ನೀವು Instagram ಬಳಸುತ್ತಿದ್ದರೆ ಈ ಸುಲಭ ಟ್ರಿಕ್ಸ್ ಬಳಸಿ ಅತಿ ಹೆಚ್ಚು ಲೈಕ್ ಮತ್ತು ಶೇರ್ ಪಡೆಯಿರಿ

ನೀವು Instagram ಬಳಸುತ್ತಿದ್ದರೆ ಈ ಸುಲಭ ಟ್ರಿಕ್ಸ್ ಬಳಸಿ ಅತಿ ಹೆಚ್ಚು ಲೈಕ್ ಮತ್ತು ಶೇರ್ ಪಡೆಯಿರಿ
HIGHLIGHTS

ನಿಮಗೊತ್ತಾ ಸರಳವಾಗಿ ನಿಮಗೆ ಬೇಕಾಗುವಷ್ಟು ಶೇರ್ ಮತ್ತು ಲೈಕ್ಗಳು ಪಡೆಯಲು ಈ ಅಂಶಗಳು ಹೆಚ್ಚು ಸಹಾಕಾರಿಯಾಗಿವೆ

ನಿಮ್ಮ ಎಂಗೇಜ್ಮೆಂಟ್ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚಿಸಲು ನೀವು ಬಯಸುವಿರಾ? ನಿಮ್ಮ ಇನ್ಸ್ಟಾಗ್ರ್ಯಾಮ್ ಪೋಸ್ಟ್ಗಳಲ್ಲಿ ನೀವು ಹೆಚ್ಚಿನ ಲೈಕ್ , ಶೇರ್ಗಳನ್ನು ಪಡೆಯಲು ಬಯಸುತ್ತೀರಾ? ಹಾಗಾದ್ರೆ ಈ ಲೇಖನವನ್ನು ಗಮನವಿಟ್ಟು ಓದಿರಿ ಮತ್ತು ಏಕೆಂದರೆ ಜನರು ನಿಮ್ಮ ಸಂಪೂರ್ಣ ಖಾತೆಯನ್ನು ನೀವು ಏನನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಕಾಯುತ್ತಿರುತ್ತಾರೆ. ಹಾಗಾಗಿ ಸರಿಯಾಗಿ ಯೋಜಿಸಿದ್ದರೆ ನಿಮಗೆ ಬೇಕಾಗುವಷ್ಟು ಲೈಕ್ಗಳು ಗಿಟ್ಟಿಸಲು ಈ ಅಂಶಗಳು ಸಹಾಯ ಮಾಡುತ್ತವೆ.

1. Post at the right time: ಮೊದಲಿಗೆ ನಿಮ್ಮ ಪ್ರೇಕ್ಷಕರ ಸಮಯ ಮತ್ತು ಲೊಕೇಶನ್ ಹಾಗು ಅವರು ಹೆಚ್ಚಾಗಿ Instagram ಅನ್ನು ಪರಿಶೀಲಿಸುವ ಸಮಯವಾಗಿದೆ. ಇದರ ಹೆಚ್ಚಿನ ಇನ್ಸ್ಟಾಗ್ರಾಮ್ ಬಳಕೆದಾರರು ಬೆಳಿಗ್ಗೆ ಲಾಗಿನ್ ಮತ್ತು ಸಂಜೆ ಕೆಲಸ ಅಥವಾ ಶಾಲೆಯ ತಮ್ಮ ದಾರಿಯಲ್ಲಿ ಮನೆಗೆ ಹೊರಡುವಾಗ ಬಳಸುತ್ತಾರೆಂದು ಅನಾಲಿಟಿಕ್ಸ್ ಕಂಪನಿಯು ಸರಳವಾಗಿ ಮಾಪನ ಮಾಡಿದೆ. ಅದರಲ್ಲೂ Instagram ನಲ್ಲಿ ಪೋಸ್ಟ್ ಮಾಡಲು ಉತ್ತಮ ಸಮಯ ಬುಧವಾರದಂದು 5:00pm ರಿಂದ 6:00pm ರವರೆಗೆ ಇರುತ್ತದೆ.

2. Use popular hashtags: ನೀವಿರುವ ಉದ್ಯಮವನ್ನು ಆಧರಿಸಿ ನಿಮ್ಮ ಫೋಟೋಗಳಲ್ಲಿ ಹೆಚ್ಚು ಗೋಚರತೆಯನ್ನು ಪಡೆಯಲು ಬಳಸಬಹುದಾದ ಜನಪ್ರಿಯ Instagram ಹ್ಯಾಶ್ಟ್ಯಾಗ್ಗಳು (#) ಸಹ ಇವೆ. ನಿಮ್ಮ ಉದ್ಯಮಕ್ಕೆ ಜನಪ್ರಿಯ ಹ್ಯಾಶ್ಟ್ಯಾಗ್ಗಳನ್ನು ಕಂಡುಹಿಡಿಯುವ ಉತ್ತಮ ಮಾರ್ಗವೆಂದರೆ ಗೂಗಲ್ ಅನ್ನು ಬಳಸುವುದು.  ಇದರಿಂದ ಒಂದು ಸರಳವಾದ ಗೂಗಲ್ ಶೋಧವು ನಿಮಗೆ ತಿಳಿಯಬೇಕಾಗಿರುವುದು ನಿಮಗೆ ತಿಳಿಸುತ್ತದೆ. 

3. Share images that work: ನೀವು ಹೊಸ ಖಾತೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೆಚ್ಚು ಪೋಸ್ಟ್ ಮಾಡದಿದ್ದರೆ ನಿಮ್ಮ ಪ್ರತಿಸ್ಪರ್ಧಕರ ಖಾತೆಗಳನ್ನು ನೀವು ಪರಿಶೀಲಿಸಬೇಕು. ಮತ್ತು ಅವರು ಏನು ಪೋಸ್ಟ್ ಮಾಡುತ್ತಿದ್ದಾರೆಂದು ನೋಡಿ. ನೀವು ಇಷ್ಟಪಡುವಂತಹ ಚಿತ್ರಗಳ ಪ್ರಕಾರಗಳ ಬಗ್ಗೆ ಕೆಲವು ಒಳನೋಟಗಳನ್ನು ನೀವು ಹೊಂದಿದ ನಂತರ ನೀವು ಇದೇ ರೀತಿಯಲ್ಲಿ ರಚಿಸಬಹುದು. ಮತ್ತು ಅವುಗಳನ್ನು ನಿಮ್ಮಲ್ಲಿ ಶೇರ್ ಮಾಡಬಹುದು. ನೀವು ಹಂಚಿಕೊಳ್ಳಲು ಬಯಸುವ ಎರಡು ವಿಧದ ಚಿತ್ರಗಳು ಸಾಮಾನ್ಯವಾಗಿ ಇವೆ. ಅವು Photos ಮತ್ತೊಂದು Designed images ಈಗ ಇದರ ಮೇಲೆ ಹೆಚ್ಚು ಗಮನ ಹರಿಸಿರಿ.

4. Like others posts: ಇದು ಸೀದಾ ನಿಮ್ಮ ಚಟುವಟಿಕೆಯ ಗುರಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಜನಪ್ರಿಯ Instagram ಫೀಡ್ ಮತ್ತು ಜನಪ್ರಿಯ ಹ್ಯಾಶ್ಟ್ಯಾಗ್ಗಳ ಫೀಡ್ಗಳು ಮತ್ತು ಮನರಂಜನೆ ಅಥವಾ ಉಪಯುಕ್ತತೆಯನ್ನು ನೀವು ಹುಡುಕುವ ಪೋಸ್ಟ್ಗಳನ್ನು ಅಥವಾ ನಿಮ್ಮ ಚಟುವಟಿಕೆಗೆ ಕ್ಕೆ ಸಂಬಂಧಿಸಿದ ಪ್ರೊಫೈಲ್ಗಳಿಂದ ಇದು ಮೌಲ್ಯಯುತವಾಗಬಹುದು. ಇದು ನಿಮಗೆ ಇಷ್ಟವಾಗುವಂತಹ ಮತ್ತು ಅನುಯಾಯಿಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo