ಇಂದು Realme P4 Power 5G ಸ್ಮಾರ್ಟ್‌ಫೋನ್ ಮಾರಾಟ ಪ್ರಾರಂಭ! ಇದು 10,001mAh ಬ್ಯಾಟರಿ ಇರುವ ಫೋನ್
Realme P4 Power 5G ಮೊಬೈಲ್ Flipkart ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ
Realme P4 Power 5G ಮೊಬೈಲ್ ಆರಂಭಿಕ ವೇರಿಯಂಟ್ ಬೆಲೆ 25,999 ರೂಗಳು ಆಗಿದೆ
Realme P4 Power 5G ಟ್ರಾನ್ಸ್‌ಸಿಲ್ವರ್, ಟ್ರಾನ್ಸ್‌ಆರೆಂಜ್ ಮತ್ತು ಟ್ರಾನ್ಸ್‌ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯ.
Realme ಮೊಬೈಲ್ ಸಂಸ್ಥೆಯ ಕಳೆದ ವಾರ ಬಿಡುಗಡೆ ಆಗಿರುವ Realme P4 Power 5G ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಮಾದರಿಯಲ್ಲಿದೆ. ತನ್ನ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಈ ಬಗ್ ಬ್ಯಾಟರಿ ಮೊಬೈಲ್ ಅಧಿಕೃತ Flipkart ಇ ಕಾಮರ್ಸ್ ವೆಬ್‌ಸೈಟ್ ಮೂಲಕ ಇಂದು (ಫೆಬ್ರವರಿ 5 ರಂದು) ಮಧ್ಯಾಹ್ನ 12 ಗಂಟೆಗೆ ಫಸ್ಟ್ ಸೇಲ್ ಶುರು ಮಾಡಲಿದೆ. ಗ್ರಾಹಕರಿಗೆ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸೌಲಭ್ಯ ಲಭ್ಯ ಇದೆ. ಅಂದಹಾಗೆ ಈ ಮೊಬೈಲ್ 10,001mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವ ಜೊತೆಗೆ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗಾದರೆ Realme P4 Power 5G ಬೆಲೆ ಎಷ್ಟು ಹಾಗೂ ಆಫರ್ ಏನು ಎನ್ನುವುದನ್ನು ಮುಂದೆ ತಿಳಿಯೋಣ.
SurveyAlso Read : Motorola Edge 70 ಬೆಲೆಯಲ್ಲಿ ಭಾರೀ ಇಳಿಕೆ! ಆಫರ್‌ನಲ್ಲಿ ಹೊಸ ಫೋನ್ ಖರೀದಿಸಲು ಇದು ಒಳ್ಳೆಯ ಚಾನ್ಸ್!
Realme P4 Power 5G: ಬೆಲೆ, ಆಫರ್ ಮತ್ತು ಲಭ್ಯತೆ
Realme P4 Power 5G ಮೊಬೈಲ್ ಇಂದು (ಫೆ 5 ರಂದು) ಮಧ್ಯಾಹ್ನ 12 ಗಂಟೆಯಿಂದ realme.com, Flipkart ಹಾಗೂ ರಿಟೇಲ್ ಸ್ಟೋರ್‌ಗಳ ಮೂಲಕ ಮೂಲಕ ಮಾರಾಟ ಶುರು ಮಾಡಲಿದೆ. ಈ ಫೋನಿನ 8GB RAM +128GB ವೇರಿಯಂಟ್ ದರವು 25,999 ರೂಗಳು ಆಗಿದೆ. ಹಾಗೆಯೇ ಇದರ 8GB + 256GB ವೇರಿಯಂಟ್ 27,999 ರೂಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಅಲ್ಲದೇ 12GB + 256GB ವೇರಿಯಂಟ್ ದರವು 30,999 ರೂಗಳು ಆಗಿದೆ. ಈ ಮೊಬೈಲ್ ಟ್ರಾನ್ಸ್‌ಸಿಲ್ವರ್, ಟ್ರಾನ್ಸ್‌ಆರೆಂಜ್ ಮತ್ತು ಟ್ರಾನ್ಸ್‌ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಹಾಗೂ ಆಕರ್ಷಕ no-cost EMI ಕೊಡುಗೆಗಳು ಪಡೆಯಬಹುದು.

Realme P4 Power 5G ಫೀಚರ್ಸ್ ಹೀಗಿವೆ
Realme P4 Power 5G ಮೊಬೈಲ್ 6.8 ಇಂಚಿನ 1.5K 4D ಕರ್ವ್+ ಹೈಪರ್‌ಗ್ಲೋ ಡಿಸ್‌ಪ್ಲೇ ಪಡೆದಿರುವ ಜೊತೆಗೆ 6,500 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ MediaTek Dimensity 7400 Ultra ಚಿಪ್‌ಸೆಟ್ ಪ್ರೊಸೆಸರ್ ಹೊಂದಿದ್ದು ಅಲ್ಲದೇ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ ಯುಐ 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ Realme P4 ಪವರ್ 5G ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾವು ಸೋನಿ IMX882 ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೌಲಭ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೇ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ.
ನೂತನ Realme P4 Power 5G ಫೋನ್ ಪ್ರಮುಖ ಪ್ಲಾಸ್ ಪಾಯಿಂಟ್ ಎಂದರೆ ಅದರ ಬ್ಯಾಟರಿ ಆಗಿದೆ. ಇದು 10,001mAh ಸಿಲಿಕಾನ್ ಕಾರ್ಬನ್ ಟೈಟಾನ್ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದೆ. ಈ ಬ್ಯಾಟರಿಯು 32.5 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್, 932.6 ಗಂಟೆಗಳ ವರೆಗೆ ಸ್ಟ್ಯಾಂಡ್‌ಬೈ, 185.7 ಗಂಟೆಗಳ ವರೆಗೆ Spotify ಮ್ಯೂಸಿಕ್ ಪ್ಲೇಬ್ಯಾಕ್ ನೀಡಲಿದೆ. ಹಾಗೆಯೇ ಇದು ಒಂದೇ ಚಾರ್ಜ್‌ನಲ್ಲಿ 11.7 ಗಂಟೆಗಳ ವರೆಗೆ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ ಗೇಮ್‌ಪ್ಲೇ ಅನ್ನು ಒದಗಿಸಬಲ್ಲದು ಎಂದು ಹೇಳಲಾಗಿದೆ. ಇನ್ನು ಈ ಬಿಗ್ ಬ್ಯಾಟರಿಗೆ ಪೂರಕವಾಗಿ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 27W ವೈರ್ಡ್ ರಿವರ್ಸ್ ಚಾರ್ಜಿಂಗ್ ವ್ಯವಸ್ಥೆ ಸಹ ನೀಡಲಾಗಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಸೌಲಭ್ಯ ಒಳಗೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile