇವೆಯನ್ನು ಬಳಸುವುದೇಗೆ ?

ಕ್ಸಿಯಾಮಿಯೂ ಹೊಸದಾಗಿ Mi Bunny ಸೇವೆ ಚಂದಾದಾರಿಕೆಯ ಆಧಾರದ ಮೇಲೆ ಇರುತ್ತದೆ. ಅಷ್ಟೇ ಅಲ್ಲದೆ ಬಳಕೆದಾರರು ಮೊದಲು ತಮ್ಮ ಸಂಪರ್ಕಗಳ ಲಿಸ್ಟಿಗೆ ಈ ನಂಬರನ್ನು +91 77609 44500 ಅನ್ನು ಸೇರಿಸಬೇಕಾಗುತ್ತದೆ. ಇದರ ನಂತರ ಬಳಕೆದಾರರು WhatsApp ಮತ್ತು ಮೆಸೇಜನ್ನು ತೆರೆಯಬೇಕಾಗುತ್ತದೆ. ಮತ್ತು ನಂತರ ಕ್ಸಿಯಾಮಿ ಕಂಪನಿಯಿಂದ ನೀವು ಸ್ವಾಗತ ಸಂದೇಶವನ್ನು ಪಡೆಯುವಿರಿ. ಮತ್ತು ನಿಮಗೆ ಭವಿಷ್ಯದಲ್ಲಿ ತಮ್ಮ ನಗರದಲ್ಲಿ Mi ಯಾ ಯಾವುದೇ ಚಟುವಟಿಕೆ ಅಥವಾ ಹೊಸ ಕಾರ್ಯಕ್ರಮಗಳ ಬಗ್ಗೆ ಅಧಿಸೂಚನೆಗಳನ್ನು ಪಡೆಯಬವುದು.

Digit.in Survey
✅ Thank you for completing the survey!

Xiaomi ತಮ್ಮ ಅಭಿಮಾನಿಗಳಿಗೆ ತಂದ WhatsApp ಆಧರಿತ ಸೇವೆಯನ್ನು ಬಳಸುವ ಉದ್ದೇಶವೆಂದರೆ ಇದು ಬಳಕೆದಾರರಿಗೆ ಉತ್ಪನ್ನ ವ್ಯವಹರಿಸುತ್ತದೆ, ಮಾರಾಟ ಜ್ಞಾಪನೆಗಳನ್ನು ನೀಡುತ್ತದೆ, MIUI ಸಾಪ್ತಾಹಿಕ ನವೀಕರಣಗಳ ಕುರಿತು ಅಧಿಸೂಚನೆಗಳನ್ನು ನೀಡುತ್ತದೆ, ಮತ್ತು Mi ಫಾನ್ ಭೇಟಿಗಳ ಅಪ್ಪಣೆಗಳ ಬಗ್ಗೆ ಜ್ಞಾಪನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು Xiaomi ಹೇಳುತ್ತಾದೆ.

WhatsApp ಸಂಖ್ಯೆ ಮೂಲಕ ಗ್ರಾಹಕರ ಬೆಂಬಲ ವಿನಂತಿಗಳನ್ನು ಹೆಚ್ಚಿಸುವ ಆಯ್ಕೆ ಸಹ ಇರುತ್ತದೆ. Xiaomi ಫೋನ್ಗಳಿಗಾಗಿ ಟೆಕ್ ಬೆಂಬಲ ಸಮಸ್ಯೆಯನ್ನು ಹೆಚ್ಚಿಸಲು ಬಯಸುವವರು ನಿಮ್ಮ ವಾಟ್ಸಪ್ಪ್ ಖಾತೆಯಿಂದ ಆ ನಂಬರಿಗೆ  'SUPPORT' ಎಂಬ ಮೆಸೇಜನ್ನು ಕಳುಹಿಸಿ ಮುಂದಿನ ವಿವರಗಳಿಗಾಗಿ ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಈ ಸೇವೆ ಇಷ್ಟವಾಗದಿದ್ದರೆ ಇದನ್ನು ನಿಲ್ಲಿಸಬೇಕೆಂದ್ದಿದರೆ ನಿಮ್ಮ WhatsApp ಖಾತೆಯಿಂದ ಅದೇ ನಂಬರ್ಗೆ ಸರಳವಾಗಿ 'STOP' ಎಂದು ಬರೆದು ಕಳುಯಿಸಬವುದು. ಇದರಿಂದ ಇನ್ನು ಮುಂದೆ ನೀವು ಕ್ಸಿಯಾಮಿ ಕಡೆಯಿಂದ ಎನ್ನನ್ನು ಸ್ವೀಕರಿಸಲು ಸಾಧ್ಯವಿಲ್ಲ.

WhatsApp ಸಹ ಒಂದು ಬಿಸಿನೆಸ್ ಅಪ್ಲಿಕೇಶನನ್ನು ಈಗಾಗಲೇ ಪ್ರಾರಂಭಿಸಿದೆ. ಇದು ಈಗ ಭಾರತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ನಿಂದ ದೇಶದಲ್ಲಿನ SME ಗಳಿಗೆ ಇದು ಹೆಚ್ಚು ಉಪಯೋಗವಾಗಿದೆ. ಮತ್ತು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ UPI ಆಧಾರಿತ ಪಾವತಿಗಳನ್ನು WhatsApp ಅನ್ವೇಷಿಸುತ್ತಿದೆ. ಮತ್ತು ಈ ವೈಶಿಷ್ಟ್ಯವನ್ನು ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo