Xiaomi 17 Ultra ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಚೀನಾದಲ್ಲಿ ಬಿಡುಗಡೆ! ಬೆಲೆ ಮತ್ತು ವಿಶೇಷಣಗಳೇನು?
Xiaomi 17 Ultra ಚೀನಾದಲ್ಲಿ ನೆನ್ನೆ ಅಂದ್ರೆ 25ನೇ ಡಿಸೆಂಬರ್ 2025 ರಂದು ಅಧಿಕೃತವಾಗಿ ಲಾಂಚ್ ಮಾಡಿದೆ.
Xiaomi 17 Ultra ಸ್ಮಾರ್ಟ್ಫೋನ್ ಅತ್ಯಂತ ವೇಗದ ಹಾರ್ಡ್ವೇರ್ ಮತ್ತು ಹೊಸ ಎಐ (AI) ತಂತ್ರಜ್ಞಾನವನ್ನು ಬಳಸಲಾಗಿದೆ.
ಶಿಯೋಮಿ ಕಂಪನಿಯು ತನ್ನ ಅತ್ಯಾಧುನಿಕ ಫೋನ್ Xiaomi 17 Ultra ಅನ್ನು ತನ್ನ ತಾಯ್ನಡಾದ ಚೀನಾದಲ್ಲಿ ನೆನ್ನೆ ಅಂದ್ರೆ 25ನೇ ಡಿಸೆಂಬರ್ 2025 ರಂದು ಅಧಿಕೃತವಾಗಿ ಲಾಂಚ್ ಮಾಡಿದೆ. ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸುವುದು ಖಂಡಿತ. ತಂತ್ರಜ್ಞಾನ ಪ್ರಿಯರು ಮತ್ತು ಪ್ರೊಫೆಷನಲ್ ಫೋಟೋಗ್ರಾಫರ್ಗಳಿಗಾಗಿ ಈ ಫೋನ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. Xiaomi 17 Ultra ಸ್ಮಾರ್ಟ್ಫೋನ್ ಅತ್ಯಂತ ವೇಗದ ಹಾರ್ಡ್ವೇರ್ ಮತ್ತು ಹೊಸ ಎಐ (AI) ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಮೂಲಕ ಶಿಯೋಮಿ ಕಂಪನಿಯು ಮೊಬೈಲ್ ಫೋನ್ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ.
SurveyAlso Read: ಅಮೆಜಾನ್‌ನಲ್ಲಿ ಇಂದು 43 ಇಂಚಿನ 4K QLED Google Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
Xiaomi 17 Ultra ಅದ್ಭುತ ಕ್ಯಾಮೆರಾ ಮತ್ತು ಸೂಪರ್ ಡಿಸ್ಪ್ಲೇ:
ಈ ಫೋನ್‌ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದರ ನಾಲ್ಕು ಕ್ಯಾಮೆರಾಗಳ ಸೆಟಪ್. ಇದನ್ನು ಪ್ರಸಿದ್ಧ ‘ಲೈಕಾ’ (Leica) ಕಂಪನಿಯ ಜೊತೆ ಸೇರಿ ತಯಾರಿಸಲಾಗಿದೆ. ಇದರಲ್ಲಿ 1-ಇಂಚಿನ ಪ್ರೈಮರಿ ಸೆನ್ಸಾರ್ ಇದ್ದು ಕಡಿಮೆ ಬೆಳಕಿನಲ್ಲೂ ಫೋಟೋಗಳು ಫುಲ್ ಕ್ಲಾರಿಟಿಯಾಗಿ ಬರುತ್ತವೆ. ಜೊತೆಗೆ ಇದರಲ್ಲಿರುವ ಪೆರಿಸ್ಕೋಪ್ ಲೆನ್ಸ್ ಮೂಲಕ ನೀವು 120x ವರೆಗೆ ಜೂಮ್ ಮಾಡಬಹುದು ಅಂದರೆ ತುಂಬಾ ದೂರದಲ್ಲಿರುವ ವಸ್ತುಗಳನ್ನು ಕೂಡಿಸಿ ಸ್ಪಷ್ಟವಾಗಿ ಫೋಟೋ ತೆಗೆಯಬಹುದು. ಇನ್ನು ಇದರ 6.73 ಇಂಚಿನ ಅಮೋಲೆಡ್ (AMOLED) ಡಿಸ್ಪ್ಲೇ ಸಖತ್ ಬ್ರೈಟ್ ಆಗಿದ್ದು ವಿಡಿಯೋ ನೋಡುವ ಅನುಭವ ಅದ್ಭುತವಾಗಿದೆ.
ವೇಗದ ಪರ್ಫಾರ್ಮೆನ್ಸ್ ಮತ್ತು ಸೂಪರ್ ಫಾಸ್ಟ್ ಚಾರ್ಜಿಂಗ್:
ಫೋನ್ ವೇಗವಾಗಿ ಕೆಲಸ ಮಾಡಲು ಇತ್ತೀಚಿನ ಸ್ನ್ಯಾಪ್ಡ್ರಾಗನ್ 8 ಜೆನ್ 5 ಪ್ರೊಸೆಸರ್ ಹಾಕಲಾಗಿದೆ. 16GB RAM ಮತ್ತು 1TB ಸ್ಟೋರೇಜ್ ಫೋನ್ ಹ್ಯಾಂಗ್ ಆಗುವ ಮಾತೆ ಇಲ್ಲ. ಬ್ಯಾಟರಿ ವಿಚಾರಕ್ಕೆ ಬಂದರೆ ಇದರಲ್ಲಿ 5,500mAh ದೊಡ್ಡ ಬ್ಯಾಟರಿ ಇದೆ. ವಿಶೇಷ ಏನೆಂದರೆ ಇದು 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ ಅಂದರೆ ಕೇವಲ 20 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ನಿಮ್ಮ ಫೋನ್ ಫುಲ್ ಚಾರ್ಜ್ ಆಗುತ್ತದೆ! ಇದರಲ್ಲಿ ಹೊಸ ‘ಹೈಪರ್ ಓಎಸ್ 2.5’ (HyperOS 2.5) ಫೋನ್ ಬಳಕೆ ತುಂಬಾ ಸುಲಭ ಮತ್ತು ಸ್ಮೂತ್ ಆಗಿರುತ್ತದೆ.
ಬೆಲೆ ಮತ್ತು ಲಭ್ಯತೆ ಎಷ್ಟು?
ಬೆಲೆಯ ಬಗ್ಗೆ ಹೇಳುವುದಾದರೆ ಚೀನಾದಲ್ಲಿ ಇದರ ಆರಂಭಿಕ ಬೆಲೆ 6,999 ಯುವಾನ್ (ಭಾರತದಲ್ಲಿ ಸುಮಾರು ₹82,500 ರೂಗಳು) ಆಗಿದೆ. ಅಲ್ಲದೆ ಇದರ ಇನ್ನು ಹೆಚ್ಚು ಸ್ಟೋರೇಜ್ ಇರುವ ಟೈಟಾನಿಯಂ ಎಡಿಷನ್ ಬೆಲೆ ಸುಮಾರು ₹1,00,000 ಆಗಬಹುದು. ಸದ್ಯಕ್ಕೆ ಇದು ಚೀನಾದಲ್ಲಿ ಮಾತ್ರ ಲಭ್ಯವಿದ್ದು ಮುಂದಿನ ವರ್ಷ ಅಂದರೆ 2026 ಆರಂಭದ ವೇಳೆಗೆ ಭಾರತದ ಮಾರುಕಟ್ಟೆಗೂ ಬರುವ ನಿರೀಕ್ಷೆ ಇದೆ. ಕೊನೆಯದಾಗಿ ಬೇರೆ ಕಂಪನಿಗಳ ಹೊಲಿಕೆಯಲ್ಲಿ ದೊಡ್ಡ ಫೋನ್‌ಗಳಿಗೆ ಹೆಚ್ಚಿನ ಬೆಲೆ ನೀಡುವ ಫೀಚರ್ಗಳನ್ನು ಶಿಯೋಮಿ ಕಡಿಮೆ ಬೆಲೆಗೆ ನೀಡುತ್ತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile