ಈಗ ನೀವು ಬಳಸುತ್ತಿರುವ ಫೋನ್ ರೇಡಿಯೇಷನ್ ಲೇವೆಲ್ ಎಷ್ಟು! ಇದರಿಂದಾಗುವ ಸಮಸ್ಯೆಗಳೇನು ತಿಳ್ಕೊಳ್ಳಿ!

HIGHLIGHTS

ನಿಮ್ಮ ಫೋನಲ್ಲಿ ಈ ನಂಬರ್ ಒತ್ತಿ ಫೋನಿನ SAR ರೇಡಿಯೇಷನ್ ಲೇವೆಲ್ ಎಷ್ಟಿದೆಯೆಂದು ಕಂಡುಕೊಳ್ಳಬವುದು

ಈಗ ನೀವು ಬಳಸುತ್ತಿರುವ ಫೋನ್ ರೇಡಿಯೇಷನ್ ಲೇವೆಲ್ ಎಷ್ಟು! ಇದರಿಂದಾಗುವ ಸಮಸ್ಯೆಗಳೇನು ತಿಳ್ಕೊಳ್ಳಿ!

ಹೊಸ ಸ್ಮಾರ್ಟ್ಫೋನ್ ಅಥವಾ ಯಾವುದೇ ಫೋನ್ ಖರೀದಿಸುವಾಗ ಹೆಚ್ಚಿನ ಜನರು ಆ ಸ್ಮಾರ್ಟ್ಫೋನ್ಗಳ ಸ್ಪೆಸಿಫಿಕೇಷನ್ ಅಥವಾ ಬೆಲೆಗಳ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಇದರ ಮೇರೆಗೆ ಮುಖ್ಯವಾಗಿ ಆ ಫೋನ್ಗಳ ಸಂಪೂರ್ಣವಾದ ಮಾಹಿತಿಯನ್ನು ಪಡೆಯದೇ ಹೋಗುತ್ತಾರೆ. ಆದರೆ ಅದೇ ಫೋನಿನ ಸೇಲ್ ಸರ್ವಿಸ್ ಅಥವಾ ರೇಡಿಯೇಷನ್ ಲೆವೆಲ್ ಮುಂತಾದವುಗಳ ಬಗ್ಗೆ ಸ್ವಲ್ಪವೂ ಗಮನಹರಿಸೋಲ್ಲ ಇದು ಮುಂದೆ ನಿಮಗೆ ಹೆಚ್ಚು ಖರ್ಚು ತೆರುವಂತೆ ಮಾಡುತ್ತದೆ. ಕೆಲವು ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳು SAR ರೇಟಿಂಗ್ ಅನ್ನು ಬಳಕೆದಾರರ ಕೈಪಿಡಿಯಲ್ಲಿ ಸ್ಮಾರ್ಟ್ಫೋನ್ ಬಾಕ್ಸ್ನೊಂದಿಗೆ ನೀಡುತ್ತಾರೆಯಾದರು ಸಾಮನ್ಯವಾಗಿ ಜನರು ಇದನ್ನು ನೋಡೋದೆಯಿಲ್ಲ.

Digit.in Survey
✅ Thank you for completing the survey!

https://gadgetstouse.com/wp-content/uploads/2014/06/image46.png

ನಮ್ಮ ಸುತ್ತಲಿರುವ ರೇಡಿಯೇಷನ್ ಒಂದು ಶಕ್ತಿಯ ರೂಪವಾಗಿದೆ. ಅದರಲ್ಲೂ ಇವು ರೇಡಿಯೋ ತರಂಗಗಳು ಮೈಕ್ರೋವೇವ್ಗಳು, ಎಕ್ಸ್-ಕಿರಣಗಳು ಮತ್ತು ಗಾಮಾ ಕಿರಣಗಳಂತಹ ಹಲವು ರೂಪಗಳ ಹೆಸರು ಹೊಂದಿವೆ. ಇದನ್ನು ಅಯಾನೀಕರಿಸುವ ಅಥವಾ ಅಯಾನೀಕರಣದ ವಿಕಿರಣ ಎಂದು ವರ್ಗೀಕರಿಸಲಾಗಿದೆ. ವಿದ್ಯುತ್ ಸಾಕೆಟ್ಗಳ ಮೂಲಕ ಹರಿದು ಹೋಗುವ ವಿದ್ಯುತ್ ಪ್ರವಾಹಗಳು ಸಾಲಿನ ಆವರ್ತನ ವಿದ್ಯುತ್ಕಾಂತೀಯ ಕ್ಷೇತ್ರಗಳಷ್ಟು ಅಪಾಯಕಾರಿಯೂ ಆಗಿರುತ್ತವೆ.
 
ಇಲ್ಲಿ SAR (Specific Absorption Rate) ನಿರ್ದಿಷ್ಟವಾದ ದರವನ್ನು ಸೂಚಿಸುತ್ತದೆ. ಇದು ಮೊಬೈಲ್ ಫೋನ್ ಬಳಸುವಾಗ ಮಾನವ ದೇಹ ಹೀರಿಕೊಳ್ಳುವ ರೇಡಿಯೊ ಫ್ರೀಕ್ವೆನ್ಸಿ ಮೊತ್ತವಾಗಿದೆ. ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ರೇಡಿಯೊ ಫ್ರೀಕ್ವೆನ್ಸಿ ಶಕ್ತಿಯನ್ನು ಸುರಕ್ಷಿತವಾಗಿ ಬಳಸುವುದಕ್ಕೆ ಮಿತಿಗಳನ್ನು ಅಳವಡಿಸಿಕೊಂಡಿದೆ. ಇದರ ಪ್ರಕಾರ ಪ್ರತಿ ಕಿಲೋಗ್ರಾಂಗೆ Head + Body ಸೇರಿ ಕೇವಲ 1.6 ವ್ಯಾಟ್ಗಳಷ್ಟು (1.6W /kg) ಅಥವಾ ಅದಕ್ಕಿಂತ ಕಡಿಮೆ ಇರ್ರಲೇಬೇಕು. ಈ SAR ಮಟ್ಟಗಳಲ್ಲಿ ಅಥವಾ ಕೆಳಗಿನ ಯಾವುದೇ ಸ್ಮಾರ್ಟ್ಫೋನ್ ಬಳಕೆಗೆ ಸುರಕ್ಷಿತವಾಗಿರುತ್ತದೆ. ಇಲ್ಲವಾದರೆ ತಕ್ಷಣವೇ ನಿಮ್ಮ ಸ್ಮಾರ್ಟ್ಫೋನ್ ಅನ್ನು ಬದಲಾಯಿಸುವಂತೆ ಸಲಹೆ ನೀಡುತ್ತಾರೆ. ನಿಮ್ಮ ಫೋನಲ್ಲಿ *#07# ಒತ್ತಿ ಫೋನಿನಲ್ಲಿರುವ ರೇಡಿಯೇಷನ್ ಲೇವೆಲ್ ಎಷ್ಟೆಂದು ಪತ್ತೆ ಹಚ್ಚಬವುದು.

ರೇಡಿಯೇಷನ್ ಮೂಲಕ ಅತ್ಯಂತ ಸಾಮಾನ್ಯವಾಗಿ ಹರಡುವ ರೋಗವೆಂದರೆ ಸನ್ಬರ್ನ್. ಇದು ವಾರ್ಷಿಕವಾಗಿ ಒಂದು ಮಿಲಿಯನ್ ಹೊಸ ಚರ್ಮದ ಕ್ಯಾನ್ಸರ್ಗಳಿಗೆ ಕಾರಣವಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಸ್ಮಾರ್ಟ್ಫೋನ್ ತುಂಬಾನೇ ಚುರುಕುಗೊಳಿಸಿದೆ. ಆದ್ದರಿಂದ ಯಾವುದೇ ಮಾದರಿಯ ಸ್ಮಾರ್ಟ್ಫೋನ್ ಹೆಚ್ಚಿನ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಅದರಲ್ಲೂ ನೀವು ಅಪಾಯಕಾರಿ ಹೆಚ್ಚಿನ SAR ಹೊಂದಿರುವ ಕಡಿಮೆ ಸ್ಮಾರ್ಟ್ಫೋನನ್ನು ಬಳಸುತ್ತಿದ್ದರೆ ಇದು ಅತ್ಯಂತ ಅಪಾಯಕಾರಿಯಾಗಿದೆ. ಇಂದೇ ಎಚ್ಚರಿಕೆಯಿಂದ ನಿಮ್ಮ ಮತ್ತು ನಿಮ್ಮವರ ಫೋನಲ್ಲಿ ಚೆಕ್ ಮಾಡ್ಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo