Google Pixel 10a ಬಿಡುಗಡೆಗೆ ಮುಹೂರ್ತ ಫೀಕ್ಸ್‌! ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್‌ ಹೀಗಿವೆ

HIGHLIGHTS

Google Pixel 10a ಮಾರುಕಟ್ಟೆ ಪ್ರವೇಶಿಸಲು ಅಧಿಕೃತ ದಿನಾಂಕ ನಿಗದಿ

Google Pixel 10a ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವ ಸಾಧ್ಯತೆ

Google Pixel 10a ಪ್ರೀಮಿಯಂ ಮೀಡ್‌ ರೇಂಜ್‌ ವಿಭಾಗದಲ್ಲಿ ಎಂಟ್ರಿ ಕೊಡಲಿದೆ

Google Pixel 10a ಬಿಡುಗಡೆಗೆ ಮುಹೂರ್ತ ಫೀಕ್ಸ್‌! ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್‌ ಹೀಗಿವೆ

ಸರ್ಚ್ ಇಂಜಿನ್ ದೈತ್ಯ Google ಕಮಪನಿಯು ಇದೀಗ Google Pixel 10a ಮೊಬೈಲ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಅಂದಹಾಗೆ ಇದು Google Pixel 9a ಫೋನಿನ ಉತ್ತರಾಧಿಕಾರಿ ಆಗಿ ಎಂಟ್ರಿ ಕೊಡಲಿದ್ದು ಕೆಲವು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು Pixel 10a ಮೊಬೈಲ್‌ ಈ ತಿಂಗಳ ಕೊನೆಯಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್‌ ಆಗಲಿದೆ ಎಂದು ಕಂಪನಿ ಘೋಷಿಸಿದೆ. ಪ್ರೀಮಿಯಂ ಮೀಡ್‌ ರೇಂಜ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿರುವ ಈ ಮೊಬೈಲ್‌ನ ಕೆಲವು ಲೀಕ್‌ ಫೀಚರ್ಸ್‌ ಗ್ರಾಹಕರಲ್ಲಿ ಕುತೂಹಲ ಇಮ್ಮಡಿಸುವಂತೆ ಮಾಡಿವೆ. ಹಾಗಾದರೆ Google Pixel 10a ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಇಂದು Realme P4 Power 5G ಸ್ಮಾರ್ಟ್‌ಫೋನ್‌ ಮಾರಾಟ ಪ್ರಾರಂಭ! ಇದು 10,001mAh ಬ್ಯಾಟರಿ ಇರುವ ಫೋನ್‌

Google Pixel 10a ಬಿಡುಗಡೆಗೆ ಮುಹೂರ್ತ ಫಿಕ್ಸ್‌

Google ಕಂಪನಿಯ ಮುಂಬರುವ Google Pixel 10a ಮೊಬೈಲ್‌ ಇದೇ February 18, 2026 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ಗೂಗಲ್‌ ತಿಳಿಸಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 18 ರಿಂದ ಗೂಗಲ್ ಇ-ಸ್ಟೋರ್ ಮೂಲಕ ಪೂರ್ವ ಆರ್ಡರ್‌ಗಳಿಗೆ ಲಭ್ಯ ಆಗಲಿದೆ. ಇನ್ನು ಫೋನಿನ ಬೆಲೆಯ ಬಗ್ಗೆ ಗೂಗಲ್‌ ಸಂಸ್ಥೆಯು ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಅದಾಗ್ಯೂ, ಈ ಮೊಬೈಲ್‌ನ ಆರಂಭಿಕ ವೇರಿಯಂಟ್‌ 8GB RAM + 128GB ವೇರಿಯಂಟ್‌ 49,999 ರೂಗಳ ಬೆಲೆಯೊಂದಿಗೆ ಲಾಂಚ್‌ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

Google Pixel 10a ನಿರೀಕ್ಷಿತ ಫೀಚರ್ಸ್‌

ಮುಂಬರುವ Google Pixel 10a ಫೋನ್‌ 6.3 ಇಂಚಿನ ಪೂರ್ಣ ಹೆಚ್‌ಡಿ+ AMOLED ಡಿಸ್‌ಪ್ಲೇ ಪಡೆದಿರಲಿದೆ ಎನ್ನಲಾಗಿದೆ. ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಪಡೆದಿರಲಿದ್ದು ಜೊತೆಗೆ 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್ ಜೊತಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ನೂತನ ಮೊಬೈಲ್‌ Tensor G4 chipset ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಪೋರ್ಟ್‌ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆಯಲು ಇದು IP68 ರೇಟಿಂಗ್ ಸೌಲಭ್ಯ ಪಡೆದಿರಬಹುದು.

ಹಾಗೆಯೇ Google Pixel 10a ಮೊಬೈಲ್‌ ತನ್ನ ವರ್ಗದಲ್ಲೇ ಉತ್ತಮ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರಲಿದೆ. ಈ ಮೊಬೈಲ್‌ 48MP ಮುಖ್ಯ ಕ್ಯಾಮೆರಾವನ್ನು OIS ಸಪೋರ್ಟ್‌ ಜೊತೆಗೆ ಹೊಂದಿರಲಿದೆ. ಹಾಗೆಯೇ 13MP ಅಲ್ಟ್ರಾವೈಡ್ ಸೆನ್ಸರ್‌ ಕ್ಯಾಮೆರಾ ಆಯ್ಕೆ ಕೂಡಾ ಒಳಗೊಂಡಿರಬಹುದು. ಇದಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಹೊಂದಿರಬಹುದು. ಇದರೊಂದಿಗೆ ಈ ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 23W ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo