TikTok ನಿಷೇಧವಾದರೂ ನಿಮ್ಮ ಎಲ್ಲ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

TikTok ನಿಷೇಧವಾದರೂ ನಿಮ್ಮ ಎಲ್ಲ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
HIGHLIGHTS

ತಡವಾಗುವ ಮುನ್ನ ನಿಮ್ಮ ಟಿಕ್‌ಟಾಕ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಅಪ್‌ಲೋಡ್ ಮಾಡಿದ ಎಲ್ಲಾ ವೀಡಿಯೊಗಳನ್ನು ಪುನಃ ಹಿಂಪಡೆಯುವ ಬಗ್ಗೆ ನೀವು ಚಿಂತೆ ಮಾಡುತ್ತಿರಬವುದು.

ನಿಮ್ಮ ಟಿಕ್‌ಟಾಕ್ (TikTok) ಡೇಟಾವನ್ನು ನೀವು ಏಕಕಾಲದಲ್ಲಿ ಹೇಗೆ ಡೌನ್‌ಲೋಡ್ ಮಾಡಬಹುದು.

ಭಾರತದಲ್ಲಿ ಈ ಟಿಕ್‌ಟಾಕ್ (TikTok) ಜೊತೆಗೆ ಇತರ 58 ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರವು ನಿಷೇಧಿಸಿದೆ. ಅಂದ್ರೆ ಇನ್ಮೇಲೆ ಈ ಟಿಕ್‌ಟಾಕ್ ಭಾರತದ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ಗಳಲ್ಲಿ ಲಭ್ಯವಿರುವುದಿಲ್ಲ. ಈ ಅಪ್ಲಿಕೇಶನ್ ಅನ್ನು ಸ್ಥಾಪಿಸಿದವರು ಅಪ್ಲಿಕೇಶನ್ ಅನ್ನು ಇನ್ನೂ ಪ್ರವೇಶಿಸಬಹುದೇ ವರೆತು ಅಲ್ಲಿ ಏನನ್ನು ಮಾಡಲಾಗುವುದಿಲ್ಲ. ಹಾಗಾದ್ರೆ ನೀವು ಅಪ್‌ಲೋಡ್ ಮಾಡಿದ ಎಲ್ಲಾ ವೀಡಿಯೊಗಳನ್ನು ಪುನಃ ಹಿಂಪಡೆಯುವ ಬಗ್ಗೆ ನೀವು ಚಿಂತೆ ಮಾಡುತ್ತಿರಬವುದು. ಆದ್ದರಿಂದ ನಿಮ್ಮ ಆ ಎಲ್ಲಾ ಡೇಟಾವನ್ನು ಡೌನ್‌ಲೋಡ್ ಮಾಡಲು ನೀವು ಕೆಲವು ಹಂತಗಳನ್ನು ಹಾಡು ಹೋಗಬೇಕಾಗುತ್ತದೆ. ನಿಮ್ಮ ಟಿಕ್‌ಟಾಕ್ (TikTok) ಡೇಟಾವನ್ನು ನೀವು ಏಕಕಾಲದಲ್ಲಿ ಹೇಗೆ ಡೌನ್‌ಲೋಡ್ ಮಾಡಬಹುದೆಂದು ಮುಂದೆ ಓದಿ.

TikTok

1.ನಿಮ್ಮ ಫೋನ್‌ನಲ್ಲಿ ಟಿಕ್‌ಟಾಕ್ (TikTok) ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಐಕಾನ್ ಟ್ಯಾಪ್ ಮಾಡಿ.

2.ಈಗ Privacy and safety > Personalization and data > Download your data> ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿ ಟ್ಯಾಪ್ ಮಾಡಿ.

3.ಮುಂದಿನ ಪರದೆಯಲ್ಲಿRequest data file ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಈ ಗುಂಡಿಯನ್ನು ಒತ್ತುವುದರಿಂದ ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು ಟಿಕ್‌ಟೋಕ್‌ಗೆ ವಿನಂತಿಯನ್ನು ಕಳುಹಿಸುತ್ತದೆ. ಗಮನಿಸಿ ನಿಮ್ಮ ರಿಕ್ವೆಸ್ಟ್ ಅನ್ನು ಪ್ರಕ್ರಿಯೆಗೊಳಿಸಲು 30 ದಿನಗಳವರೆಗೆ ತೆಗೆದುಕೊಳ್ಳಬಹುದು. 

4.ಮುಂದೆ ನಿಮ್ಮ ಡೌನ್‌ಲೋಡ್ ಸಿದ್ಧವಾಗಿದ್ದರೆ ನೀವು ಮ್ಯಾನುಯಲಿ ಅಪ್ಲಿಕೇಶನ್ ಅನ್ನು ಪರಿಶೀಲಿಸುತ್ತಿರಬೇಕಾಗುತ್ತದೆ. ಅದು ಒಮ್ಮೆ ನೀವು Download data tab ಬಂದ ಮೇಲೆ ಕ್ಲಿಕ್ ಮಾಡಿ. ಇದು ರಿಕ್ವೆಸ್ಟ್ ಡೇಟಾ ಟ್ಯಾಬ್‌ ಪಕ್ಕದಲ್ಲಿಯೇ ಇರುತ್ತದೆ. 

5.ಅಲ್ಲಿಗೆ ನೀವು ವಿನಂತಿಸಿದ ಡೇಟಾದ ಪಕ್ಕದಲ್ಲಿಯೇ Download ಬಟನ್ ಟ್ಯಾಪ್ ಮಾಡಬೇಕಾಗುತ್ತದೆ.

6.ನೆನಪಿನಲ್ಲಿಡಿ ನೀವು ರಿಕ್ವೆಸ್ಟ್ ಮಾಡಿದ ಡೇಟಾ ಫೈಲ್ ನಾಲ್ಕು ದಿನಗಳವರೆಗೆ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ. ಮತ್ತು ನಿರ್ದಿಷ್ಟ ಸಮಯದೊಳಗೆ ನೀವು ಡೌನ್‌ಲೋಡ್ ಮಾಡದಿದ್ದರೆ ಡೇಟಾ ಫೈಲ್ ಅವಧಿ ಮುಗಿಯುತ್ತದೆ.

ಈ ವಿಧಾನವು ನಿಮ್ಮ ಡೇಟಾವನ್ನು ನೇರವಾಗಿ ಟಿಕ್‌ಟಾಕ್‌ನಿಂದ ವಿನಂತಿಸಲು ಅನುವು ಮಾಡಿಕೊಡುತ್ತದೆ. ವಿನಂತಿಯನ್ನು ಪ್ರಕ್ರಿಯೆಗೊಳಿಸಿದ ನಂತರ ನೀವು ಅಪ್ಲಿಕೇಶನ್‌ನಿಂದ ನಿಮ್ಮ ಎಲ್ಲಾ ಡೇಟಾವನ್ನು ಏಕಕಾಲದಲ್ಲಿ ಡೌನ್‌ಲೋಡ್ ಮಾಡಬಹುದು. ನಂತರ ಈ ಹಂತಗಳನ್ನು ಅನುಸರಿಸಿ ನಿಮ್ಮ ಟಿಕ್‌ಟಾಕ್ ಡೇಟಾವನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುವ ಸರಳ ವಿಧಾನಗಳಾಗಿವೆ. ನೀವು ಬೇರೆ ಯಾವುದೇ ವಿಧಾನವನ್ನು ತಿಳಿದಿದ್ದರೆ? ಕಾಮೆಂಟ್‌ಗಳಲ್ಲಿ ನಮಗೆ ಬರೆಯುವ ಮೂಲಕ ನೀವು ಅದನ್ನು ಹಂಚಿಕೊಳ್ಳಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo