Valentine’s Day Wishes: ಪ್ರೇಮಿಗಳ ದಿನದಂದು ಶುಭ ಕೋರಲು ಇಲ್ಲಿವೆ ಬೆಸ್ಟ್ ಮೆಸೇಜ್, ಫೋಟೋ ಶುಭಾಶಯಗಳು!

HIGHLIGHTS

ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಮ್ ಮೂಲಕ ಪ್ರೇಮಿಗಳ ದಿನದ ಶುಭಾಶಯ ತಿಳಿಸಿ

ಪ್ರೇಮಿಗಳ ದಿನದಂದು ಉಡುಗೊರೆ ನೀಡುವ ಮೂಲಕ ಶುಭ ಕೋರಿ

ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ಸಂಭ್ರಮದ ದಿನವಾಗಿದೆ

Valentine’s Day Wishes: ಪ್ರೇಮಿಗಳ ದಿನದಂದು ಶುಭ ಕೋರಲು ಇಲ್ಲಿವೆ ಬೆಸ್ಟ್ ಮೆಸೇಜ್, ಫೋಟೋ ಶುಭಾಶಯಗಳು!

Valentine’s Day Wishes In Kannada: ಬಂದೇ ಬಿಡ್ತು ವ್ಯಾಲೆಂಟೈನ್ಸ್ ಡೇ ಪ್ರೇಮಿಗಳ ಪಾಲಿಗೆ ಫೆಬ್ರವರಿ 14 ಸಂಭ್ರಮದ ದಿನ. ಪ್ರೇಮಿಗಳ ದಿನವು ಪ್ರೀತಿ, ಆತ್ಮೀಯತೆ, ನಂಬಿಕೆ ಹಾಗೂ ಬಾಂಧವ್ಯವನ್ನು ಸ್ಮರಿಸುವ ವಿಶೇಷ ದಿನವಾಗಿದೆ. ಪ್ರೀತಿ ಎಂಬುದು ಕೇವಲ ಒಂದು ಪದವಲ್ಲ ಅದು ಒಂದು ಭಾವನೆ ಮತ್ತು ನಂಬಿಕೆ ಆಗಿದ್ದು, ಅದಕ್ಕೆ ಜೀವನವನ್ನೇ ಸುಂದರವಾಗಿಸುವ ಅಗಾಧ ಶಕ್ತಿ ಇದೆ. ಇನ್ನು ಪ್ರೇಮಿಗಳ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಮೂಲಕ ಖುಷಿಪಡಿಸಲು ಬಯಸುತ್ತಾರೆ. ಅರ್ಥಗರ್ಭಿತ, ಸುಂದರ ಪ್ರೇಮ ಸಂದೇಶಗಳ ಮೂಲಕ ತಮ್ಮ ಸಂಗಾತಿ/ಪ್ರೇಮಿಗೆ ಶುಭಾಶಯ ತಿಳಿಸಲು ಇಷ್ಟಪಡುತ್ತಾರೆ. ಇನ್ನು ಅನೇಕರು ತಮ್ಮ ಪ್ರೇಮಿಗೆ ಸರ್ಪ್ರೈಸ್‌ ಕೊಡಲು ಬಯಸುತ್ತಾರೆ. ಅಂದಹಾಗೆ ಈ ಪ್ರೇಮಿಗಳ ದಿನದಂದು ಶುಭಾಶಯ ತಿಳಿಸಲು ಈ ಲೇಖನದಲ್ಲಿ ಕೆಲವು ಸಂದೇಶಗಳನ್ನು ನೀಡಲಾಗಿದೆ.

Digit.in Survey
✅ Thank you for completing the survey!

Also Read : Tecno Pova Curve 2 5G ಭಾರತದಲ್ಲಿ ಬಿಡುಗಡೆ! ಬರೋಬ್ಬರಿ 8,000mAh ಬ್ಯಾಟರಿ ಇರುವ ಈ ಫೋನ್‌ ಬೆಲೆ ಎಷ್ಟು?

Valentine’s Day: ಪ್ರೇಮಿಗಳ ದಿನದ ಶುಭಾಶಯಗಳು

ಪ್ರೇಮನಿವೇದನೆ, ವಾತ್ಸಲ್ಯದ ಸಂಕೇತವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇನ್ನು ಪ್ರೇಮಿಗಳಿಗೆ ಫೆಬ್ರವರಿ 14 ಹಬ್ಬದ ದಿನವಾಗಿದೆ. ಪ್ರತಿಯೊಂದು ನಗು, ಸಂತಸದ ಕ್ಷಣದ ಹಿಂದೆ ಪ್ರೀತಿ ಇರುತ್ತದೆ. ಅಂದಹಾಗೆ Valentine’s Day ದಿನದಂದು ನೀವು ನಿಮ್ಮ ಪ್ರೀತಿಪಾತ್ರದಿಗೆ ಶುಭ ಕೋರಲು ಬಯಸಿದರೆ ಅಥವಾ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲು ಇಲ್ಲಿವೆ ನೋಡಿ ಕೆಲವು ಪ್ರೇಮಿಗಳ ದಿನದ ಮೆಸೇಜ್, ಫೋಟೋ ಮತ್ತು ಸ್ಟಿಕರ್ ಶುಭಾಶಯಗಳು.

ಪ್ರೇಮಿಗಳ ದಿನದ ಶುಭಾಶಯದ ಮೆಸೆಜ್‌ಗಳು 2026

ನಿನ್ನ ಪ್ರೀತಿ ನನ್ನ ಜೀವನದ ಅತ್ಯಂತ ಸುಂದರ ಉಡುಗೊರೆ. ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು

ನಿನ್ನೊಂದಿಗಿರುವ ಪ್ರತಿಯೊಂದು ಕ್ಷಣವೂ ನನ್ನ ಹೃದಯದ ಖಜಾನೆ. ಪ್ರೇಮಿಗಳ ದಿನದ ಶುಭಾಶಯಗಳು

ಪ್ರೀತಿ ಮಾತಿನಲ್ಲಿ ಅಲ್ಲ, ಮನಸ್ಸಿನ ಆಳದಲ್ಲಿ ಇರುತ್ತದೆ. ಅದನ್ನು ನನಗೆ ಕಲಿಸಿದ್ದೇ ನೀನು. ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು.

ನನ್ನ ಕನಸುಗಳಿಗೆ ಬಣ್ಣ ತುಂಬಿದ ನಿನಗೆ ಹಾಗೂ ನಿನ್ನ ಹೃದಯಕ್ಕೆ ಪ್ರೇಮಿಗಳ ದಿನದ ಹೃದಯಪೂರ್ವಕ ಶುಭಾಶಯಗಳು.

ನಿನ್ನ ಮಾತುಗಳಲ್ಲಿ ನನಗೆ ನೆಮ್ಮದಿ ಸಿಗುತ್ತದೆ. ನಿನ್ನ ಪ್ರೀತಿ ಸದಾ ನನ್ನೊಂದಿಗೆ ಇರಲಿ. ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು.

ನನ್ನ ಹೃದಯದ ಪ್ರತಿಯೊಂದು ಜಾಗದಲ್ಲಿ ನೀನೇ ತುಂಬಿರುವೇ. ನಿನಗೆ ಪ್ರೇಮಿಗಳ ದಿನದ ಪ್ರೀತಿಯ ಶುಭಾಶಯಗಳು

ನೀನು ನನ್ನ ಬದುಕಿನ ಅರ್ಥ. ನಿನಗೆ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು

ನಿನ್ನ ನಗು ನನ್ನ ದಿನವನ್ನು ಸುಂದರಗೊಳಿಸುತ್ತದೆ. ನನು ಸದಾ ನಗುತ್ತಿರು. ನಿನಗೆ ಪ್ರೇಮಿಗಳ ದಿನದ ಪ್ರೀತಿಯ ಶುಭಾಶಯಗಳು

ನನ್ನ ಹೃದಯದಲ್ಲಿ ಸದಾ ನಿನಗೊಂದು ಭದ್ರ ಸ್ಥಾನ ಇದೆ. ಅದನ್ನು ಮತ್ತೆ ಯಾರೂ ತುಂಬಲಾರರು. ಪ್ರೇಮಿಗಳ ದಿನದ ಪ್ರೀತಿಯ ಶುಭಾಶಯಗಳು

ನಿನ್ನೊಂದಿಗಿನ ಪಯಣವೇ ನನ್ನ ಕನಸು. ಅದು ಸದಾ ಮುಂದುವರಿಯಲಿ ಎಂದು ಬಯಸುವೆ. ಪ್ರೇಮಿಗಳ ದಿನದ ಪ್ರೀತಿಯ ಶುಭಾಶಯಗಳು

ನಿನ್ನೊಂದಿಗೆ ಕಳೆದ ಕ್ಷಣಗಳು ಅಮೂಲ್ಯ. ಅವು ಎಂದಿಗೂ ಮರೆಯಲಾಗದವು. ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು.

Valentine’s Day

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo