ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ? ಈ ರೀತಿ ಸುಲಭವಾಗಿ ತಿಳಿಯಬಹುದು

HIGHLIGHTS

ಆಧಾರ್ ಕಾರ್ಡ್ ಸೇರಿ ಅನೇಕ ದಾಖಲೆಗಳು ಸಿಕ್ಕಾಪಟ್ಟೆ ಮುಖ್ಯವಾಗಿರುವುದು ನಿಮಗೆಲ್ಲ ಗೊತ್ತಿರುವ ಮಾಹಿತಿಯಾಗಿದೆ.

ನಿಮಗೆ ಅರಿವಿಲ್ಲದೆ ಯಾರಾದರೂ ಸಿಮ್ ಕಾರ್ಡ್ (SIM Card) ಖರೀದಿಸಿ ಬಳಸುತ್ತಿದ್ದರೆ ಅದನ್ನು ಹೇಗೆ ಪತ್ತೆ ಹಚ್ಚುವುದು?

ವಂಚಕರು ಕೇವಲ ಖಾತೆಯನ್ನು ಮಾತ್ರ ಗುರಿಯನ್ನಾಗಿಸದೆ ವ್ಯಯಕ್ತಿಕ ಮಾಹಿತಿಯನ್ನು ಪಡೆಯುವ ಪ್ರಯತ್ನ ಸಹ ಮಾಡುತ್ತಾರೆ.

ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ? ಈ ರೀತಿ ಸುಲಭವಾಗಿ ತಿಳಿಯಬಹುದು

ಇಂದು ಆಧಾರ್ ಕಾರ್ಡ್ ಸೇರಿ ಅನೇಕ ದಾಖಲೆಗಳು ಸಿಕ್ಕಾಪಟ್ಟೆ ಮುಖ್ಯವಾಗಿರುವುದು ನಿಮಗೆಲ್ಲ ಗೊತ್ತಿರುವ ಮಾಹಿತಿಯಾಗಿದೆ. ಹೊಸ ಸಿಮ್ ಕಾರ್ಡ್ (SIM Card) ಪಡೆಯುವುದರಿಂದ ಹಿಡಿದು ಬ್ಯಾಂಕ್, ಖಾತೆ ತೆರೆಯುವುದು ಮತ್ತು ಯಾವುದೇ ಸರ್ಕಾರಿ ಕೆಲಸ ಕಾರ್ಯಗಳಿಗೆ ಆಧಾರ್ ಕಾರ್ಡ್ (Aadhaar Card) ಬಳಕೆಯಾಗುತ್ತಿದೆ. ಆದರೆ ಅನೇಕ ಬಾರಿ ನಮಗೆ ಅರಿವಿದ್ದು ಅಥವಾ ಅರಿವಿಲ್ಲದೆ ದಾಖಲೆಗಳ ಬಳಕೆಯ ಚಾಪವನ್ನು ಅಲ್ಲಲ್ಲಿ ಬಿಡುವುದು ನಾವು ಮಾಡುವ ದೊಡ್ಡ ತಪ್ಪಾಗಿದೆ. ಆದರೆ ಈ ನಮ್ಮ ಚಾಪಗಳು ಅಥವಾ ನಮ್ಮ ದಾಖಲೆಗಳು ವಂಚಕರ ಕೈ ಸೇರಿದರೆ ಬ್ಯಾಂಕ್ ಖಾತೆ ಖಾಲಿ ಆಗೋದರಲ್ಲಿ ಯಾವುದೇ ಸಂದೇಹವಿಲ್ಲ.

Digit.in Survey
✅ Thank you for completing the survey!

ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?

ವಂಚಕರು ಕೇವಲ ಖಾತೆಯನ್ನು ಮಾತ್ರ ಗುರಿಯನ್ನಾಗಿಸದೆ ನಮ್ಮ ವ್ಯಯಕ್ತಿಕ ಮಾಹಿತಿಯನ್ನು ಪಡೆಯುವ ಪ್ರಯತ್ನ ಸಹ ಮಾಡಲಾಗುತ್ತದೆ ಎಂದು ಕೇಂದ್ರ ಸೈಬರ್ ಕ್ರೈಂ ವಿಭಾಗ ರಿಪೋರ್ಟ್ ಸಹ ಮಾಡಿದೆ. ನಿಮಗೆ ನೆನಪಿರಬಹುದು ಕಳೆದ ಕೆಲ ವರ್ಷದಲ್ಲಿ ಅನೇಕ ಸಿನಿ ತಾರೆಯರ ಅರಿವಿಲ್ಲದೆ ಅವರ ಆಧಾರ್ ಬಳಸಿಕೊಂಡು ವಂಚಕರು ಲೋನ್ ಸಹ ಪಡೆಯಲಾಗಿತ್ತು. ಆದ್ದರಿಂದ ನಿಮ್ಮ ಆಧಾರ್ ಬಳಸಿಕೊಂಡು ನಿಮಗೆ ಅರಿವಿಲ್ಲದೆ ಯಾರಾದರೂ ಸಿಮ್ ಕಾರ್ಡ್ (SIM Card) ಖರೀದಿಸಿ ಬಳಸುತ್ತಿದ್ದರೆ ಅದನ್ನು ಹೇಗೆ ಪತ್ತೆ ಹಚ್ಚುವುದು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Also Read: Samsung Galaxy A55 5G ಬೆಲೆ ಕಡಿತ! ಲಿಮಿಟೆಡ್ ಸಮಯಕ್ಕೆ ಈ ಆಫರ್ ಈಗಲೇ ಖರೀದಿಸಿಕೊಳ್ಳಿ!

ಸಂಚಾರ್ ಸಾಥಿ (Sanchar Saathi) ಪೋರ್ಟಲ್‌ನ TAFCOP ಮೂಲಕ ಪತ್ತೆ ಹಚ್ಚಿ:

ಹಂತ 1: ಟೆಲಿಕಾಂ ಇಲಾಖೆಯ (DoT) ಅಧಿಕೃತ ಸರ್ಕಾರಿ ಸಂಚಾರ್ ಸಾಥಿ (Sanchar Saathi) ಪೋರ್ಟಲ್‌ನ TAFCOP ವಿಭಾಗಕ್ಕೆ ಹೋಗಿ.

ಹಂತ 2: ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪೋರ್ಟಲ್‌ನ ಮುಖಪುಟದಲ್ಲಿ ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ.

ಹಂತ 3: ನಂತರ ನಿಮ್ಮ ಮೊಬೈಲ್‌ಗೆ ಬರುವ ಪಾಸ್‌ವರ್ಡ್ (OTP) ಅನ್ನು ಪೋರ್ಟಲ್‌ನಲ್ಲಿ ನಮೂದಿಸಿ ನಿಮ್ಮ ಗುರುತನ್ನು ದೃಢೀಕರಿಸಬೇಕು.

ಹಂತ 4: ಇದರ ಯಶಸ್ವಿ ಪರಿಶೀಲನೆಯ ನಂತರ ನಿಮ್ಮ ಆಧಾರ್ ಐಡಿ ಅಡಿಯಲ್ಲಿ ಬಳಕೆಯಲ್ಲಿರುವ ಎಲ್ಲಾ ಮೊಬೈಲ್ ನಂಬರ್ ಪಟ್ಟಿ ಕಾಣಿಸುತ್ತದೆ.

ಹಂತ 5: ಈ ಪಟ್ಟಿಯಲ್ಲಿ ನಿಮಗೆ ಸೇರದ ಅಥವಾ ನೀವು ಗುರುತಿಸದ ಮೊಬೈಲ್ ನಂಬರ್ಗಳಿದ್ದರೆ ಅವುಗಳನ್ನು “ನನ್ನ ಸಂಖ್ಯೆಯಲ್ಲ” ಎಂದು ಗುರುತಿಸಿ ಪೋರ್ಟಲ್ ಮೂಲಕವೇ ದೂರು ಸಲ್ಲಿಸಿ ಬಂದ್ ಮಾಡಿಸಬಹುದು.

ಇದರಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?

ಇದೊಂದು ಸರಳ ಮತ್ತು ಸುಲಭ ಮಾರ್ಗವಾಗಿದ್ದು ಈ ಪ್ರಕ್ರಿಯೆಯನ್ನು 2 ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪರಿಶೀಲಿಸುವುದು ರೂಢಿ ಮಾಡಿಕೊಳ್ಳಿ. ಇದು ಕೇವಲ 2 ನಿಮಿಷ ತೆಗೆದುಕೊಳ್ಳುತ್ತದೆ. ಅಲ್ಲದೆ ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಸಿಮ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲು ಪ್ರಮುಖ ಕಾರಣವೆಂದರೆ ಸೈಬರ್ ವಂಚನೆ ಮತ್ತು ಗುರುತಿನ ಕಳ್ಳತನದ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸುವುದು.

Also Read: Su From So Movie: ದಾಖಲೆ ಮಟ್ಟದ ಟಿಕೆಟ್ ಸೇಲ್ ಮಾಡುತ್ತಿರುವ ಪ್ರೇತ, ಪ್ರೀತಿ ಮತ್ತು ನಗೆಯುಳ್ಳ ಜಬರ್ದಸ್ತ್ ಮೂವಿ!

ಅನೈತಿಕ ವ್ಯಕ್ತಿಗಳು ನಿಮ್ಮ ಆಧಾರ್ ವಿವರಗಳನ್ನು ಸಾಮಾನ್ಯವಾಗಿ ವಿವಿಧ ವಂಚನೆಗಳ ಮೂಲಕ ಪಡೆದು ನಿಮ್ಮ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲು ಬಳಸಬಹುದು. ಈ ಮೋಸದಿಂದ ಪಡೆದ ಸಿಮ್‌ಗಳನ್ನು ನಂತರ ವಂಚನೆಗಳು, ಫಿಶಿಂಗ್ ಮತ್ತು ಇತರ ಕ್ರಿಮಿನಲ್ ಚಟುವಟಿಕೆಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo