ಸದ್ಯದಲ್ಲೇ ಬರ್ತಿದೆ Infinix Note 60 ಸ್ಮಾರ್ಟ್‌ಫೋನ್ ಸರಣಿ! ಬಿಡುಗಡೆ ಮುನ್ನವೇ ಫೀಚರ್ಸ್ ಲೀಕ್
ಶೀಘ್ರದಲ್ಲೇ Infinix Note 60 Series ಮಾರುಕಟ್ಟೆಗೆ ಬರಲಿದೆ
Infinix Note 60 Series ಮೂರು ವೇರಿಯಂಟ್‌ಗಳ ಆಯ್ಕೆ ಪಡೆದಿರಲಿದೆ
Infinix Note 60 Series ಮೂರು ಫೋನ್‌ಗಳು ಭಿನ್ನ ಬ್ಯಾಟರಿ ಸಾಮರ್ಥ್ಯ ಹೊಂದಿರಲಿವೆ
Infinix ಮೊಬೈಲ್ ಸಂಸ್ಥೆಯು ಇದೀಗ ಮಾರುಕಟ್ಟೆಗೆ Infinix Note 60 ಸರಣಿಯನ್ನು ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿದೆ. ಇನ್ನು Infinix ಸಂಸ್ಥೆಯಿಂದ ಬರಲಿರುವ ಹೊಸ ಸರಣಿಯು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದ್ದು ಅವುಗಳು ಕ್ರಮವಾಗಿ Infinix Note 60, Infinix Note 60 Pro ಮತ್ತು Infinix Note 60 Ultra ಮಾಡೆಲ್ ಆಗಿರಲಿವೆ ಎಂದು ಹೇಳಲಾಗಿದೆ. ಅಂದಹಾಗೆ ಅಧಿಕೃತ ಲಾಂಚ್‌ಗೂ ಮುನ್ನವೇ Infinix Note 60 ಸರಣಿ ಫೋನ್‌ಗಳ ಮೆಮೊರಿ, ಬ್ಯಾಟರಿ ಸಾಮರ್ಥ್ಯ, ಪ್ರೊಸೆಸರ್ ಸೇರಿದಂತೆ ಕೆಲವು ಮಾಹಿತಿಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಹಾಗಾದರೆ ಮಾರುಕಟ್ಟೆ ಪ್ರವೇಶಿಸಲಿರುವ Infinix Note 60 ಸರಣಿಯ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಡ್ಯುಯಲ್ ಸೆಲ್ಫಿ ಕ್ಯಾಮೆರಾ ಇರುವ Xiaomi 14 Civi ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ!
Infinix Note 60 ಸರಣಿ ಬಿಡುಗಡೆ ದಿನಾಂಕ ಮತ್ತು ನಿರೀಕ್ಷಿತ ಬೆಲೆ
Infinix ಸಂಸ್ಥೆಯ ಮುಂಬರುವ Infinix Note 60 ಸರಣಿಯು ಅತೀ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಅಂದಹಾಗೆ ಈ ಸರಣಿ ಫೋನ್‌ಗಳ ವೇರಿಯಂಟ್ ಆಯ್ಕೆಗಳ ಬಗ್ಗೆ ಮಾಹಿತಿ ಲೀಕ್ ಆಗಿದೆ. Infinix Note 60 ಮೊಬೈಲ್ 8 GB RAM ಆಯ್ಕೆಯ ಜೊತೆಗೆ 128GB ಅಥವಾ 256GB ಆಂತರಿಕ ಸ್ಟೋರೇಜ್ ವೇರಿಯಂಟ್ ಪಡೆದಿರುವ ಸಾಧ್ಯತೆಯಿದೆ. ಹಾಗೆಯೇ Infinix Note 60 Pro ಮೊಬೈಲ್ 8GB + 128GB, 8GB + 256GB ಮತ್ತು 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದೆ. ಇನ್ನು Infinix Note 60 Ultra ಮೊಬೈಲ್ 12GB RAM ಜೊತೆಗೆ 256GB ಮತ್ತು 512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರುವ ಸಾಧ್ಯತೆಗಳು ಇವೆ.

Infinix Note 60 ಸರಣಿಯ ನಿರೀಕ್ಷಿತ ಫೀಚರ್ಸ್
Infinix Note 60 ಸರಣಿಯಲ್ಲಿ ಲಗ್ಗೆ ಇಡುವ ಮೂರು ಫೋನ್‌ಗಳು ಭಿನ್ನ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿವೆ ಎನ್ನಲಾಗಿದೆ. Infinix Note 60 ಮೊಬೈಲ್ 5,990mAh ಬ್ಯಾಟರಿ ಹೊಂದಿರಬಹುದು ಎನ್ನಲಾಗಿದೆ. ಹಾಗೆಯೇ Infinix Note 60 Pro ಮೊಬೈಲ್ 5,850mAh ಅಥವಾ 6,340mAh ಬ್ಯಾಟರಿ ಸಪೋರ್ಟ್ ಪಡೆದಿರಲಿದೆ ಎನ್ನಲಾಗಿದೆ. ಅದೇ ರೀತಿ Infinix Note 60 Ultra ಮೊಬೈಲ್ 6,500mAh ಸಾಮರ್ಥ್ಯ ಬ್ಯಾಟರಿ ಸಪೋರ್ಟ್ ಒಳಗೊಂಡಿರಬಹುದು ಎಂದು ಲೀಕ್ ಮಾಹಿತಿಗಳು ಸೂಚಿಸುತ್ತವೆ.
ಅಲ್ಲದೇ Infinix Note 60 ಮೊಬೈಲ್ MediaTek Dimensity 7360 ಚಿಪ್‌ಸೆಟ್ ಪ್ರೊಸೆಸರ್ ಸಪೋರ್ಟ್ ಒಳಗೊಂಡಿರಲಿದೆ ಎನ್ನಲಾಗಿದ್ದು, ಜೊತೆಗೆ ಆಂಡ್ರಾಯ್ಡ್ 16 ಓಎಸ್ ಬೆಂಬಲ ಸಹ ಇರಲಿದೆ. ಹಾಗೆಯೇ Infinix Note 60 Pro ಮೊಬೈಲ್ Snapdragon 7s Gen 4 SoC ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಬಹುದು. ಇನ್ನು ಈ ಮೊಬೈಲ್ 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಎಂಟ್ರಿ ಕೊಡಲಿದೆ ಎಂದು ಸೂಚಿಸುತ್ತವೆ. ಇನ್ನು ಈ ಮೊಬೈಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಸಪೋರ್ಟ್ ಪಡೆದಿರುವ ಸಾಧ್ಯತೆಗಳು ಅಧಿಕ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile