Bharat Taxi ಯೋಜನೆಗೆ ಚಾಲನೆ; Ola, Uber ಗಿಂತ ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ಸಿಗಲಿದೆ

HIGHLIGHTS

Bharat Taxi ಸೇವೆಯು Ola, Uber ಗಳೊಂದಿಗೆ ಪೈಪೋಟಿ ನೀಡಲಿದೆ

Bharat Taxi ಸೇವೆಯಲ್ಲಿ ಚಾಲಕರೇ ಮಾಲೀಕರು

Bharat Taxi ಸೇವೆಯಲ್ಲಿ ಸರ್‌ ಚಾರ್ಜ್‌ ಶುಲ್ಕ, ಕಮಿಷನ್‌ ಇರಲ್ಲ

Bharat Taxi ಯೋಜನೆಗೆ ಚಾಲನೆ; Ola, Uber ಗಿಂತ ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ಸಿಗಲಿದೆ

ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ Bharat Taxi ಅಪ್ಲಿಕೇಶನ್ ಇಂದು (ಫೆಬ್ರವರಿ 5) ಬಿಡುಗಡೆ ಆಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು Bharat Taxi ಸೇವೆಗಳನ್ನು ಅಧಿಕೃತವಾಗಿ ಉದ್ಘಾಟಿಸಿದರು. ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ Bharat Taxi ವೇದಿಕೆಯನ್ನು ಸಹಕಾರ್ ಟ್ಯಾಕ್ಸಿ ಸಹಕಾರಿ ಲಿಮಿಟೆಡ್ (STCL) ನಿರ್ವಹಿಸುತ್ತದೆ. ಇದು ಹೆಚ್ಚಿನ ಕಮಿಷನ್‌ಗೆ ಬ್ರೇಕ್‌ ಹಾಕುವ ಉದ್ದೇಶ ಹೊಂದಿದ್ದು, ಪ್ರಯಾಣಿಕರ ಪಾವತಿಯು ಪೂರ್ಣವಾಗಿ ಚಾಲಕರಿಗೆ ಹೋಗುವುದನ್ನು ಖಚಿತಪಡಿಸುತ್ತದೆ. ಅಪ್ಲಿಕೇಶನ್‌ನ ಸೇವೆಗಳು, ಪ್ರಯೋಜನಗಳು ಮತ್ತು ಪ್ರಮುಖ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ಓದಿ.

Digit.in Survey
✅ Thank you for completing the survey!

Also Read : Vivo V50 5G ಮೊಬೈಲ್‌ ಈಗ ಕಡಿಮೆ ಬೆಲೆಗೆ ಲಭ್ಯ! ಡ್ಯುಯಲ್‌ ಕ್ಯಾಮೆರಾ, ಬಿಗ್ ಬ್ಯಾಟರಿ ಫೀಚರ್ಸ್‌ ಇವೆ

Bharat Taxi ಸೇವೆಗೆ ಚಾಲನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆಬ್ರವರಿ 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಮೊದಲ ಸಹಕಾರಿ ವಲಯದ Taxi ಸೇವೆಯಾದ Bharat Taxi ಯೋಜನೆಗೆ ಚಾಲನೆ ನೀಡಿದರು. ಹೊಸ Bharat Taxi ಅಪ್ಲಿಕೇಶನ್ ಸಹಕಾರಿ ವೇದಿಕೆಯಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಪ್ರಯಾಣಿಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಚಾಲನೆ ಆಗಿದೆ. ಆರಂಭದಲ್ಲಿ ಈ ಸೇವೆಯನ್ನು ದೆಹಲಿ-NRC ಯಲ್ಲಿ ಪ್ರಾರಂಭಿಸಲಾಗುತ್ತಿದೆ. ಆ ಬಳಿಕ ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಹಂತ ಹಂತವಾಗಿ ವಿಸ್ತರಿಸುವ ಯೋಜನೆಗಳು ಇವೆ ಎನ್ನಲಾಗಿದೆ.

ಏನಿದು Bharat Taxi ಸೇವೆ?

Bharat Taxi ಸೇವೆಯು ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ ಒದಗಿಸುವ ಆಪ್‌ ಆಧಾರಿತ ಟ್ಯಾಕ್ಸಿ ಸೇವೆ ಆಗಿದೆ. ಈ ಸೇವೆಯು ಸ್ವತಂತ್ರ ಸಹಕಾರಿಯಾಗಿದ್ದರೂ, ಇದು ಭಾರತ ಸರ್ಕಾರದಿಂದ ಕಾರ್ಯತಂತ್ರದ ಬೆಂಬಲವನ್ನು ಪಡೆದಿದೆ. ಈ ನೂತನ ಸೇವೆಯು ಹೆಚ್ಚಿನ ಕಮಿಷನ್‌ಗಳನ್ನು ತೆಗೆದುಹಾಕುವ ಉದ್ದೇಶ ಹೊಂದಿದ್ದು, ಚಾಲಕರಿಗೆ ಪೂರ್ಣ ಪಾವತಿ ಒದಗಿಸುವ ಗುರಿಯನ್ನು ಹೊಂದಿದೆ. ಭಾರತ್ ಟ್ಯಾಕ್ಸಿಯಲ್ಲಿ ಡ್ರೈವರ್​ಗಳೇ ಮಾಲೀಕರು ತತ್ವದಲ್ಲಿ ಕೆಲಸ. ಅಂದಹಾಗೆ Bharat Taxi ಆಪ್‌ನಲ್ಲಿ ಈಗಾಗಲೇ 3,00,000 ಕ್ಕೂ ಅಧಿಕ ಚಾಲಕರು ಮತ್ತು 1,00,000 ಕ್ಕೂ ಅಧಿಕ ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ.

Ola, Uber ಮತ್ತು Rapido ಗಳೊಂದಿಗೆ ಪೈಫೋಟಿ

ದೇಶದ ಮೆಟ್ರೋ ನಗರಗಳಲ್ಲಿ ಆಪ್‌ ಆಧಾರಿತ ಟ್ಯಾಕ್ಸಿ ಸೇವೆಗಳು ಜನಪ್ರಿಯತೆ ಪಡೆದಿವೆ. ಆ ಪೈಕಿ Ola, Uber ಮತ್ತು Rapido ಆಪ್‌ ಆಧಾರಿತ ಸಾರಿಗೆ ಸೇವೆಗಳು ಕೆಲವು ವರ್ಷಗಳಿಂದ ಬಳಕೆಯಲ್ಲಿವೆ. ನಗರಗಳಲ್ಲಿ ಈಗಾಗಲೇ ಚಾಲ್ತಿ ಇರುವ Ola, Uber ಮತ್ತು Rapido ಆಪ್‌ ಜನಪ್ರಿಯತೆಯನ್ನು ತಗ್ಗಿಸಲು ಹೊಸ Bharat Taxi ಆಪ್‌ ಆಧಾರಿತ ಟ್ಯಾಕ್ಸಿ ಸೇವೆಯು ಕೆಲಸ ಮಾಡಲಿದೆ.

ಅಗ್ಗದ ದರದಲ್ಲಿ ಟ್ಯಾಕ್ಸಿ ಸೇವೆ

Bharat Taxi ಸೇವೆಯು ರಿಯಾಯಿತಿ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸುವ ಉದ್ದೇಶ ಹೊಂದಿದ ಯೋಜನೆ ಆಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಚಾಲ್ತಿ ಇರುವ ಆಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಾದ Ola, Uber ಮತ್ತು Rapido ಗಳು ನಿಗದಿಪಡಿಸದ ಮಾರುಕಟ್ಟೆ ಬೆಲೆಗಿಂತ ಶೇ 20 ರಿಂದ 30% ನಷ್ಟು ಕಡಿಮೆ ಬೆಲೆಯಲ್ಲಿ ಸೇವೆ ನೀಡುವ ಗುರಿಯನ್ನು Bharat Taxi ಯೋಜನೆ ಹೊಂದಿದೆ. ಅಲ್ಲದೇ ಯಾವುದೇ ಕಮಿಷನ್ ಅಥವಾ ಸರ್ಜ್ ಶುಲ್ಕಗಳು ಇರುವುದಿಲ್ಲ ಎಂದು ವರದಿಯಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo