TataSky: ಸೆಟಪ್ ಬಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ, ಹೊಸ ಬೆಲೆ ನೀವೇ ನೋಡ್ಕೊಳ್ಳಿ

HIGHLIGHTS

ಒಂದು ವೇಳೆ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಂದ ಸೆಟ್-ಟಾಪ್ ಬಾಕ್ಸ್ ಅನ್ನು ಖರೀದಿಸಿದರೆ ಬೆಲೆ ಬದಲಾಗಬಹುದು.

TataSky: ಸೆಟಪ್ ಬಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ, ಹೊಸ ಬೆಲೆ ನೀವೇ ನೋಡ್ಕೊಳ್ಳಿ

ಭಾರತದಲ್ಲಿ ಈ ವರ್ಷ ಟಾಟಾ ಸ್ಕೈ ತನ್ನ ಎಚ್‌ಡಿ ಸೆಟ್-ಟಾಪ್ ಬಾಕ್ಸ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಸಾಮಾನ್ಯ ಜನರ ಮಾಹಿತಿಗಾಗಿ ಟಾಟಾ ಸ್ಕೈ ಇದನ್ನು ವಿಶೇಷ ಕೊಡುಗೆಯಾಗಿ ಈ ಆಫರ್ ಎಲ್ಲಾ ಗ್ರಾಹಕರಿಗೆ ಲೈವ್ ಆಗಿದೆ. ಕಳೆದ ತಿಂಗಳು ಟಾಟಾ ಸ್ಕೈ ತನ್ನ ಟಾಟಾ ಸ್ಕೈ ಎಸ್‌ಡಿ ಸೆಟ್ ಟಾಪ್ ಬಾಕ್ಸ್ ಮತ್ತು ಎಚ್‌ಡಿ ಸೆಟ್-ಟಾಪ್ ಬಾಕ್ಸ್‌ನ ಬೆಲೆಯನ್ನು 300 ರೂಗಳಷ್ಟು ಬೆಲೆ ಹೆಚ್ಚಳ ಮಾಡಿತ್ತು ಆದರೆ ನಂತರ ಪುನಃ ಟಾಟಾ ಸ್ಕೈ ಎಚ್‌ಡಿ ಸೆಟ್ ಟಾಪ್ ಬಾಕ್ಸ್ ಬೆಲೆ 1,499 ರೂಗಳ ಬದಲಾಗಿ 1,399 ರೂಗಳಿಗೆ ಟಾಟಾ ಸ್ಕೈ ಅಧಿಕೃತ ವೆಬ್‌ಸೈಟ್‌ನಲ್ಲಿ ಟಾಟಾ ಸ್ಕೈ HD ಸೆಟ್-ಟಾಪ್ ಬಾಕ್ಸ್ ವಿಶೇಷ ಕೊಡುಗೆಯಡಿಯಲ್ಲಿ ನೀಡುತ್ತಿದೆ.

Digit.in Survey
✅ Thank you for completing the survey!

ಟಾಟಾ ಸ್ಕೈ ಎಚ್‌ಡಿ ಸೆಟ್-ಟಾಪ್ ಬಾಕ್ಸ್‌ನ ಬೆಲೆ ಈಗ ಟಾಟಾ ಸ್ಕೈ ಎಸ್‌ಡಿ ಸೆಟ್-ಟಾಪ್ ಬಾಕ್ಸ್‌ನ ಬೆಲೆಗೆ ಸಮನಾಗಿರುತ್ತದೆ. ಆದರೆ ನೆನಪಿನಲ್ಲಿಡಿ ಟಾಟಾ ಸ್ಕೈ 4K ಬಾಕ್ಸ್‌ನ ಬೆಲೆ 6,400 ರೂಗಳಾಗಿದ್ದು TataSky Binge+ ಬೆಲೆ ಬಗ್ಗೆ ಮಾತನಾಡಬೇಕೆಂದರೆ ಅದರ ಬೆಲೆ ಸುಮಾರು 5,999 ರೂಗಳಲ್ಲಿ ಲಭ್ಯವಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ಸಹ ಟಾಟಾ ಸ್ಕೈ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಖಾತ್ರಿಪಡಿಸ್ಕೊಳ್ಳಿ. 

ಇದರ ಕ್ರಮವಾಗಿ ಅದೇ ಸಮಯದಲ್ಲಿ TataSky HD+ ಬೆಲೆ ಬಗ್ಗೆ ಮಾತನಾಡಬೇಕೆಂದರೆ ಅದರ ಬೆಲೆ 9,300 ರೂಪಾಯಿಗಳಾಗಿವೆ. ಇದು ವಿಶೇಷವಾದ ಸದ್ಯಕ್ಕೆ ಎಲ್ಲರಿಗೂ ಲಭ್ಯವಿದ್ದು ಈ ವಿಶೇಷ ಕೊಡುಗೆ ಎಷ್ಟು ಸಮಯದವರೆಗೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಟಾಟಾ ಸ್ಕೈ ಇನ್ನೂ ಸ್ಪಷ್ಟಪಡಿಸಿಲ್ಲ. ಈ ಸಮಯದಲ್ಲಿ ನೀವು ಒಂದು ವೇಳೆ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಂದ ಸೆಟ್-ಟಾಪ್ ಬಾಕ್ಸ್ ಅನ್ನು ಖರೀದಿಸಿದರೆ ಬೆಲೆ ಬದಲಾಗಬಹುದು.

ಟಾಟಾ ಸ್ಕೈ ಜೊತೆಗೆ ಏರ್‌ಟೆಲ್ ಸಹ ಡಿಜಿಟಲ್ ಟಿವಿ ಮತ್ತು ಡಿಶ್ ಟಿವಿ ಸಹ ಗ್ರಾಹಕರಿಗೆ ಎಚ್‌ಡಿ ಅನುಭವವನ್ನು ನೀಡಲು ಇದೇ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಏರ್‌ಟೆಲ್ ಡಿಜಿಟಲ್ ಟಿವಿ ಎಚ್‌ಡಿ ಸೆಟ್ ಟಾಪ್ ಬಾಕ್ಸ್‌ನ ಬೆಲೆ 1300 ರೂಗಳು ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಬೆಲೆ ಬಗ್ಗೆ ಮಾತನಾಡಬೇಕೆಂದರೆ ಇದರ ಬೆಲೆ 3,639 ರೂಗಳಾಗಿವೆ. ಏರ್‌ಟೆಲ್ ಎಸ್‌ಡಿ ಸೆಟ್-ಟಾಪ್ ಬಾಕ್ಸ್‌ನ ಬೆಲೆ 1,100 ರೂಗಳಲ್ಲಿ ಲಭ್ಯವಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo