Tecno Pova Curve 2 5G ಭಾರತದಲ್ಲಿ ಬಿಡುಗಡೆ! ಬರೋಬ್ಬರಿ 8,000mAh ಬ್ಯಾಟರಿ ಇರುವ ಈ ಫೋನ್‌ ಬೆಲೆ ಎಷ್ಟು?

HIGHLIGHTS

ಟೆಕ್ನೋ ಸಂಸ್ಥೆಯ ಈ ಮೊಬೈಲ್‌ 16GB ವರೆಗೆ ವರ್ಚುವಲ್ RAM ಸಪೋರ್ಟ್ ಪಡೆದಿದೆ

ಟೆಕ್ನೋದ ಈ ನೂತನ ಮೊಬೈಲ್‌ Android 16 ಓಎಸ್‌ನಲ್ಲಿ ಕೆಲಸ ಮಾಡಲಿದೆ

ಟೆಕ್ನೋ ಕಂಪನಿಯ ಈ ನೂತನ ಫೋನ್‌ ಫೆ.20 ರಂದು ಮಾರಾಟ ಶುರು ಮಾಡಲಿದೆ

Tecno Pova Curve 2 5G ಭಾರತದಲ್ಲಿ ಬಿಡುಗಡೆ! ಬರೋಬ್ಬರಿ 8,000mAh ಬ್ಯಾಟರಿ ಇರುವ ಈ ಫೋನ್‌ ಬೆಲೆ ಎಷ್ಟು?

ಟೆಕ್ನೋ ಮೊಬೈಲ್ ಬ್ರ್ಯಾಂಡ್ ಇಂದು (ಫೆಬ್ರವರಿ 13 ರಂದು) ಭಾರತದಲ್ಲಿ Tecno Pova Curve 2 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್‌ ಪೋವಾ ಕರ್ವ್ 5G ಮಾಡೆಲ್‌ನ ಉತ್ತರಾಧಿಕಾರಿಯಾಗಿ ಲಗ್ಗೆ ಇಟ್ಟಿದೆ. MediaTek Dimensity 7100 ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿರುವ ಈ ಫೋನ್‌ ಬರೋಬ್ಬರಿ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಹೊಂದಿದೆ. ದೇಶಿಯ ಮಾರುಕಟ್ಟೆಗೆ Tecno Pova Curve 2 5G ಸ್ಮಾರ್ಟ್‌ಫೋನ್ ಮೂರು ಕಲರ್‌ ಆಯ್ಕೆಗಳಲ್ಲಿ ಪ್ರವೇಶ ಮಾಡಿದೆ. ಇನ್ನುಳಿದಂತೆ Tecno Pova Curve 2 5G ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Xiaomi 17 ಮತ್ತು Xiaomi 17 Ultra ಫೋನ್‌ಗಳ ಬೆಲೆ ಲೀಕ್‌! ಬೆಲೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ

Tecno Pova Curve 2 5G ಮೊಬೈಲ್‌ ಬೆಲೆ ಹಾಗೂ ಲಭ್ಯತೆ

Tecno ಕಂಪನಿಯು ಹೊಸದಾಗಿ Tecno Pova Curve 2 5G ಮೊಬೈಲ್‌ ಅನ್ನು ಬಜೆಟ್‌ ದರದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 27,999 ರೂಗಳು ಆಗಿದೆ. ಹಾಗೆಯೇ 8GB + 256GB ವೇರಿಯಂಟ್‌ ಮೊಬೈಲ್‌ 29,999 ರೂಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್‌ ಇದೇ ಫೆಬ್ರವರಿ 20 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಪ್ರಾರಂಭವಾಗುತ್ತದೆ. ಇನ್ನು ಈ ಮೊಬೈಲ್ ಸ್ಟಾರ್ಮ್ ಟೈಟಾನಿಯಂ, ಮೆಲ್ಟಿಂಗ್ ಸಿಲ್ವರ್ ಮತ್ತು ಮಿಸ್ಟಿಕ್ ಪರ್ಪಲ್ ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಆರಂಭಿಕ ಕೊಡುಗೆಯಾಗಿ ಗ್ರಾಹಕರು ಅರ್ಹ ಬ್ಯಾಂಕ್ ರಿಯಾಯಿತಿಗಳೊಂದಿಗೆ ರೂ. 3,000 ವರೆಗಿನ ಡಿಸ್ಕೌಂಟ್‌ ಪಡೆಯಬಹುದು.

Tecno Pova Curve 2 5G

Tecno Pova Curve 2 5G ಮೊಬೈಲ್‌ನ ಫೀಚರ್ಸ್‌

Tecno Pova Curve 2 5G ಮೊಬೈಲ್‌ 144Hz ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡ 6.78 ಇಂಚಿನ ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 1,080 x 2,364 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು 4,500 nits ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ ಡಿಸ್‌ಪ್ಲೇ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿದೆ. ಅಂದಹಾಗೆ ಈ ಫೋನ್‌ MediaTek Dimensity 7100 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಇದರೊಂದಿಗೆ 8GB RAM ಮತ್ತು 256GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಇನ್ನು Tecno Pova Curve 2 5G ಫೋನ್‌ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಜೊತೆಗೆ 45W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 16.4 ಗಂಟೆಗಳ ವೀಡಿಯೊ ಪ್ಲೇಬ್ಯಾಕ್, 35.7 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್, 48.1 ಗಂಟೆಗಳ ಕರೆ ಸಮಯ ಅನ್ನು ನೀಡುತ್ತದೆ ಎಂದು ಟೆಕ್ನೋ ಹೇಳಿಕೊಂಡಿದೆ. ಹಾಗೆಯೇ ಹಿಂಭಾಗದಲ್ಲಿ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದ್ದು, ದ್ವಿತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo