ಅಮೆಜಾನ್‌ನಲ್ಲಿ Realme Narzo 90x ಮೊದಲ ಮಾರಾಟ ನಾಳೆಯಿಂದ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

Realme Narzo 90x ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ದೊಡ್ಡ ಬ್ಯಾಟರಿ ಮತ್ತು ಸೂಪರ್ ಡಿಸ್‌ಪ್ಲೇ ಮೂಲಕ ಮಾತ್ರ ಜನರ ಗಮನ ಸೆಳೆಯುತ್ತದೆ ಸೆಳೆದಿದೆ.

Realme Narzo 90x 5G ಫೋನ್ ನಾಳೆ ಅಂದರೆ 23ನೇ ಡಿಸೆಂಬರ್ 2025 ರಂದು ಮೊದಲ ಮಾರಾಟದಲ್ಲಿ ಲಭ್ಯ.

ಅಮೆಜಾನ್‌ನಲ್ಲಿ Realme Narzo 90x ಮೊದಲ ಮಾರಾಟ ನಾಳೆಯಿಂದ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?

ವರ್ಷದ ಅಂತ್ಯದ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಲು ಸಿದ್ಧವಾಗಿದ್ದು ನಿಮ್ಮ ಬಜೆಟ್ ಬೆಲೆಯಲ್ಲಿ ಹೊಸ ಫೋನ್ ಹುಡುಕುತ್ತಿರುವವರಿಗೆ ಭರ್ಜರಿ ಸುದ್ದಿ ಇಲ್ಲಿದೆ. ಬಹುನಿರೀಕ್ಷಿತ Realme Narzo 90x 5G ಫೋನ್ ನಾಳೆ ಅಂದರೆ 23ನೇ ಡಿಸೆಂಬರ್ 2025 ರಂದು ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈ ಫೋನ್ ಕೇವಲ ಅಮೆಜಾನ್ ಇಂಡಿಯಾ ಮೂಲಕ ಸಿಗಲಿದೆ ದೊಡ್ಡ ಬ್ಯಾಟರಿ ಮತ್ತು ಸೂಪರ್ ಡಿಸ್‌ಪ್ಲೇ ಮೂಲಕ ಮಾತ್ರ ಜನರ ಗಮನ ಸೆಳೆಯುತ್ತದೆ ಸೆಳೆದಿದೆ.

Digit.in Survey
✅ Thank you for completing the survey!

Also Read: ಉಚಿತ Amazon Prime ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ Jio ಮತ್ತು Airtel ಯೋಜನೆಗಳು

Realme Narzo 90x ಬೆಲೆ ಮತ್ತು ಆಫರ್‌ಗಳು:

ರಿಯಲ್‌ಮಿ ಕಂಪನಿಯು ಈ Realme Narzo 90x ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಎರಡು ವೆರಿಯಂಟ್‌ಗಳಿವೆ. ಇದರ 6GB + 128GB ಮಾಡೆಲ್‌ಗೆ ₹13,999 ರೂಗಳಾಗಿದ್ದು ಇದರ ಮತ್ತೊಂದು 8GB + 128GB ಮಾದರಿಗೆ 15,499 ರೂಗಳಾಗಿವೆ. ಆದರೆ ನಾಳೆ ನಡೆಯುವ ಮೊದಲ ಸೇಲ್‌ನಲ್ಲಿ ನಿಮಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಆಸಕ್ತರು ಎಸ್‌ಬಿಐ (SBI) ಅಥವಾ ಇತರ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಅಥವಾ ಅಮೆಜಾನ್ ಕೂಪನ್ ಅಪ್ಲೈ ಮಾಡಿದರೆ ನಿಮಗೆ ₹2,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಇದರಿಂದ ಈ ಫೋನ್ ಕೇವಲ ₹11,999 ಕ್ಕೆ ನಿಮಗೆ ಸಿಗುವ ಸಾಧ್ಯತೆ ಇದೆ. ನೆನಪಿರಲಿ ಈ ಆಫರ್ ನಾಳೆ ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ ಸ್ಟಾಕ್ ಇರುವವರೆಗೆ ಮಾತ್ರ ಇರುತ್ತದೆ.

Realme Narzo 90x

Realme Narzo 90x ಫೀಚರ್ಸ್ ಮತ್ತು ವಿಶೇಷತೆಗಳು:

ಈ ಫೋನಿನ ಹೈಲೈಟ್ ಎಂದರೆ ಇದರ 7,000mAh ಬ್ಯಾಟರಿ ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಆರಾಮವಾಗಿ ಎರಡು ದಿನ ಬಳಸಬಹುದೆಂದು ಕಂಪನಿ ಹೇಳಿದೆ. ಇಷ್ಟು ದೊಡ್ಡ ಬ್ಯಾಟರಿ ಇದ್ದರೆ ಕೂಡ ಇದನ್ನು ವೇಗವಾಗಿ ಚಾರ್ಜ್ ಮಾಡಲು 60W SUPERVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದ ಕೇವಲ 31 ನಿಮಿಷದಲ್ಲಿ ಅರ್ಧದಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಫೋನಿನ ಡಿಸ್‌ಪ್ಲೇ ವಿಷಯಕ್ಕೆ ಬಂದರೆ ಇದು 6.8 ಇಂಚಿನ ದೊಡ್ಡ ಪರದೆಯನ್ನು ಹೊಂದಿದ್ದು 144Hz ರಿಫ್ರೆಶ್ ರೇಟ್ ಹೊಂದಿದೆ. ಇದರಿಂದ ಫೋನ್ ಬಳಸುವಾಗ ಅಥವಾ ಆಟವಾಡುವಾಗ ತುಂಬಾ ಸ್ಮೂತ್ ಆಗಿರುತ್ತದೆ.

ಫೋನಿನ ಒಳಗಡೆ MediaTek ಡೈಮೆನ್ಸಿಟಿ 6300 5G ಪ್ರೊಸೆಸರ್ ಇರುತ್ತದೆ. ಇದು 5G ಇಂಟರ್ನೆಟ್ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಫೋಟೋಗಳಿಗಾಗಿ ಹಿಂದೆ 50MP ಪ್ರೈಮರಿ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 8MP ಕ್ಯಾಮೆರಾ ನೀಡಲಾಗಿದೆ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಈ ಫೋನ್‌ಗೆ IP65 ರೇಟಿಂಗ್ ಕೂಡ ಇದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ನಲ್ಲಿ ಕೆಲಸ ಮಾಡುತ್ತದೆ. ನೀವು ಇದನ್ನು Flash Blue ಮತ್ತು Nitro Blue ಎಂಬ ಎರಡು ಸಕ್ಕತ್ ಬಣ್ಣಗಳಲ್ಲಿ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo