ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿರುವ HMD Vibe 2 5G ಮೊಬೈಲ್‌ಗೂ ಈಗ ಬಿಗ್ ಡಿಸ್ಕೌಂಟ್‌!

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ HMD ವೈಬ್‌ 2 5G ಫೋನಿಗೆ ಆಕರ್ಷಕ ಆಫರ್‌

HMD ವೈಬ್‌ 2 5G ಮೊಬೈಲ್‌ 6,000mAh ಬ್ಯಾಟರಿ ಸೌಲಭ್ಯ ಹೊಂದಿದೆ

HMD ವೈಬ್‌ 2 5G ಸ್ಮಾರ್ಟ್‌ಫೋನ್‌ ಮೂರು ಆಕರ್ಷಕ ಕಲರ್‌ನಲ್ಲಿ ಲಭ್ಯ

ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿರುವ HMD Vibe 2 5G ಮೊಬೈಲ್‌ಗೂ ಈಗ ಬಿಗ್ ಡಿಸ್ಕೌಂಟ್‌!

Flipkart ಆಯೋಜಿಸಿರುವ ವಿಶೇಷ ಸೇಲ್‌ನಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಆ ಪೈಕಿ HMD ಕಂಪನಿಯ HMD Vibe 2 5G ಮೊಬೈಲ್‌ ಸ್ಪೆಷಲ್ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್‌ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ HMD ವೈಬ್‌ 2 5G ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಡಿಸ್ಕೌಂಟ್‌ ಬೆಲೆಯಲ್ಲಿ Vivo T5 Lite ಮೊಬೈಲ್‌ ಖರೀದಿಸಲು ಈ ಆಫರ್‌ ಬೊಂಬಾಟ್‌!

HMD Vibe 2 5G ಈಗ ಡಿಸ್ಕೌಂಟ್‌ನಲ್ಲಿ ಲಭ್ಯ

ಕಡಿಮೆ ಬೆಲೆ ಹಾಗೂ ಆಕರ್ಷಕ ಫೀಚರ್ಸ್‌ ಮೂಲಕ ಗ್ರಾಹಕರ ಗಮನ ಸೆಳೆದಿರುವ HMD ವೈಬ್‌ 2 5G ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೊಬೈಲ್‌ 4GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 19,999 ರೂ.ಗಳು ಆಗಿದ್ದು, ಆದರೆ ಆಫರ್‌ನಲ್ಲಿ ಪ್ರಸ್ತುತ ಈ ಮೊಬೈಲ್‌ ಬ್ಯಾಂಕ್‌ ಆಫರ್‌ಗಳ ಮೂಲಕ 12,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಅನ್ನು ಗ್ರಾಹಕರು ಕಾಸ್ಮಿಕ್ ಲ್ಯಾವೆಂಡರ್, ನಾರ್ಡಿಕ್ ಬ್ಲೂ ಮತ್ತು ಪೀಚ್ ಪಿಂಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದು.

HMD Vibe 2 5G

HMD ವೈಬ್‌ 2 5G ಫೀಚರ್ಸ್‌ ಹೀಗಿವೆ

HMD ವೈಬ್‌ 2 5G ಮೊಬೈಲ್ 6.7 ಇಂಚಿನ HD+ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್‌ 720×1,600 ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಈ ಮೊಬೈಲ್‌ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM + 64GB ಹಾಗೂ 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

HMD ವೈಬ್‌ 2 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಆಗಿದ್ದು, ಹಾಗೆಯೇ ಇದರ ಸೆಕೆಂಡರಿ ಬೇಸಿಕ್ ಸೆನ್ಸಾರ್‌ ಸೌಲಭ್ಯದಲ್ಲಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 18W ಚಾರ್ಜಿಂಗ್‌ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile