ಭಾರತದಲ್ಲಿ ಥಾಮ್ಸನ್ ಹೊಸ ಆಂಡ್ರಾಯ್ಡ್ ಟಿವಿಯನ್ನು 29,999 ರೂಗಳಲ್ಲಿ ಬಿಡುಗಡೆಗೊಳಿಸಿದೆ

ಭಾರತದಲ್ಲಿ ಥಾಮ್ಸನ್ ಹೊಸ ಆಂಡ್ರಾಯ್ಡ್ ಟಿವಿಯನ್ನು 29,999 ರೂಗಳಲ್ಲಿ ಬಿಡುಗಡೆಗೊಳಿಸಿದೆ
HIGHLIGHTS

ಈ ಟಿವಿಗಳು 29,999 ರೂಗಳಲ್ಲಿ 43 ಇಂಚಿನಿಂದ ಹಿಡಿದು 65 ಇಂಚುಗಳ ವರೆಗೆ ವಿವಿಧ ರೀತಿಯ ಆಯ್ಕೆಗಳೊಂದಿಗೆ ಬರುತ್ತವೆ.

ಎಲ್ಲಾ ಟಿವಿಗಳು 4K- ರೆಸಲ್ಯೂಶನ್ LED ಪ್ಯಾನಲ್ ಮತ್ತು HDR ಅನ್ನು ಬೆಂಬಲಿಸುತ್ತವೆ.

ಇಲೆಕ್ಟ್ರಾನಿಕ್ ವಸ್ತು ತಯಾರಕ ಮತ್ತು ಬ್ರ್ಯಾಂಡ್ ಥಾಮ್ಸನ್ ಅದರ ಪರವಾನಗಿ ಸೂಪರ್ ಪ್ಲಾಸ್ಟ್ರೊನಿಕ್ಸ್ ಪ್ರೈವೇಟ್ ಲಿಮಿಟೆಡ್ (SPPL) ಮೂಲಕ ಭಾರತದಲ್ಲಿ ಥಾಮ್ಸನ್ ಟಿವಿಗಳನ್ನು ಇತ್ತೀಚಿನ ಉತ್ಪನ್ನ ಶ್ರೇಣಿಯಲ್ಲಿ ಪ್ರಾರಂಭಿಸಿದೆ. ಕಂಪನಿಯು ಈ ಉತ್ಪನ್ನ ಶ್ರೇಣಿಯಲ್ಲಿ ನಾಲ್ಕು ಪ್ರಕಾರದ  ಆಯ್ಕೆಗಳೊಂದಿಗೆ ಭಾರತದ ಅಧಿಕೃತ ಆಂಡ್ರಾಯ್ಡ್ ಟಿವಿ ಶ್ರೇಣಿಯನ್ನು ಪ್ರಾರಂಭಿಸಿದೆ. ಹೊಸ ಪ್ರಾಡಕ್ಟ್ ಶ್ರೇಣಿಯು 29,999 ರೂಗಳಲ್ಲಿ 43 ಇಂಚಿನಿಂದ ಹಿಡಿದು 65 ಇಂಚುಗಳ ವರೆಗೆ ವಿವಿಧ ರೀತಿಯ ಸೈಜ್ ಆಯ್ಕೆಗಳೊಂದಿಗೆ ಬರುತ್ತದೆ. 

ಇದರ ಹೆಸರೇ ಸೂಚಿಸುವಂತೆ ಎಲ್ಇಡಿ ಸ್ಮಾರ್ಟ್ ಟಿವಿ ಶ್ರೇಣಿಯು ಅಧಿಕೃತ ಆಂಡ್ರಾಯ್ಡ್ ಟಿವಿ ಸಾಫ್ಟ್ವೇರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ಆವೃತ್ತಿಯೊಂದಿಗೆ ಆಂಡ್ರಾಯ್ಡ್ ಓರಿಯೊ ಸಹ  ಟಿವಿಗಳಲ್ಲಿ ಲೋಡ್ ಮಾಡಲಾಗಿದೆ. ಹೊಸ ಶ್ರೇಣಿ 43 ಇಂಚಿನ ರೂಪಾಂತರಕ್ಕಾಗಿ 29,999 ರೂಗಳಾದರೆ 50 ಇಂಚಿನ ಆಯ್ಕೆಗಾಗಿ 34,999 ರೂರೂಗಳಾಗಿವೆ. 55 ಇಂಚಿನ ರೂಪಾಂತರಕ್ಕಾಗಿ 38,999 ರೂಗಳಾದರೆ ಟಾಪ್-ಆಫ್-ಲೈನ್ 65 ಇಂಚಿನ ಟಿವಿಗಾಗಿ 59,999 ರೂಗಳ ವ್ಯಾಪ್ತಿಯಲ್ಲಿರುವ ಬರುತ್ತದೆ. 

ಈ ಎಲ್ಲಾ ಟಿವಿಗಳು 4K- ರೆಸಲ್ಯೂಶನ್ ಎಲ್ಇಡಿ ಪ್ಯಾನಲ್ಗಳನ್ನು ಮತ್ತು HDR ಅನ್ನು ಬೆಂಬಲಿಸುತ್ತವೆ. ಇದಲ್ಲದೆ, ಥಾಮ್ಸನ್ ಟಿವಿಗಳು ಡಾಲ್ಬಿ ಆಡಿಯೊ ಮತ್ತು ಡಿಟಿಎಸ್ ಟ್ರುಸುರೌಂಡ್ ಅನ್ನು ಬೆಂಬಲಿಸುತ್ತವೆ. ಅಧಿಕೃತ ಆಂಡ್ರಾಯ್ಡ್ ಟಿವಿ ಇಂಟರ್ಫೇಸ್ ಹೊರತುಪಡಿಸಿ ಟಿವಿಗಳು ಹೊಂದಾಣಿಕೆಯ ಸಾಧನಗಳೊಂದಿಗೆ ಕ್ರೋಮ್ಕ್ಯಾಸ್ಟ್ ಅನ್ನು ಸಹ ಬಳಸಬವುದಾಗಿದೆ. ಈ ಟಿವಿಗಳು ಅಪ್ಲಿಕೇಷನ್ಗಳನ್ನು ಸ್ಥಾಪಿಸಲು 2.5GB ಯ RAM ಮತ್ತು 16GB ಸ್ಟೋರೇಜನ್ನು ಹೊಂದಿವೆ.

ಅಧಿಕೃತ ಆಂಡ್ರಾಯ್ಡ್ ಟಿವಿ ಜನಪ್ರಿಯ ಸ್ಮಾರ್ಟ್ ಟಿವಿ ಇಂಟರ್ಫೇಸ್ ಆಗಿದೆ, ಅದರಲ್ಲೂ ವಿಶೇಷವಾಗಿ ವ್ಯಾಪಕ ಸಂಖ್ಯೆಯ ಅಪ್ಲಿಕೇಷನ್ಗಳು ಮತ್ತು ಸೇವೆಗಳಿಗೆ ಅದರ ಬೆಂಬಲವಿದೆ. ಥಾಮ್ಸನ್ ಅಧಿಕೃತ ಆಂಡ್ರಾಯ್ಡ್ ಟಿವಿ ಸರಣಿಯು ಗೂಗಲ್ ಪ್ಲೇ ಮೂವೀಸ್, ಗೂಗಲ್ ಪ್ಲೇ ಮ್ಯೂಸಿಕ್, ಯೂಟ್ಯೂಬ್ ಮತ್ತು ನೆಟ್ಫ್ಲಿಕ್ಸ್ ಮೊದಲಾದ ವಿವಿಧ ಜನಪ್ರಿಯ ಅಪ್ಲಿಕೇಷನ್ಗಳೊಂದಿಗೆ ಮೊದಲೇ ಲೋಡ್ ಆಗುತ್ತದೆ. ಇದಲ್ಲದೆ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅನ್ನು ಪ್ರವೇಶಿಸಬಹುದು ಮತ್ತು ಆಂಡ್ರಾಯ್ಡ್ ಟಿವಿಗಾಗಿ ಪ್ರಸ್ತುತ ಲಭ್ಯವಿರುವ 5000 ಅಪ್ಲಿಕೇಶನ್ಗಳನ್ನು ಬಳಸಬವುದು. ಕುತೂಹಲಕಾರಿಯಾಗಿ ಟಿವಿ ವ್ಯಾಪ್ತಿಯೊಂದಿಗೆ ಬರುವ ರಿಮೋಟ್ ಸಹ ನೆಟ್ಫ್ಲಿಕ್ಸ್ಗಾಗಿ ಡೆಡಿಕೇಟೆಡ್ ಬಟನ್ ಹೊಂದಿದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಗೂಗಲ್ ಪ್ಲೇ ಗಾಗಿ ತ್ವರಿತ ಫೈರ್ ಸ್ಟಿಕ್ಗಳನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo