BSNL ಕ್ರಿಸ್‌ಮಸ್ ಬೊನಾಸ್ಟಾ ಎಂದು ಕರೆಯಲ್ಪಡುವ ಈ ಯೋಜನೆ ಸೀಮಿತ ಅವಧಿಗೆ ಲಭ್ಯವಿರುತ್ತದೆ.
ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಈ ಹೊಸ ಕ್ರಿಸ್‌ಮಸ್ ವಿಷಯದ ಕೊಡುಗೆಯನ್ನು ಘೋಷಿಸಿದೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದಲ್ಲಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಅತ್ಯಂತ ವಿಶೇಶ ಮತ್ತು ಅತ್ಯಂತ ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಟೆಲಿಕಾಂ ಆಪರೇಟರ್ ಗುರುವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಈ ಹೊಸ ಕ್ರಿಸ್‌ಮಸ್ ವಿಷಯದ ಕೊಡುಗೆಯನ್ನು ಘೋಷಿಸಿದೆ. ಕ್ರಿಸ್‌ಮಸ್ ಬೊನಾಸ್ಟಾ ಎಂದು ಕರೆಯಲ್ಪಡುವ ಈ ಯೋಜನೆ ಸೀಮಿತ ಅವಧಿಗೆ ಲಭ್ಯವಿರುತ್ತದೆ. ಈ ಕೇಂದ್ರಗಳು ಸಿಮ್ ಕಾರ್ಡ್ ವಿತರಣೆ, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿಯಂತಹ ಸೇವೆಗಳನ್ನು ನೀಡುತ್ತವೆ. ಈ ಆಫರ್ ಕೇವಲ ಹೊಸ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎನ್ನುವುದನ್ನು ಗಮನಿಸಬೇಕಿದೆ.
SurveyAlso Read: ಅಮೆಜಾನ್‌ನಲ್ಲಿ ಇಂದು GOVO Dolby Audio Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
BSNL ಕೇವಲ 1 ರೂಪಾಯಿ ಬೆಲೆಯ ಪ್ಲಾನ್:
BSNL ಕ್ರಿಸ್‌ಮಸ್ ಬೊನಾನ್ಹಾ ಪ್ರಿಪೇಯ್ಡ್ ಪ್ಲಾನ್ ಕೇವಲ 1 ರೂಪಾಯಿ ಬೆಲೆಯಲ್ಲಿದ್ದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರು ದಿನಕ್ಕೆ 2GB 4G ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ನಡೆಯುತ್ತಾರೆ. ಇಷ್ಟು ಕಡಿಮೆ ಬೆಲೆಯಲ್ಲಿ ಹಲವಾರು ಪ್ರಯೋಜನಗಳಿಂದಾಗಿ ಈ ಪ್ಲಾನ್ ಜನಪ್ರಿಯತೆಯನ್ನು ಗಳಿಸುತ್ತಿದೆ. ಆದಾಗ್ಯೂ ಕಂಪನಿಯು ಈ ಯೋಜನೆಯೊಂದಿಗೆ ನ್ಯಾಯಯುತ ಬಳಕೆಯ ನೀತಿಯನ್ನು (FUP) ಜಾರಿಗೆ ತಂದಿದೆ. ಪರಿಣಾಮವಾಗಿ ದೈನಂದಿನ 2G8 ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವು 40kbps ಗೆ ಕಡಿಮೆಯಾಗುತ್ತದೆ.
Don’t miss the BSNL Christmas Bonanza Offer 2025!
— BSNL India (@BSNLCorporate) December 26, 2025
Get a FREE SIM + Unlimited Calls + 2GB/day data and 100 SMS/ day for 30 Days straight @ just ₹1!
Stay connected with the most reliable network – #BSNL!
Offer Valid till 31st Dec 2025.#BSNL #BSNLOffer #ChristmasBonanza… pic.twitter.com/Loc6iuSUeV
ಆದಾಗ್ಯೂ ಮೂಲಭೂತ ಇಂಟರ್ನೆಟ್ ಆಗತ್ಯಗಳಿಗಾಗಿ ಸಂಪರ್ಕವು ಉಳಿಯುತ್ತದೆ. ನಿಮಗೆ 4G ಸಿಮ್ ಕಾರ್ಡ್ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ. ಈ ಕ್ರಿಸ್‌ಮಸ್ ಬೊನಾನಾ ಯೋಜನೆಯ ಲಾಭ ಪಡೆಯುವ ಹೊಸ ಚಂದಾದಾರರಿಗೆ 4G ಸಿಮ್ ಕಾರ್ಡ್ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ ಎಂದು BSNL ಘೋಷಿಸಿದೆ. ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. BSNL ನ 4G ಸೇವೆಗಳಿಗೆ ಬದಲಾಯಿಸಲು ಬಯಸುವ ಬಳಕೆದಾರರಿಗೆ ಈ ಕೊಡುಗೆ ವಿಶೇಷವಾಗಿ ಆಕರ್ಷಕವಾಗಿರಬಹುದು.
ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ:
ಕಂಪನಿಯ ಪ್ರಕಾರ ಈ ಹೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು ಡಿಸೆಂಬರ್ 31 ರವರೆಗೆ ಮಾತ್ರ ಇದನ್ನು ಬಳಸಬಹುದು. ಇದರರ್ಥ ಈ ಕೈಗೆಟುಕುವ ಯೋಜನೆಯ ಲಾಭ ಪಡೆಯಲು ನಿಮಗೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ಯೋಜನೆಯನ್ನು ಸಕ್ರಿಯಗೊಳಿಸಲು ಗ್ರಾಹಕರು ತಮ್ಮ ಹತ್ತಿರದ BSNL ಚಿಲ್ಲರೆ ವ್ಯಾಪಾರಿ ಅಥವಾ BSNL ಸಾಮಾನ್ಯ ಸೇವಾ ಕೇಂದ್ರ (CSC) ಗೆ ಭೇಟಿ ನೀಡಬಹುದು. ಈ ಕೇಂದ್ರಗಳು ಸಿಮ್ ಕಾರ್ಡ್ ವಿತರಣೆ, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿಯಂತಹ ಸೇವೆಗಳನ್ನು ನೀಡುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile