ಬರೋಬ್ಬರಿ 600GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡುವ ಈ BSNL ಯೋಜನೆಯ ಬೆಲೆ ಎಷ್ಟು ಗೊತ್ತಾ?

ಬರೋಬ್ಬರಿ 600GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡುವ ಈ BSNL ಯೋಜನೆಯ ಬೆಲೆ ಎಷ್ಟು ಗೊತ್ತಾ?
HIGHLIGHTS

BSNL ಕಂಪನಿ ತಮ್ಮ ಬಳಕೆದಾರರಿಗೆ ಹತ್ತಾರು ಯೋಜನೆಗಳನ್ನು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ.

ವಾರ್ಷಿಕ ಯೋಜನೆಗಳಲ್ಲಿ ಬೇರೆ ಪ್ರತಿಸ್ಪರ್ಧಿಯಾಗಿರುವ Jio, Airtel ಮತ್ತು Vi ಕಂಪನಿಗಳಿಗೆ ಸೈಡ್ ಹೊಡೆದು ಅದ್ದೂರಿಯಾಗಿ ವೇಗವಾಗಿ ಬೆಳೆಯುತ್ತಿದೆ.

BSNL ನೀಡುತ್ತಿರುವ ವಾರ್ಷಿಕ ಯೋಜನೆಯಾಗಿರುವ 1999 ರೂಗಳ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ.

ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಕಂಪನಿ ತಮ್ಮ ಬಳಕೆದಾರರಿಗೆ ಹತ್ತಾರು ಯೋಜನೆಗಳನ್ನು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಇದರಲ್ಲಿ ವಾರ್ಷಿಕ ಯೋಜನೆಗಳಲ್ಲಿ ಬೇರೆ ಪ್ರತಿಸ್ಪರ್ಧಿಯಾಗಿರುವ Jio, Airtel ಮತ್ತು Vi ಕಂಪನಿಗಳಿಗೆ ಸೈಡ್ ಹೊಡೆದು ಅದ್ದೂರಿಯಾಗಿ ವೇಗವಾಗಿ ಬೆಳೆಯುತ್ತಿದೆ. BSNL ನೀಡುತ್ತಿರುವ ವಾರ್ಷಿಕ ಯೋಜನೆಯಾಗಿರುವ 1999 ರೂಗಳ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ. ಅಲ್ಲದೆ ಈ ಬೆಲೆಗೆ ಬೇರೆ ಯಾರು ನೀಡದ ಪ್ರಯೋಜನಗಳನ್ನು ಕಂಪನಿ ನೀಡುತ್ತಿರುವುದು ಬಳಕೆದಾರರಿಗೆ ಆಕರ್ಷಿಸಲು ಕಾರಣವಾಗಿದೆ. ಅಲ್ಲದೆ ನಿಮ್ಮ ಪ್ರತಿಯೊಂದು ಸ್ಮಾರ್ಟ್ಫೋನಲ್ಲಿರುವ ಪ್ರೈಮರಿ ಸಿಮ್ ಕಾರ್ಡ್ ಹೊರೆತು ಪಡೆಸಿ ಎರಡನೇ ಸಿಮ್ ಆಕ್ಟಿವ್ ಆಗಿಡಲು ಬಯಸುವವರಿಗೆಗಾಗಿ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.

Also Read: Happy Teachers Day 2024: ​​ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬ ಶಿಕ್ಷಕರಿಗೆ WhatsApp ಸ್ಟಿಕರ್ ಶುಭಾಶಯ ಕಳುಹಿಸಿ!

BSNL ರೂ 1999 ಪ್ರಿಪೇಯ್ಡ್ ಯೋಜನೆ ಸಂಪೂರ್ಣ ವಿವರಗಳು

BSNL ತನ್ನ ರೂ 1999 ಪ್ರಿಪೇಯ್ಡ್ ಯೋಜನೆಯನ್ನು ಒಟ್ಟು 365 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ದೇಶದ ಬಹು ವಲಯಗಳಲ್ಲಿ ಲಭ್ಯವಿದೆ. BSNL ನಿಂದ ಈ ಪ್ರಿಪೇಯ್ಡ್ ಯೋಜನೆಯನ್ನು ಖರೀದಿಸುವ ಬಳಕೆದಾರರು ಅನಿಯಮಿತ ವಾಯ್ಸ್ ಕರೆ, 100 SMS/ದಿನ ಮತ್ತು 600GB ಒಟ್ಟು ಮೊತ್ತದ ಡೇಟಾವನ್ನು ಪಡೆಯುತ್ತಾರೆ. ಈ ಪ್ಲಾನ್‌ನೊಂದಿಗೆ ಬಳಕೆದಾರರು 600GB ಒಟ್ಟು ಮೊತ್ತದ ಡೇಟಾವನ್ನು ಪಡೆಯುತ್ತಾರೆ ಇದನ್ನು ಬಳಕೆದಾರರು ಯಾವಾಗ ಬೇಕಾದರೂ ಬಳಸಬಹುದು. ಇಂದು ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳು ಯಾವುದೇ ದೈನಂದಿನ ಡೇಟಾ ಮಿತಿಗಳಿಲ್ಲದೆ ಬರುತ್ತವೆ. ಆದರೆ ಈ ಯೋಜನೆಯೊಂದಿಗೆ ಆ ಮಿತಿಯು ಸಂಪೂರ್ಣ ಬಳಕೆದಾರರಿಗೆ 600GB ಆಗಿದೆ.

BSNL recharge plan offers 600GB data and calling for 365 days
BSNL recharge plan offers 600GB data and calling for 365 days

ಈ ಯೋಜನೆಯೊಂದಿಗೆ ನೀಡಲಾಗುವ 600GB ಡೇಟಾವನ್ನು ಅವರು ಯಾವಾಗ ಬಳಸಲು ಬಯಸುತ್ತಾರೆ ಎಂಬುದು ಬಳಕೆದಾರರ ಮೇಲೆ ಅವಲಂಬಿತವಾಗಿರುತ್ತದೆ. ಅವರು ಒಂದೇ ದಿನದಲ್ಲಿ ಎಲ್ಲವನ್ನೂ ಬಳಸಬಹುದು ಅಥವಾ ಇಡೀ ವರ್ಷಕ್ಕೆ ಅನುಗುಣವಾಗಿ ಬಜೆಟ್ ಮಾಡಬಹುದು. ಬಳಕೆದಾರರು ಅವರಿಗೆ ಅಗತ್ಯವಿರುವಾಗ ಮತ್ತು ನಿರ್ದಿಷ್ಟ ದಿನದಂದು ಸಾಕಷ್ಟು ಡೇಟಾವನ್ನು ಬಳಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. 600GB ಡೇಟಾ ಬಳಕೆ ಮುಗಿದ ನಂತರ ಇಂಟರ್ನೆಟ್ ವೇಗವು 80Kbps ಇಳಿಯುತ್ತದೆ. ಬಳಕೆದಾರರು 30 ದಿನಗಳವರೆಗೆ PRBT, 30 ದಿನಗಳವರೆಗೆ Eros Now ಮನರಂಜನೆ ಮತ್ತು 30 ದಿನಗಳವರೆಗೆ Lokdhun ವಿಷಯಕ್ಕೆ ಪ್ರವೇಶವನ್ನು ಪಡೆಯುತ್ತಾರೆ.

ನನ್ನ ತೀರ್ಮಾನದ ಅಭಿಪ್ರಾಯ:

ಈ ಯೋಜನೆ ಯಾರ್ಯಾರಿಗೆ ಹೆಚ್ಚು ಡೇಟಾ ಬೇಕೋ ಅವರೌ ಬಳಸಬಹುದು. ಅಲ್ಲದೆ ಈಗಾಗಲೇ ಮೇಲೆ ತಿಳಿಸಿರುವಂತೆ ಮಾರುಕಟ್ಟೆಯಲ್ಲಿ ಬೇರೆ ಯಾರು ನೀಡದ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ನೀಡುತ್ತಿರುವುದು ಒಂದು ಸಕಾರಾತ್ಮಕ ಅಂಶವಾಗಿದೆ. ನಿಮಗೆ ಡೇಟಾದೊಂದಿಗೆ ಅನಿಯಮಿತ ಕರೆಗಳಿಗೆ ಆದ್ಯತೆ ನೀಡುವ ಭಾರೀ ಇಂಟರ್ನೆಟ್ ಬಳಕೆದಾರರಿಗೆ ಈ BSNL 1999 ಯೋಜನೆಯು ಸೂಕ್ತವಾದ ಆಯ್ಕೆಯಾಗಿದೆ. ಇದರ ಸಮಗ್ರ ಫೀಚರ್ ಮತ್ತು ದೀರ್ಘಾವಧಿಯ ಅವಧಿಯು ವಿಶ್ವಾಸಾರ್ಹ ಮತ್ತು ತಡೆರಹಿತ ದೂರಸಂಪರ್ಕ ಸೇವೆಗಳ ಅಗತ್ಯವಿರುವ ವ್ಯಕ್ತಿಗಳಿಗೆ ಇದು ಮೌಲ್ಯಯುತವಾದ ಆಯ್ಕೆಯಾಗಿರುವುದರಲ್ಲಿ ಎರಡು ಮಾತಿಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo