Motorola Edge 60 Stylus ಬೆಲೆಯಲ್ಲಿ ದಿಢೀರ್ ಕುಸಿತ! ಬಜೆಟ್ ಬೆಲೆಯಲ್ಲಿ ಖರೀದಿಸಲು ಒಳ್ಳೆಯ ಚಾನ್ಸ್
ಈ ಫೋನಿಗೆ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಭರ್ಜರಿ ಡಿಸ್ಕೌಂಟ್
ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸಬಹುದು
ಈ ಮೊಬೈಲ್ ಮುಂಭಾಗದಲ್ಲಿ 32MP ಸೆನ್ಸಾರ್‌ನ ಕ್ಯಾಮೆರಾ ಸೌಲಭ್ಯ ಹೊಂದಿದೆ
ಸ್ಟೈಲಿಶ್ ಲುಕ್‌ನೊಂದಿಗೆ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ Motorola Edge 60 Stylus ಮೊಬೈಲ್ ಈಗ ಭಾರೀ ಬೆಲೆ ಇಳಿಕೆ ಪಡೆದಿದೆ. ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮೊಟೊರೊಲಾ ಕಂಪನಿಯ Motorola Edge 60 Stylus ಸ್ಮಾರ್ಟ್‌ಫೋನ್ ಸಖತ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕೊಡುಗೆಗಳ ಮೂಲಕ ಗ್ರಾಹಕರು ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಬಹುದಾಗಿದೆ. ಅಂದಹಾಗೆ ಈ ಮೊಬೈಲ್ ಕ್ವಾಲ್ಕಮ್‌ನ Snapdragon 7s Gen 2 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದ್ದು, ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನುಳಿದಂತೆ Amazon ವೆಬ್‌ಸೈಟ್‌ನಲ್ಲಿ Motorola Edge 60 Stylus ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Valentine’s Day Wishes: ಪ್ರೇಮಿಗಳ ದಿನದಂದು ಶುಭ ಕೋರಲು ಇಲ್ಲಿವೆ ಬೆಸ್ಟ್ ಮೆಸೇಜ್, ಫೋಟೋ ಶುಭಾಶಯಗಳು!
Motorola Edge 60 Stylus ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ
Motorola Edge 60 Stylus ಮೊಬೈಲ್ ಇದೀಗ Amazon ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಬೊಂಬಾಟ್ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB + 256GB ವೇರಿಯಂಟ್ 28,999 ರೂಗಳ ಬೆಲೆಯನ್ನು ಹೊಂದಿದ್ದು, ಆದರೆ ಪ್ರಸ್ತುತ ಅಮೆಜಾನ್‌ನಲ್ಲಿ 18,630 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಈ ಮೊಬೈಲ್ ಖರೀದಿಸುವ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಹಾಗೂ ಆಕರ್ಷಕ EMI ಆಯ್ಕೆಗಳನ್ನು ಸಹ ಪಡೆಯಬಹುದು. ಇನ್ನು ಈ ಮೊಬೈಲ್ ಎರಡು ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Motorola Edge 60 Stylus ಮೊಬೈಲ್‌ನ ಪ್ರಮುಖ ಫೀಚರ್ಸ್
Motorola Edge 60 Stylus ಮೊಬೈಲ್ 6.7 ಇಂಚಿನ pOLED ಪ್ಯಾನೆಲ್ ಡಿಸ್‌ಪ್ಲೇ ಅನ್ನು ಒಳಗೊಂಡಿರುವ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 3,000 nits ವರೆಗೆ ಗರಿಷ್ಠ ಬ್ರೈಟ್ನೆಸ್ ಒದಗಿಸುವ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ 1220 x 2712 ಪಿಕ್ಸೆಲ್‌ಗಳು ರೆಸಲ್ಯೂಶನ್ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ. ಅಂದಹಾಗೆ ಈ ಮೊಬೈಲ್ Snapdragon 7s Gen 2 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ 8GB RAM + 256GB ವೇರಿಯಂಟ್ ಸೌಲಭ್ಯವನ್ನು ಒಳಗೊಂಡಿದೆ.
ಅದೇ ರೀತಿ Motorola Edge 60 Stylus ಮೊಬೈಲ್ LED ಫ್ಲ್ಯಾಶ್ ಜೊತೆಗೆ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದ್ದು, ದ್ವಿತೀಯ ಕ್ಯಾಮೆರಾವು 13MP ಅಲ್ಟ್ರಾ ವೈಡ್ ಸೆನ್ಸಾರ್ ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕೂಡಾ ಈ ಮೊಬೈಲ್ 32MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile