Airtel ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಲ್ಲಿ ಭರ್ಜರಿ ಕೊಡುಗೆ: ಇಲ್ಲಿದೆ ಪೂರ್ಣ ಮಾಹಿತಿ
ದೇಶದ ಎರಡನೇ ದೊಡ್ಡ ಟೆಲಿಕಾಂ ಕಂಪನಿ ಎಂದೇ ಬಿಂಬಿತವಾಗಿರುವ ಭಾರ್ತಿ Airtel ತನ್ನ 999 ರೂ.ಗಳ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಮತ್ತಷ್ಟು ಆಕರ್ಷಕಗೊಳಿಸಿದೆ. ಈ ಯೋಜನೆಗಳಿಗೆ ಆಪಲ್‌ನ ಐಕ್ಲೌಡ್+ ಸೌಲಭ್ಯವನ್ನು ಸೇರ್ಪಡೆಗೊಳಿಸಲಾಗಿದ್ದು, ಇದರೊಂದಿಗೆ ಆಪಲ್ ಟಿವಿ ಮತ್ತು ಆಪ್ ಆರ್ಕೇಡ್ ಸಹ ದೊರೆಯಲಿದೆ. ಇದು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವುದರ ಜತೆಗೆ, ತಮ್ಮ ಹಾಲಿ ಯೋಜನೆಯನ್ನು ಅಪ್ ಗ್ರೇಡ್ ಮಾಡಲು ಮತ್ತೊಂದು ಬಲವಾದ ಕಾರಣವನ್ನು ನೀಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Samsung Galaxy A17 5G ಬೆಲೆಯಲ್ಲಿ ಈಗ ಜಬರ್ದಸ್ತ್ ಡಿಸ್ಕೌಂಟ್; ಆಫರ್ ಮಾಹಿತಿ ಇಲ್ಲಿದೆ
Airtel ಪೋಸ್ಟ್‌ಪೇಯ್ಡ್ ಕೊಡುಗೆ
ಏರ್‌ಟೆಲ್ ನ ಈ ನೂತನ ಪೋಸ್ಟ್‌ಪೇಯ್ಡ್ ಕೊಡುಗೆಯು ಆಪಲ್‌ನ ವಿಸ್ತರಿತ ಐಕ್ಲೌಡ್+ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ಆಪಲ್‌ನ ಟಿವಿಯ ಜನಪ್ರಿಯ ಪ್ರಶಸ್ತಿ ವಿಜೇತ ಒರಿಜಿನಲ್ ಕಾರ್ಯಕ್ರಮಗಳನ್ನು ವೀಕ್ಷಿಸುವ ಹಾಗೂ ಆಪಲ್‌ನ ಆರ್ಕೇಡ್ ಮೂಲಕ ನೂರಾರು ರೋಚಕ ಗೇಮ್‌ಗಳನ್ನು ಆಡುವ ಅವಕಾಶವನ್ನು ಕಲ್ಪಿಸುತ್ತದೆ. ಈ ನೂತನ ಸೌಲಭ್ಯವು 999 ರೂ.ಗಳ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪ್ಲಾನ್ ಹೊಂದಿರುವ ಏರ್‌ಟೆಲ್ ಗ್ರಾಹಕರಿಗೆ ಲಭ್ಯವಾಗಲಿದೆ.

ಐಕ್ಲೌಡ್+ ಮೂಲಕ ಏರ್‌ಟೆಲ್‌ನ ಲಕ್ಷಾಂತರ ಪೋಸ್ಟ್‌ಪೇಯ್ಡ್ ಗ್ರಾಹಕರು ತಮ್ಮ ಫೋಟೋಗಳು, ಫೈಲ್‌ಗಳು, ಪಾಸ್‌ವರ್ಡ್‌ಗಳು, ಸಂಪರ್ಕ ಸಂಖ್ಯೆಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ತಮ್ಮ ಆಪಲ್‌ನ ಡಿವೈಸ್‌ಗಳಲ್ಲಿ ಸುರಕ್ಷಿತವಾಗಿ ಶೇಖರಿಸಿಟ್ಟುಕೊಳ್ಳಲು, ಸಿಂಕ್ ಮಾಡಲು ಮತ್ತು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ. ಡಿಜಿಟಲ್ ಮಾಹಿತಿಯು ಸುರಕ್ಷಿತವಾಗಿ ಬ್ಯಾಕಪ್ ಆಗುವುದರಿಂದ, ಹೊಸ ಡಿವೈಸ್ ಪಡೆದಾಗಲೂ ಡೇಟಾವನ್ನು ಸುಲಭವಾಗಿ ಮರಳಿ ಪಡೆಯಬಹುದು. ಇದರೊಂದಿಗೆ, ಆಪಲ್‌ನ ಟಿವಿಯು ಆಪಲ್‌ನ ಅತ್ಯುನ್ನತ ಗುಣಮಟ್ಟದ ಒರಿಜಿನಲ್ ಸರಣಿಗಳು ಮತ್ತು ಚಲನಚಿತ್ರಗಳ ವೀಕ್ಷಣೆಗೆ ಅವಕಾಶ ನೀಡಿದರೆ, ಆಪಲ್ ಆರ್ಕೇಡ್ ಯಾವುದೇ ಕಿರಿಕಿರಿಯುಂಟುಮಾಡುವ ಜಾಹೀರಾತುಗಳು ಅಥವಾ ಆ್ಯಪ್ ಒಳಗಿನ ಹೆಚ್ಚುವರಿ ಖರೀದಿಗಳಿಲ್ಲದೆ. ನೂರಾರು ಗೇಮ್‌ಗಳನ್ನು ಅನಿಯಮಿತವಾಗಿ ಆಡುವ ಸೌಲಭ್ಯವನ್ನು ಒದಗಿಸುತ್ತದೆ.
999 ರೂ.ಗಳ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯು ಮೂವರು ಸದಸ್ಯರ ಕುಟುಂಬಕ್ಕೆ ಫಾಸ್ಟ್ ಲೇನ್ ತಂತ್ರಜ್ಞಾನದೊಂದಿಗೆ ಅನಿಯಮಿತ ಡೇಟಾ, ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಹಾಗೂ ಮನರಂಜನಾ ಚಂದಾದಾರಿಕೆಗಳನ್ನು ಒದಗಿಸುತ್ತದೆ. ಇದೀಗ ಆಪಲ್‌ನ ಐಕ್ಲೌಡ್+, ಆಪಲ್ ಟಿವಿ ಮತ್ತು ಆಪಲ್ ಆರ್ಕೇಡ್ ಸೇರ್ಪಡೆಯೊಂದಿಗೆ ಸಂಪರ್ಕ, ಮನರಂಜನೆ, ಗೇಮಿಂಗ್ ಮತ್ತು ಕ್ಲೌಡ್ ಸ್ಟೋರೇಜ್‌ಗಳು ಒಂದೇ ಪ್ಲಾನ್‌ನಲ್ಲಿ ದೊರೆಯಲಿವೆ.
ಇದು ಕುಟುಂಬಗಳಿಗೆ ಮತ್ತಷ್ಟು ಪ್ರಯೋಜನಕಾರಿಯಾಗಲಿದ್ದು, ಗ್ರಾಹಕರು ತಮ್ಮ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಮಹತ್ವದ ಕಾರಣವಾಗಲಿದೆ. ಗ್ರಾಹಕರು ಏರ್‌ಟೆಲ್ ಆಪ್ ಮೂಲಕ ಅಥವಾ ಹತ್ತಿರದ ಯಾವುದೇ ಏರ್‌ಟೆಲ್ ಮಳಿಗೆಗೆ ಭೇಟಿ ನೀಡಿ ಈ ಯೋಜನೆಗಳಿಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
