ರಿಲಯನ್ಸ್ ತನ್ನ ಜಿಯೋ ಫೈಬರ್ ಬಳಕೆದಾರರಿಗೆ ಉಚಿತವಾಗಿ 10Mbps ಬ್ರಾಡ್‌ಬ್ಯಾಂಡ್ ಪ್ಲಾನನ್ನು ನೀಡುತ್ತಿದೆ

ರಿಲಯನ್ಸ್ ತನ್ನ ಜಿಯೋ ಫೈಬರ್ ಬಳಕೆದಾರರಿಗೆ ಉಚಿತವಾಗಿ 10Mbps ಬ್ರಾಡ್‌ಬ್ಯಾಂಡ್ ಪ್ಲಾನನ್ನು ನೀಡುತ್ತಿದೆ
HIGHLIGHTS

ಈ ಉಚಿತ ಸೌಲಭ್ಯ ಪಡೆಯಲು ಜಿಯೋವಿನ ವೆಬ್‌ಸೈಟ್ / ಮೈಜಿಯೊ ಅಪ್ಲಿಕೇಶನ್‌ ಸೈನ್ ಅಪ್ ಮಾಡಬೇಕಾಗುತ್ತದೆ

ಕರೋನವೈರಸ್ COVID-19 ಹರಡಿರುವ ಈ ಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಇದನ್ನು ನಾಶಗೊಳಿಸಲು ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ತಡೆರಹಿತ ಕೆಲಸಕ್ಕೆ ಅವಕಾಶ ಮಾಡಿಕೊಡಲು ರಿಲಯನ್ಸ್ ಜಿಯೋ ಫೈಬರ್ ಮುಂದೆ ಬಂದು ಈಗ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ತಮ್ಮ ಬಳಕೆದಾರರಿಗಾಗಿ ನೀಡಿದೆ. ತನ್ನ ಜಿಯೋ ಫೈಬರ್ ಬಳಕೆದಾರರಿಗೆ ಉಚಿತವಾಗಿ 10Mbps ಬ್ರಾಡ್‌ಬ್ಯಾಂಡ್ ಪ್ಲಾನನ್ನು ನೀಡುತ್ತಿದೆ. COVID-19 ಕಾರಣದಿಂದಾಗಿ ಲಾಕ್‌ಡೌನ್ ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಬಯಸಿದೆ. 

ಇದನ್ನು #JioTogether ಅಭಿಯಾನದ ಅಡಿಯಲ್ಲಿ ನೀಡುತ್ತಿದ್ದು ಈ ಹೊಸ ಯೋಜನೆಯ ಲಾಭವನ್ನು ಭಾರತದಲ್ಲಿ COVID-19 ಕಾರಣದಿಂದಾಗಿರುವ ಲಾಕ್‌ಡೌನ್ ಪುನಃ ಜಾರಿಗೆ ಬರುವವರೆಗೆ ಮಾತ್ರವಾಗಿದೆ. ಅಂದ್ರೆ ಈ ಲಾಕ್‌ಡೌನ್ ಮುಗಿದ ನಂತರ ಈ ಉಚಿತ ಯೋಜನೆಯ ಚಂದಾದಾರರನ್ನು ಅಸ್ತಿತ್ವದಲ್ಲಿರುವ ಇತರ ಯೋಜನೆಗಳಿಗೆ ಸರಿಸಲಾಗುವುದು.

ಈ ಉಚಿತ JioFiber 10Mbps ಯೋಜನೆಗೆ ಚಂದಾದಾರರಾಗಲು ಜನರು ಅಧಿಕೃತ ವೆಬ್‌ಸೈಟ್ ಅಥವಾ ಮೈಜಿಯೊ ಅಪ್ಲಿಕೇಶನ್‌ಗೆ ಹೋಗಿ ಸೈನ್ ಅಪ್ ಮಾಡಬೇಕಾಗುತ್ತದೆ. ರಿಲಯನ್ಸ್ ಜಿಯೋ ಈ ಹಿಂದೆ ವರ್ಕ್ ಫ್ರಮ್ ಹೊಂ ಆಧಾರಿತ ಯೋಜನೆಯಿಂದ 251 ರೂಗಳಿಗೆ ಒಂದು ಪ್ಲಾನ್ ಪರಿಚಯಿಸಿತ್ತು. ನಂತರ 51 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಯೋಜನೆಯು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಈಗ ರಿಲಯನ್ಸ್ ತನ್ನ ಜಿಯೋ ಫೈಬರ್ ಬಳಕೆದಾರರಿಗೆ ಮತ್ತಷ್ಟು ಹೆಚ್ಚುವರಿ ಸಹಾಯ ಮಾಡುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo