BenQ ನಿಂದ ಭಾರತದಲ್ಲಿ ಎರಡು ಹೊಸ ಮಾನಿಟರ್‌ಗಳ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್‌ ನೋಡಿ

HIGHLIGHTS

BenQ ಭಾರತದಲ್ಲಿ ಎರಡು ಹೊಸ ಮಾನಿಟರ್‌ ಪರಿಚಯಿಸಿದೆ

ಹೊಸ ಎರಡು ಮಾನಿಟರ್‌ಗಳು 144Hz ನಲ್ಲಿ ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿವೆ

ಈ ಎರಡು ಮಾನಿಟರ್‌ಗಳು ವಿಭಿನ್ನ ಕಲರ್‌ ಮೋಡ್‌ ಆಯ್ಕೆಗಳನ್ನು ಒಳಗೊಂಡಿವೆ

BenQ ನಿಂದ ಭಾರತದಲ್ಲಿ ಎರಡು ಹೊಸ ಮಾನಿಟರ್‌ಗಳ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್‌ ನೋಡಿ

BenQ ಕಂಪನಿಯು ಭಾರತದಲ್ಲಿ ಇಂದು (ಫೆಬ್ರವರಿ 14 ರಂದು) ಎರಡು ಹೊಸ GW90TC ಸರಣಿಯ ಮಾನಿಟರ್‌ಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. BenQ ಕಂಪನಿಯು ಬಿಡುಗಡೆ ಮಾಡಿರುವ ಹೊಸ GW2490TC ಮತ್ತು GW2790TC ಹೆಸರಿನ ಮಾನಿಟರ್‌ಗಳು 144Hz ನಲ್ಲಿ ರಿಫ್ರೆಶ್ ರೇಟ್‌ ಪಡೆದಿರುವ ಜೊತೆಗೆ LED ಬ್ಯಾಕ್‌ಲೈಟ್‌ ತಂತ್ರಜ್ಞಾನ ಪಡೆದುಕೊಂಡಿವೆ. ಇನ್ನು ಹೊಸ GW90TC ಸರಣಿಯ ಮಾನಿಟರ್‌ಗಳ ವಿಭಿನ್ನ ಕಲರ್‌ ಮೋಡ್‌ಗಳನ್ನು ಸಪೋರ್ಟ್ ಮಾಡುತ್ತವೆ ಅಲ್ಲದೇ ಬಿಲ್ಟ್‌ಇನ್‌ ಸ್ಪೀಕರ್‌ಗಳನ್ನು ಒಳಗೊಂಡಿವೆ. ಇನ್ನುಳಿದಂತೆ BenQ ಕಂಪನಿ GW2490TC ಮತ್ತು GW2790TC ಮಾನಿಟರ್‌ಗಳ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vi Plans: ಕಡಿಮೆ ಬೆಲೆಯ ಈ ಪ್ಲಾನ್‌ಗಳಲ್ಲಿ Unlimited Data ಜೊತೆಗೆ ಜಬರ್ದಸ್ತ್‌ ವ್ಯಾಲಿಡಿಟಿ

BenQ ಸಂಸ್ಥೆಯ ಹೊಸ ಮಾನಿಟರ್‌ಗಳ ಬೆಲೆ ಹಾಗೂ ಲಭ್ಯತೆ

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ BenQ ಸಂಸ್ಥೆಯ GW2490TC ಮತ್ತು GW2790TC ಹೆಸರಿನ ಮಾನಿಟರ್‌ಗಳು ಭಾರತದಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿವೆ. ಕಂಪನಿಯ GW2490TC ಮಾನಿಟರ್ 12,750 ರೂಗಳ ಬೆಲೆಯನ್ನು ಪಡೆದಿದೆ. ಅದೇ ರೀತಿ GW2790TC ಮಾನಿಟರ್‌ 14,990 ರೂಗಳ ದರವನ್ನು ಹೊಂದಿದೆ. ಅಂದಹಾಗೆ BenQ ಸಂಸ್ಥೆಯ ಈ ಎರಡೂ ವೇರಿಯಂಟ್‌ಗಳು ಈಗ ಅಧಿಕೃತ ರಿಟೇಲ್‌ ಸ್ಟೋರ್‌ ಹಾಗೂ ಪ್ರಮುಖ ಇ-ಕಾಮರ್ಸ್ ತಾಣಗಳ ಮೂಲಕ ಖರೀದಿಗೆ ಲಭ್ಯವಿದೆ.

BenQ

BenQ GW90TC ಸರಣಿಯ ಮಾನಿಟರ್‌ಫೀಚರ್ಸ್‌

BenQ ಕಂಪನಿಯ GW90TC ಸರಣಿಯ ಮಾನಿಟರ್‌ಗಳು 144Hz ರಿಫ್ರೆಶ್ ರೇಟ್‌ ಜೊತೆಗೆ 1,080×1,920 ಪಿಕ್ಸೆಲ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಅಲ್ಲದೇ ಈ ಎರಡು ಮಾನಿಟರ್‌ಗಳು LED ಬ್ಯಾಕ್‌ಲೈಟ್ ತಂತ್ರಜ್ಞಾನ ಒಳಗೊಂಡಿದೆ. ಇನ್ನು BenQ GW2790TC ಮಾನಿಟರ್ 27 ಇಂಚಿನ ಪ್ಯಾನೆಲ್ ಪಡೆದಿದ್ದು ಜೊತೆಗೆ ಇದು 300 nits ವಿಶಿಷ್ಟ ಬ್ರೈಟ್ನೆಸ್‌ ಬೆಂಬಲ ಹೊಂದಿದೆ. ಹಾಗೆಯೇ BenQ GW2490TC ಮಾನಿಟರ್‌ 23.8 ಇಂಚಿನ ಪ್ಯಾನೆಲ್ ಜೊತೆಗೆ ಇದು 250 nits ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿದೆ. ಈ ಮಾನಿಟರ್‌ಗಳು AMD ಫ್ರೀಸಿಂಕ್ ಸಪೋರ್ಟ್‌ ಅನ್ನು ಹೊಂದಿವೆ. ಅಲ್ಲದೇ ಲೋ ಬ್ಲೂ ಲೈಟ್‌ ಮತ್ತು ವಿಷುಯಲ್ ಆಪ್ಟಿಮೈಸರ್ ಕಣ್ಣಿನ ಆರೈಕೆ ತಂತ್ರಜ್ಞಾನಗಳನ್ನು ನೀಡುತ್ತವೆ.

BenQ ಕಂಪನಿಯ ಮಾನಿಟರ್‌ಗಳು ಉತ್ತಮ ಆಡಿಯೋ ಸಪೋರ್ಟ್‌ ಹಾಗೂ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿವೆ. ಇವು ಎರಡೂ ಡ್ಯುಯಲ್ 2W ಬಿಲ್ಟ್-ಇನ್ ಸ್ಪೀಕರ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್‌ ಸೌಲಭ್ಯ ಪಡೆದುಕೊಂಡಿವೆ. ಇನ್ನು ಕನೆಕ್ಟಿವಿಟಿಗಳಲ್ಲಿ HDMI 1.4 ಪೋರ್ಟ್, ಒಂದು ಡಿಸ್‌ಪ್ಲೇ ಪೋರ್ಟ್ 1.2, ಮತ್ತು 20W ಪವರ್ ಡೆಲಿವರಿ, ಡಿಸ್‌ಪ್ಲೇ ಪೋರ್ಟ್ ಆಲ್ಟ್ ಮೋಡ್ ಮತ್ತು ಡೇಟಾ ಟ್ರಾನ್ಸ್ಫರ್ ಸಪೋರ್ಟ್‌ ಮಾಡುವ USB ಟೈಪ್-ಸಿ ಪೋರ್ಟ್ ಸೇರಿವೆ. ಹಾಗೆಯೇ ಈ ಎರಡೂ ಮಾನಿಟರ್‌ಗಳು ಸ್ಟ್ಯಾಂಡರ್ಡ್, ಗೇಮ್, ಕೇರ್ ಮೋಡ್ ಮತ್ತು ಸಿನಿಮಾದಂತಹ ಭಿನ್ನ ಕಲರ್‌ ಮೋಡ್‌ಗಳ ಆಯ್ಕೆಯನ್ನು ಬೆಂಬಲಿಸುತ್ತವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo