PF ಅಕೌಂಟ್ ಅಲ್ಲಿ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಸಹ ಬದಲಾಯಿಸಬವುದು ಎನ್ನುವುದರ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ
ದೇಶದ ಅನೇಕ ಜನರು ಈ ಸೌಲಭ್ಯದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಅಲ್ಲದೆ ಇತ್ತೀಚೆಗೆ ಬ್ಲಾಗ್ ರೀಡರ್ನಲ್ಲಿ ಒಂದು ಕಾಮೆಂಟ್ ವಿಭಾಗದಲ್ಲಿ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಆದ್ದರಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಸ್ನೇಹಿತರೇ ನೀವು ಯಾವುದೇ ಒಂದು ಕಂಪನಿಯಲ್ಲಿ ನಿಮ್ಮ ಮಾಸಿಕ ಸಂಬಳದಲ್ಲಿ PF ಸೇರಿಸಿದೆ ಎಂದು ಖಚಿತವಾದ ಕೂಡಲೇ ಆ ಕಂಪನಿಯಲ್ಲಿ ಅಕೌಂಟ್ ನೋಡುವವರನ್ನು ಸಂಪರ್ಕಿಸಿ. ನಿಮ್ಮ PF ಮಾಹಿತಿಯನ್ನು ಅವರಿಂದ ಪಡೆಯುಕೊಳ್ಳಿ. ಅಂದ್ರೆ ನಿಮ್ಮ UAN, PF ಅಕೌಂಟ್ ನಂಬರ್ ಮತ್ತು ಅದರ ಪಾಸ್ವರ್ಡ್ ಪಡೆಯಲು ಮರೆಯದಿರಿ. ಏಕೆಂದರೆ ಇಂದಿಗೂ ಸಹ ಬಹು ಮುಗ್ದ ಜನರಿಗೆ ಇದರ ಬಗ್ಗೆ ಅರಿವೇ ಇಲ್ಲ.
Surveyಇದರ ನಂತರ EPFO ಫಲಾನುಭವಿಗಳಿಗೆ ಅರ್ಜಿಯನ್ನು ಬಿಡುಗಡೆ ಮಾಡುತ್ತದೆ. ಉದ್ಯೋಗಿಯು ತನ್ನ ಬ್ಯಾಲೆನ್ಸ್ ಅನ್ನು PF ಅಪ್ಲಿಕೇಶನ್, EPFO ವೆಬ್ ಪೋರ್ಟಲ್ ಅಥವಾ SMS ಬಳಸುವ ಮೂಲಕ ಹಲವಾರು ಸಮಸ್ಯೆಗಳನ್ನೂ ಎದುರಿಸುತ್ತ ತಮ್ಮ ತಮ್ಮ ಬ್ಯಾಲೆನ್ಸ್ ಅನ್ನು ಕಂಡುಹಿಡಿದುಕೊಳ್ಳುತ್ತಾರೆ. ಇಂದು ಈ ಮೂರು ಮಾಧ್ಯಮಗಳ ಮೂಲಕ ಹೇಗೆ ನಿಮ್ಮ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಬವುದೆಂಬುದನ್ನು ತಿಳಿಸುತ್ತೇವೆ.
ನೀವು ಇಂಟರ್ನೆಟ್ ತಿಳುವಳಿಕೆ ಅಥವಾ ಬಳಕೆದಾರರಾಗಿದ್ದಾರೆ ನಿಮ್ಮ ಸ್ಮಾರ್ಟ್ಫೋನಲ್ಲಿ SMS ಮೂಲಕ ನಿಮ್ಮ PF ಖಾತೆಯಿಂದ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು SMS ಅನ್ನು ಕಳುಹಿಸಬೇಕಾಗುತ್ತದೆ. ಅದಕ್ಕೂ ಮೊದಲು ನಿಮ್ಮ PF ಅಕೌಂಟ್ ನಲ್ಲಿರುವ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ಈ SMS ಕಳುಯಿಸಬೇಕಾಗುತ್ತದೆ.
ಈಗ ನಿಮ್ಮ ಫೋನ್ನ ಮೆಸೇಜ್ ವಿಭಾಗಕ್ಕೆ ಹೋಗಿ ಹೊಸ SMS ಕಳುಹಿಸಲು ಟ್ಯಾಬ್ ತೆರೆಯಿರಿ. ಅಲ್ಲಿ EPFOHO UAN ENG ಎಂದು ಟೈಪ್ ಮಾಡಿ '7738299899' ನಂಬರ್ಗೆ SMS ಕಳುಹಿಸಿ. ನಿಮ್ಮ ಮೊಬೈಲ್ ನಂಬರ್ ನಿಮ್ಮ EPF ಅಕೌಂಟಲ್ಲಿ ನೋಂದಾಯಿಸಿದ್ದರೆ ಮಾತ್ರ ನಿಮ್ಮ ಖಾತೆಯ ಮಾಹಿತಿಯನ್ನು SMS ಮೂಲಕ ಪಡೆಯುತ್ತೀರಿ. ಈ ಸೇವೆ ಒಟ್ಟಾರೆಯಾಗಿ ಭಾರತದ 10 ಭಾಷೆಗಳಲ್ಲಿ ಪಡೆಯುವ ಅವಕಾಶ ನೀಡುತ್ತದೆ.
ಅದರಲ್ಲಿ ನಮ್ಮ ಕನ್ನಡವೂ ಸಹ ಒಂದಾಗಿದೆ. ಅವೆಂದರೆ ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಈ ಮಾಹಿತಿ ಪಡೆಯಬವುದು ರಾಷ್ಟ್ರದ ಲಭ್ಯವಿದೆ. ಈ ಮಾಹಿತಿಯನ್ನು ಬೆಲೆ ಭಾಷೆಯಲ್ಲಿ ಪಡೆಯಲು (EPFOHO UAN) ENG ಈ ರೀತಿಯ ಮೆಸೇಜ್ ಕೊನೆಯಲ್ಲಿ ನಿಮ್ಮ ಭಾಷೆಯ ಮೂರು ಅಕ್ಷರಗಳನ್ನು ಸೇರಿಸಬೇಕಾಗುತ್ತದೆ.
ಈ ರೀತಿ ಮಾಹಿತಿ ಪಡೆಯಲಾಗಲಿಲ್ಲವಾದರೆ ಕೇವಲ ಒಂದು ಮಿಸ್ ಕಾಲ್ ಮೂಲಕ ಸಹ ನಿಮ್ಮ PF ಖಾತೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ನಿಮ್ಮ PF ಅಕೌಂಟ್ ನಲ್ಲಿರುವ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ಈ ಕರೆ ಮಾಡಬೇಕಾಗುತ್ತದೆ. ನೀವು '011-22901406' ನಂಬರ್ಗೆ ಮಿಸ್ ಕಾಲ್ ಮಾಡಬೇಕಾಗುತ್ತದೆ. ಕರೆ ಮುಗಿದ ತಕ್ಷಣ ಖಾತೆಯ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯುವಿರಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile
