LOCKDOWN 2: ಜಿಯೋ ಅಥವಾ ಏರ್ಟೆಲ್ ಬಳಕೆದಾರರಾಗಿದ್ದಾರೆ Wi-Fi ಕಾಲಿಂಗ್ ಆಕ್ಟಿವೇಟ್ ಮಾಡಿ

LOCKDOWN 2: ಜಿಯೋ ಅಥವಾ ಏರ್ಟೆಲ್ ಬಳಕೆದಾರರಾಗಿದ್ದಾರೆ Wi-Fi ಕಾಲಿಂಗ್ ಆಕ್ಟಿವೇಟ್ ಮಾಡಿ
HIGHLIGHTS

ಈ ಉಚಿತ ವಾಯ್ಸ್ ಓವರ್ Wi-Fi ಸೇವೆಗಾಗಿ ಕಂಪನಿಯು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲದಿರುವುದು ವಿಶೇಷ

ಭಾರ್ತಿ ಏರ್ಟೆಲ್ ಭಾರತದಲ್ಲಿ ವಾಯ್ಸ್ ಓವರ್ ವೈ ಫೈ (Voice over Wi-Fi) ಕರೆ ಮಾಡುವ ವೈಶಿಷ್ಟ್ಯವನ್ನು ಘೋಷಿಸಿದ ಕೂಡಲೇ ರಿಲಯನ್ಸ್ ಜಿಯೋ ಸಹ ಪ್ಯಾನ್ ಇಂಡಿಯಾ ಬೆಂಬಲದೊಂದಿಗೆ ಜಿಯೋ ವೈ-ಫೈ ಕಾಲಿಂಗ್ ಎಂಬ ಸೇವೆಯನ್ನು ಅನಾವರಣಗೊಳಿಸಿತು. ಸದ್ಯಕ್ಕೆ ಜಿಯೋ ಮತ್ತು ಏರ್ಟೆಲ್ ನೆಟ್ವರ್ಕ್ ಅಲ್ಲಿ ಸಿಗ್ನಲ್ ಇಲ್ಲದ ಸಂಧರ್ಭಗಳಲ್ಲಿ ಅದರ ಬದಲಾಗಿ ಅದೇ ಆಪರೇಟರ್ಗಳ ವೈ-ಫೈ ನೆಟ್‌ವರ್ಕ್ ಮೂಲಕ ಕರೆಗಳನ್ನು ಮಾಡಲು ಮತ್ತು ಕರೆ ಸ್ವೀಕರಿಸಲು ಅನುಮತಿಸುವ ಸೇವೆಯೇ ಈ ವೈಫೈ ಕಾಲಿಂಗ್ ಆಗಿದೆ. ಇದೊಂದು ಉಚಿತ ಸೇವೆಯಾಗಿದ್ದು ಕೇವಲ ನಿಮ್ಮ ಫೋನಲ್ಲಿ ಈ ಸೇವೆಯನ್ನು ಬೆಂಬಲಿಸುವ ಫೀಚರ್ ಹೊಂದಿರಬೇಕಷ್ಟೆ. ಆದ್ದರಿಂದ ನೀವೊಬ್ಬ ಜಿಯೋ ಅಥವಾ ಏರ್ಟೆಲ್ ನೆಟ್ವರ್ಕ್ ಬಳಸುತ್ತಿದ್ದು ನಿಮ್ಮ ಫೋನಲ್ಲಿ ಈ ಸೇವೆಯನ್ನು ಆಕ್ಟಿವೇಟ್ ಮಾಡೋದೆಗೆಂದು ತಿಳಿಯೋಣ.

ಆಂಡ್ರಾಯ್ಡ್ ಬಳಕೆದಾರರು: 

– ಫೋನ್‌ನ ಸೆಟ್ಟಿಂಗ್‌ ಹೋಗಿ.
– ಇಲ್ಲಿ ನೀಡಿರುವ Network & Internet ಮೇಲೆ ಟ್ಯಾಪ್ ಮಾಡಿ.
– ಇದರ ನಂತರ ನೀವು Wi-Fi ಕೆಳಗೆ ವೈಫೈ ಕಾಲಿಂಗ್ ಆಯ್ಕೆ ಪಡೆಯುತ್ತೀರಿ.
– ಆಯ್ಕೆಯ ಬಲಭಾಗದಲ್ಲಿ ನೀಡಲಾದ ಟಾಗಲ್ ಅನ್ನು ಆನ್ ಮಾಡಿ ಅಷ್ಟೇ.

iOS ಫೋನ್ ಬಳಕೆದಾರರು: 

– ಫೋನ್‌ನ ಸೆಟ್ಟಿಂಗ್‌ ಆಯ್ಕೆಗೆ ಹೋಗಿ.
– Wi-Fi ಕೆಳಗೆ ವೈಫೈ ಕಾಲಿಂಗ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.
– ಈಗ ಈ ಐಫೋನ್‌ನಲ್ಲಿ ವೈ-ಫೈ ಕಾಲಿಂಗ್ ನೊಂದಿಗೆ ಟಾಗಲ್ ಆನ್ ಮಾಡಿ ಅಷ್ಟೇ.

ಏರ್ಟೆಲ್ ಈ ಸೇವೆಯ ಬಿಡುಗಡೆಯ ಸಮಯದಲ್ಲಿ ದೆಹಲಿ ಮತ್ತು NCR ಪ್ರದೇಶಗಳಲ್ಲಿ ಮಾತ್ರ ಬೆಂಬಲಿಸಲಾಯಿತು. ಆದಾಗ್ಯೂ ಇತ್ತೀಚೆಗೆ ಏರ್ಟೆಲ್ ದೇಶಾದ್ಯಂತದ ಪ್ರಮುಖ ಟೆಲಿಕಾಂ ವಲಯಗಳಿಗೆ ತಮ್ಮ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿತು. ಅವರ ವಿಸ್ತೃತ ಸೇವಾ ನಿಬಂಧನೆಯೊಂದಿಗೆ ಏರ್‌ಟೆಲ್ ವೈಫೈ ಕರೆ ಇನ್ನೂ ಪ್ಯಾನ್ ಇಂಡಿಯಾವನ್ನು ಬೆಂಬಲಿಸುವುದಿಲ್ಲ.

ಭಾರ್ತಿ ಏರ್ಟೆಲ್ ವೈಫೈ ಕಾಲಿಂಗ್ ಈ ಫೋನ್ಗಳು ಸದ್ಯಕ್ಕೆ ಬೆಂಬಲಿಸುತ್ತವೆ. 

iPhone XR, iPhone 6s, iPhone 6s Plus, iPhone 7, iPhone 7 Plus, iPhone SE, iPhone 8, iPhone 8 Plus, iPhone X, iPhone Xs, iPhone Xs Max, iPhone 11, iPhone 11 Pro, OnePlus 6, OnePlus 6T, OnePlus 7, OnePlus 7 Pro, OnePlus 7T, OnePlus 7T Pro, Samsung Galaxy S10, Galaxy S10+, Galaxy S10e, Galaxy M20, Samsung Galaxy J6, Samsung Galaxy On 6, Samsung Galaxy M30s, Samsung Galaxy A10s, Samsung Galaxy A50s, Samsung Galaxy Note 9, Poco F1, Redmi K20, Redmi K20 Pro, Redmi 7A, Redmi Note 7 Pro, Redmi Y3, Redmi 7, Poco F1, Redmi K20, Redmi K20 Pro

ಜಿಯೋ ಆಂಡ್ರಾಯ್ಡ್ ಅಥವಾ iOS ಫೋನ್ಗಳ ಈ ಹೊಸ ಸೇವೆಯನ್ನು ಬಳಸಲು ಇತ್ತೀಚಿನ ಸಾಫ್ಟ್‌ವೇರ್‌ನೊಂದಿಗೆ ಅಪ್ಡೇಟ್ ಆಗಿರಬೇಕಾಗುತ್ತದೆ.  ಇದರೊಂದಿಗೆ ಉತ್ತಮ ಕರೆ ಅನುಭವಕ್ಕಾಗಿ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಸ್ಟೇಬಲ್ ವೈ-ಫೈ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ಜಿಯೋನ ಈ ಸೇವೆಯು ಜಿಯೋ ಬಳಕೆದಾರರಿಗೆ ಸುಮಾರು 150 ಫೋನ್ಗಳಲ್ಲಿ ಉಚಿತ ಧ್ವನಿ ಮತ್ತು ವಿಡಿಯೋ ಕರೆ ನೀಡುತ್ತದೆ. 

ಜಿಯೋ ವೈಫೈ ಕಾಲಿಂಗ್ ಈ ಫೋನ್ಗಳು ಸದ್ಯಕ್ಕೆ ಬೆಂಬಲಿಸುತ್ತವೆ.

ಎಲ್ಲಾ ಆಪಲ್ ಐಫೋನಿನ 10.3 ಆವೃತ್ತಿಯ ಮೇಲ್ಪಟ್ಟವುಗಳು ಇದರೊಂದಿಗೆ Galaxy Note 10, Note 10+,  Note 9, Note 8, Note 6, Note 5, Note 5 Duos, Note 4, Note 4 Edge. Galaxy S10, S10e, S10+, S9, S9+, S8, S8+, S7, S7 Edge, S6, S6 Edge, S6 Edge Plus. Galaxy A10, A10s, A30, A30s, A50, A50s, A70, A70s, A80. Galaxy M10, M20, M30, M40. Galaxy A8 (2018), A8+, A8 Star, A9 (2018), A9 Pro, A7 (2018), A7, A7 (2016), A6, A6+, A5, A5 (2017), A5 (2016). Galaxy J8, J7, J7 Duo, J7 Pro, J7 Prime, J7 Prime 2, J7 Pro, J7 Max, J7 Nxt, J7 (2016), J6, J6+, J5, J5 Prime, J5 (2016), J4+, J4 (2018),  J3 (2016), J3 Pro (2016), J2 Ace, J2, J2 (2016), J2 Pro, J2 Hybrid Tray, J1 (2016). Galaxy On 5 Pro, On 6, On 7 Prime, On 7 Pro, On 8.  Galaxy C9 Pro, C7 Pro. Galaxy Core Prime 4G. CoolPlay 6, Mega 5, Mega 5C, Pixel 3, Pixel 3XL, Pixel 3A, Pixel 3A XL, Moto G6, V11, V11 Pro, V15, V15 Pro, V9, V9 Pro, Y81, Y81i, Y91, Y91i, Y93, Y95, Y15, Y17, Z1 Pro, Poco F1, Redmi K20, Redmi K20 Pro

ಸೂಚನೆ: ಸ್ನೇಹಿತರೇ ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಈ ವೈ-ಫೈ ಕರೆ ಮಾಡುವ ಆಯ್ಕೆಯನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನಿಮ್ಮ ಹ್ಯಾಂಡ್‌ಸೆಟ್ ಬೆಂಬಲಿತವಾಗಿದೆಯೇ ಎಂದು ಪರಿಶೀಲಿಸಲು ಒಮ್ಮೆ ಜಿಯೋ ಅಥವಾ ಏರ್ಟೆಲ್ ಕಸ್ಟಮರ್ ಕೇರ್ಗೆ ಕರೆ ಮಾಡಿ ಪರೀಕ್ಷಿಸಿಕೊಳ್ಳಿ. ಇದರೊಂದಿಗೆ ನಿಮ್ಮ ಸೇವಾ ಪೂರೈಕೆದಾರರು ಅಂದ್ರೆ ನಿಮ್ಮ ಟೆಲಿಕಾಂ ಆಪರೇಟರ್ ನೀವಿರುವ ಪ್ರದೇಶದಲ್ಲಿ ಈ ವೈ-ಫೈ ಕರೆ ಸೇವೆಯನ್ನು ನೀಡುತ್ತಿದ್ದಾರೆಯೇ ಎನ್ನುವುದನ್ನು ಸಹ ಒಮ್ಮೆ ಖಾತ್ರಿಪಡಿಸಿಕೊಳ್ಳುವುದು ಒಳಿತು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo