ಭಾರತದಲ್ಲಿ Oppo Find X10 Pro Max ಸ್ಮಾರ್ಟ್‌ಫೋನ್ ಲಾಂಚ್! ಅಬ್ಬಬ್ಬಾ ಟ್ರಿಪಲ್ 200MP ಕ್ಯಾಮೆರಾ ಸೌಲಭ್ಯ
ಭಾರತದಲ್ಲಿ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್ ಬಿಡುಗಡೆ
ಒಪ್ಪೋ ಸಂಸ್ಥೆಯ ಈ ಫೋನ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ
ಒಪ್ಪೋದ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9600 ಪ್ರೊ ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ
ಒಪ್ಪೋ ಮೊಬೈಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ Oppo Find X10 Pro Max ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೈ ಎಂಡ್ ಮಾದರಿಯಲ್ಲಿ ಇರುವ ಈ ನೂತನ ಸ್ಮಾರ್ಟ್‌ಫೋನ್ MediaTek Dimensity 9600 Pro ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಫೋನ್ ಟ್ರಿಪಲ್ 200MP ಕ್ಯಾಮೆರಾ ಸೆಟ್‌ಅಪ್ ಸೌಲಭ್ಯ ಒಳಗೊಂಡಿದೆ. ಇದರ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿರುವುದು ಆಕರ್ಷಕ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಎಂಟ್ರಿ ಕೊಟ್ಟಿದೆ. ಹಾಗಾದರೆ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಡಿಸ್ಕೌಂಟ್ ಬೆಲೆಯಲ್ಲಿ Vivo T5 Lite ಮೊಬೈಲ್ ಖರೀದಿಸಲು ಈ ಆಫರ್ ಬೊಂಬಾಟ್!
Oppo Find X10 Pro Max ಬೆಲೆ ಹಾಗೂ ಲಭ್ಯತೆ
ಮಾರುಕಟ್ಟೆ ಪ್ರವೇಶಿಸಿರುವ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್ ಫ್ಲ್ಯಾಗ್‌ಶಿಪ್ ದರದ ಪ್ರೈಸ್‌ಟ್ಯಾಗ್ ಪಡೆದಿದ್ದು ಈ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್‌ನ 12GB + 512GB ಸ್ಟೋರೇಜ್ ವೇರಿಯಂಟ್ ಬೆಲೆ 1,99,999 ರೂ.ಗಳು ಆಗಿದೆ. ಅಂದಹಾಗೆ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್ ಲೂನಾ ವೈಟ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಈ ಹೊಸ ಸ್ಮಾರ್ಟ್‌ಫೋನ್ ಅಕ್ಟೋಬರ್ 29 ರಂದು ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಗ್ರಾಹಕರು ಒಪ್ಪೋ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು.

ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಫೀಚರ್ಸ್ ಹೀಗಿವೆ
ಹೊಸ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೊಬೈಲ್ 6.78 ಇಂಚಿನ LTPO AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 144Hz ವರೆಗಿನ ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಡಿಸ್‌ಪ್ಲೇ 3,600 ನಿಟ್ಸ್ ಸೌಲಭ್ಯ ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇಯನ್ನು ಗೀರುಗಳಿಂದ ರಕ್ಷಿಸಲು ಕ್ರಿಸ್ಟಲ್ ಗಾರ್ಡ್ ಗ್ಲಾಸ್ ಒದಗಿಸಲಾಗಿದೆ. ಈ ಫೋನ್ MediaTek Dimensity 9600 Pro ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿದ್ದು, Android 17 ಆಧಾರಿತ ColorOS 17 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಪಡೆದಿದೆ.
ಹಾಗೆಯೇ ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಅವುಗಳು ಕ್ರಮವಾಗಿ 200MP ಪ್ರೈಮರಿ ಸೆನ್ಸರ್, 200MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 200MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 50MP ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
