Vi Plans: ಕಡಿಮೆ ಬೆಲೆಯ ಈ ಪ್ಲಾನ್‌ಗಳಲ್ಲಿ Unlimited Data ಜೊತೆಗೆ ಜಬರ್ದಸ್ತ್ ವ್ಯಾಲಿಡಿಟಿ
ವೊಡಾಫೋನ್ ಐಡಿಯಾ ಈ ಪ್ಲಾನ್‌ಗಳಲ್ಲಿ ಅನ್‌ಲಿಮಿಟೆಡ್ ಡೇಟಾ ಪ್ರಯೋಜನ ಸಿಗಲಿದೆ
ಬಜೆಟ್ ದರದ ಈ ರೀಚಾರ್ಜ್ ಯೋಜನೆಗಳಲ್ಲಿ ಅನಿಯಮಿತ ವಾಯ್ಸ್ ಕರೆಗಳು ಲಭ್ಯ
ಡೇಟಾ ಪ್ರಯೋಜನದ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದಿವೆ
ಭಾರತದ ಮೂರನೇ ದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ವೊಡಾಫೋನ್ ಐಡಿಯಾ (Vi) ಭಿನ್ನ ಡೇಟಾ ಪ್ರಯೋಜನದ ಯೋಜನೆಗಳ ಆಯ್ಕೆಯನ್ನು ಒಳಗೊಂಡಿದೆ. ಈ ಮೂಲಕ ಏರ್‌ಟೆಲ್ ಹಾಗೂ ಜಿಯೋ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಸಾಗಿದೆ. ಆ ಪೈಕಿ Vi ಕಂಪನಿಯ Unlimited Data ಪ್ರಯೋಜನ ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಅಧಿಕ ಡೇಟಾ ಗ್ರಾಹಕರನ್ನು ಆಕರ್ಷಿಸಿವೆ. ಮುಖ್ಯವಾಗಿ ಅಧಿಕ ದೈನಂದಿನ ಡೇಟಾ ಸೌಲಭ್ಯ ಬಯಸುವ ಬಳಕೆದಾರರ ಗಮನ ಸೆಳೆದಿವೆ. ಅಂದಹಾಗೆ ಈ ಪ್ಲಾನ್‌ಗಳಲ್ಲಿ ಡೇಟಾ ಸೌಲಭ್ಯ ಜೊತೆಗೆ ಹೆಚ್ಚುವರಿ ಪ್ರಯೋಜನಗಳು ಸಹ ಸಿಗುತ್ತವೆ. ಹಾಗಾದರೆ Vi ಟೆಲಿಕಾಂನ ಅನ್‌ಲಿಮಿಟೆಡ್ ಡೇಟಾ ಪ್ರಯೋಜನ ನೀಡುವ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Valentine’s Day Wishes: ಪ್ರೇಮಿಗಳ ದಿನದಂದು ಶುಭ ಕೋರಲು ಇಲ್ಲಿವೆ ಬೆಸ್ಟ್ ಮೆಸೇಜ್, ಫೋಟೋ ಶುಭಾಶಯಗಳು!
Vi ಸಂಸ್ಥೆಯ 649 ರೂಗಳ ಪ್ಲಾನ್ ಮಾಹಿತಿ
ವೊಡಾಫೋನ್ ಐಡಿಯಾ ಕಂಪನಿಯ 649 ರೂಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ Unlimited Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಬಜೆಟ್ ದರದಲ್ಲಿ ಅಧಿಕ ಡೇಟಾ ಹಾಗೂ ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಕ್ತ ಎನ್ನಬಹುದು.

Vi ಸಂಸ್ಥೆಯ 696 ರೂಗಳ ಪ್ಲಾನ್ ಮಾಹಿತಿ
ವೊಡಾಫೋನ್ ಐಡಿಯಾ ಕಂಪನಿಯ 696 ರೂಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ Unlimited Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆ ಸೂಕ್ತ ಎನ್ನಬಹುದು.
Vi ಸಂಸ್ಥೆಯ 795 ರೂಗಳ ಪ್ಲಾನ್ ಮಾಹಿತಿ
ವೊಡಾಫೋನ್ ಐಡಿಯಾ ಟೆಲಿಕಾಂನ 795 ರೂಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಸಹ 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ Unlimited Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ರೀಪೇಯ್ಡ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ SonyLIV, ZEE5, Lionsgate Play, FanCode ಸೇರಿದಂತೆ ಇತರ 19 OTT ಗಳನ್ನು ಸ್ಟ್ರೀಮ್ ಮಾಡಿ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile