Upcoming Phones Nov-2025: ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ OnePlus, iQOO, OPPO ಮತ್ತು Lava ಸ್ಮಾರ್ಟ್‌ಫೋನ್‌ಗಳು!
ನೀವೊಂದು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಕೊಂಚ ಸಮಯ ಕಾಯಿರಿ.
ಭಾರತದ ಮೊಬೈಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲು ಅನೇಕ ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಸಜ್ಜಾಗಿವೆ.
ಮುಂದಿನ ತಿಂಗಳು ಬಿಡುಗಡೆಯಾಗಲಿರುವ OnePlus, Vivo, Realme, iQOO ಮತ್ತು OPPO ಸ್ಮಾರ್ಟ್‌ಫೋನ್‌ಗಳು.
Upcoming Phones Nov-2025: ನೀವೊಂದು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಭಾರತದ ಮೊಬೈಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲು ಅನೇಕ ಪ್ರೀಮಿಯಂ ಫೀಚರ್ಗಳೊಂದಿಗೆ ಸ್ಮಾರ್ಟ್ಫೋನ್ಗಳು ಸಜ್ಜಾಗಿವೆ. ಪ್ರಸ್ತುತ ಈ ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಕೆಲವೊಂದು ಸ್ಮಾರ್ಟ್ಫೋನ್ ಬ್ರಾಂಡ್ಗಳು ಕೆಲವು ಪ್ರಮುಖ ಮತ್ತು ವಿಶೇಷ ಮೊಬೈಲ್‌ಗಳ ಖಚಿತ ದಿನಾಂಕ ಮತ್ತು ಅವುಗಳ ವಿಶೇಷತೆಗಳನ್ನು ಇಲ್ಲಿ ಕಾಣಬಹುದು. ಈ ಲೇಖನದಲ್ಲಿ ನಿಮಗೆ OnePlus 15, Motorola G67 Power, iQOO 15, Lava Agni 4, Oppo Find X9 Series ಮತ್ತು Realme GT 8 Pro ಕಂಪನಿಗಳ ಬಿಡುಗಡೆ ಡೇಟ್ ಮತ್ತು ಒಂದಿಷ್ಟು ಫೀಚರ್ಗಳನ್ನು ಈಗಾಗಲೇ ಕಂಪನಿಗಳು ಕಂಫಾರ್ಮ್ ಮಾಡಿವೆ. ಹಾಗಾದ್ರೆ ಇವುಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
SurveyUpcoming Phones Nov 2025 – OnePlus 15
ಒನ್‌ಪ್ಲಾಸ್‌ನ ಈ ಹೊಸ ಫ್ಲಾಗ್‌ಶಿಪ್ ಫೋನ್ ಹೊಸ ತಲೆಮಾರಿನ ಅತ್ಯಂತ ವೇಗದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್ ಹೊಂದಿದೆ. ಇದರ ಮತ್ತೊಂದು ಆಕರ್ಷಣೆ ಇದರ ಭಾವಚಿತ್ರ. ಇದು 7300mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, ಅದನ್ನು ವೇಗವಾಗಿ ಚಾರ್ಜ್ ಮಾಡಲು 120W ವೇಗದ ಚಾರ್ಜಿಂಗ್ ಬೆಂಬಲವಿದೆ. ಫೋನ್‌ನ ಡಿಪ್ಲೆ 6.78 ಇಂಚಿನ 165Hz ಅತಿವೇಗದ AMOLED ಸ್ಕ್ರೀನ್ ಹೊಂದಿದ್ದು ಚಿತ್ರಗಳು ಮತ್ತು ಗೇಮಿಂಗ್‌ಗೆ ಅತ್ಯುತ್ತಮ ಅನುಭವವನ್ನು ನೀಡಲಾಗಿದೆ. ಇದರ ಹಿಂಭಾಗದಲ್ಲಿ ಮೂರು 50MP ಕ್ಯಾಮೆರಾ ಸೆಟಪ್ ಇರಲಿದೆ. ಈ ಸ್ಮಾರ್ಟ್ಫೋನ್ ಇದೆ 13ನೇ ನವೆಂಬರ್ 2025 ರಂದು ಬಿಡುಗಡೆಯಾಗಲಿದೆ.
Motorola G67 Power
ಈ ಮೊಬೈಲ್‌ನ ಅತಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದರ ಕ್ಯಾಮೆರಾ ಮತ್ತು ಬ್ಯಾಟರಿ. ಇದು ಬರೋಬ್ಬರಿ 7000mAh ಬ್ಯಾಟರಿ ಹೊಂದಿದ್ದು ಸುಮಾರು 58 ಗಂಟೆಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಉತ್ತಮ ಅಗತ್ಯಕ್ಕಾಗಿ ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಇರಲಿದೆ. ಕ್ಯಾಮೆರಾ ವಿಷಯದಲ್ಲಿ, ಹಿಂದೆ 50MP ಮುಖ್ಯ ಕ್ಯಾಮೆರಾ (OIS ಜೊತೆ) ಮತ್ತು ಮುಂದೆ 4K ವಿಡಿಯೋ ಮಾಡಬಲ್ಲ 32MP ಸೆಲ್ಫಿ ಕ್ಯಾಮೆರಾ ಇದೆ ಖಚಿತವಾಗಿದೆ. ಇದು 6.7 ಇಂಚಿನ 120Hz ಡಿಸ್ಪ್ಲೇ ಮತ್ತು ಪ್ರೀಮಿಯಂ ಲೆದರ್ (ವೆಗಾನ್ ಲೆದರ್) ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಇದೆ 5ನೇ ನವೆಂಬರ್ 2025 ರಂದು ಬಿಡುಗಡೆಯಾಗಲಿದೆ.
iQOO 15
ಗೇಮಿಂಗ್‌ಗೆಂದೇ ತಯಾರಾದ ಈ ಫೋನ್ ಸಹ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಪ್ರೊಸೆಸರ್ ಮತ್ತು ಅದಕ್ಕೆ ಸಹಾಯ ಮಾಡಲು ಒಂದು ಪ್ರತ್ಯೇಕ ಗೇಮಿಂಗ್ ಚಿಪ್ ಅನ್ನು ಹೊಂದಿದೆ. ಇದು ಗೇಮಿಂಗ್ ಅನ್ನು ಇನ್ನಷ್ಟು ಸುಗಮಗೊಳಿಸುತ್ತದೆ. ಇದು 6.85 ಇಂಚಿನ 2K ರೆಸಲ್ಯೂಶನ್‌ನ 144Hz AMOLED ಡಿಸ್ಪ್ಲೇ ಹೊಂದಿದೆ. ಇದರಲ್ಲೂ ಸಹ 7,000mAh ಬ್ಯಾಟರಿ ಮತ್ತು 100W ಅತಿ ವೇಗದ ಚಾರ್ಜಿಂಗ್ ಸೌಲಭ್ಯಗಳು ಇವೆ. ಇದರ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 100x ಜೂಮ್ ಮಾಡಬಲ್ಲ ಪೆರಿಸ್ಕೋಪ್ ಲೆನ್ಸ್ ಇರಲಿದೆ. ಈ ಸ್ಮಾರ್ಟ್ಫೋನ್ ಇದೆ 26ನೇ ನವೆಂಬರ್ 2025 ರಂದು ಬಿಡುಗಡೆಯಾಗಲಿದೆ.
Lava Agni 4
ಭಾರತೀಯ ಬ್ರ್ಯಾಂಡ್ ಆದ ಲಾವಾ ಬಿಡುಗಡೆ ಮಾಡುತ್ತಿರುವ ಈ ಫೋನ್, ಉತ್ತಮ ಪ್ರದರ್ಶನ ನೀಡುವ MediaTek Dimensity 8350 ಚಿಪ್‌ಸೆಟ್ ಒಳಗೊಂಡಿರುತ್ತದೆ. ಇದು ಕೂಡ 7,000mAh ಗಿಂತ ದೊಡ್ಡ ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆ ಇದೆ. ಇದರಲ್ಲಿ 6.7 ಇಂಚಿನ 120Hz OLED ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ ಎಂದು ವರದಿಯಾಗಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಗುರಿಯನ್ನು ಲಾವಾ ಹೊಂದಿದೆ. ಈ ಸ್ಮಾರ್ಟ್ಫೋನ್ ಇದೆ 20ನೇ ನವೆಂಬರ್ 2025 ರಂದು ಬಿಡುಗಡೆಯಾಗಲಿದೆ.
Also Read: BSNL ಕೇವಲ ₹153 ರೂಗಳಿಗೆ ಬರೋಬ್ಬರಿ 25GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಪೂರ್ತಿ 25 ದಿನಗಳಿಗೆ ಲಭ್ಯ!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile