Digit.in

ನಾಳೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ Motorola Edge 70 Neo ಸ್ಮಾರ್ಟ್‌ಫೋನ್‌! ಕುತೂಹಲ ಹೆಚ್ಚಿಸಿದ ಫೀಚರ್ಸ್‌

Highlights

ನಾಳೆ ಭಾರತದಲ್ಲಿ ಮೊಟೊರೊಲಾ ಎಡ್ಜ್ 70 ನಿಯೋ ಫೋನ್‌ ಲಾಂಚ್

ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್‌ 32MP ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ

ಮೊಟೊರೊಲಾ ಎಡ್ಜ್ 70 ನಿಯೋ ಫೋನ್‌ ಸ್ನಾಪ್‌ಡ್ರಾಗನ್ 7s ಜೆನ್‌ 3 ಪ್ರೊಸೆಸರ್‌ ಪಡೆದಿರಲಿದೆ

ನಾಳೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ Motorola Edge 70 Neo ಸ್ಮಾರ್ಟ್‌ಫೋನ್‌! ಕುತೂಹಲ ಹೆಚ್ಚಿಸಿದ ಫೀಚರ್ಸ್‌

ಮೊಟೊರೊಲಾ ಮೊಬೈಲ್‌ ಕಂಪನಿಯು ಹೊಸದಾಗಿ Motorola Edge 70 Neo ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಮೊಟೊರೊಲಾ ಸಂಸ್ಥೆಯು ತನ್ನ ಈ ನೂತನ ಮೊಬೈಲ್‌ ಅನ್ನು ನಾಳೆ ( ನವೆಂಬರ್ 24 ರಂದು) ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್‌ 7,000mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್‌ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಈ ಮೊಬೈಲ್‌ ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಇದು ನಾಲ್ಕು ಆಕರ್ಷಕ ಕಲರ್‌ ಆಯ್ಕೆ ಪಡೆದಿರುವ ಜೊತೆಗೆ AMOLED ಡಿಸ್‌ಪ್ಲೇ ಪಡೆದಿರಲಿದೆ. ಹಾಗಾದರೇ ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

ನಾಳೆ ಮಾರುಕಟ್ಟೆಗೆ ಬರಲಿದೆ Motorola Edge 70 Neo

ದೇಶೀಯ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಮೊಟೊರೊಲಾ ಎಡ್ಜ್ 70 ನಿಯೋ ಫೋನಿನ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಮೊಬೈಲ್‌ ನಾಳೆ (ನವೆಂಬರ್ 24 ರಂದು) ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆದಿದೆ. ಈ ಫೋನ್‌ ನಾಲ್ಕು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಒಳಗೊಂಡಿರಲಿದೆ.

ಮೊಟೊರೊಲಾ ಎಡ್ಜ್ 70 ನಿಯೋ ನಿರೀಕ್ಷಿತ ಫೀಚರ್ಸ್‌

ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್‌ 6.8 ಇಂಚಿನ AMOLED 1.5K ಸೂಪರ್ ಹೆಚ್‌ಡಿ ಡಿಸ್ಪ್ಲೇ ಸೌಲಭ್ಯ ಹೊಂದಿರಲಿದ್ದು, ಇದರ ಸ್ಕ್ರೀನ್ 144Hz ರಿಫ್ರೆಶ್‌ ರೇಟ್‌ ನೀಡಲಿದೆ. ಫೋನಿನ ಡಿಸ್‌ಪ್ಲೇಯ ರಕ್ಷಣೆಗೆ Corning Gorilla Glass 7i ಬಳಸಲಾಗಿದೆ. ಅಲ್ಲದೇ ಈ ಫೋನ್‌ ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ 8GB + 128 GB ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ. ಹಾಗೆಯೇ ಇದು IP64 ರೇಟಿಂಗ್‌ ಸೌಲಭ್ಯ ಸಹ ಒಳಗೊಂಡಿರಲಿದೆ.

ಮೊಟೊರೊಲಾ ಎಡ್ಜ್ 70 ನಿಯೋ ಮೊಬೈಲ್‌ ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಗಮನ ನೀಡಿರುವಂತೆ ತೋರುತ್ತಿದ್ದು, ಇದು ಹಿಂಭಾಗದಲ್ಲಿ 50MP Sony LYT-710 ಪ್ರೈಮರಿ ಕ್ಯಾಮೆರಾ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ. ಅಲ್ಲದೇ ಇದು 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರುವುದು ಖಚಿತ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್ 16 ನೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಸಹ ಪಡೆಯುತ್ತದೆ.

Manthesh B

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile