BSNL ನ ಈ ವಾರ್ಷಿಕ ವ್ಯಾಲಿಡಿಟಿ ಪ್ಲಾನಿನಲ್ಲಿ ಉಚಿತ ವಾಯ್ಸ್ ಕರೆ ಜೊತೆಗೆ ಪ್ರತಿದಿನ 3GB ಡೇಟಾ ಪ್ರಯೋಜನ
BSNL ನಿಂದ 365 ದಿನಗಳ ಮಾನ್ಯತೆಯ ಎರಡು ಅತ್ಯುತ್ತಮ ಯೋಜನೆಗಳು
BSNL ನ ಈ ಯೋಜನೆಗಳಲ್ಲಿ ಡೇಟಾ, SMS ಮತ್ತು ಉಚಿತ ವಾಯ್ಸ್ ಕರೆ ಸೌಲಭ್ಯ ಲಭ್ಯ
BSNL 2,626 ರೂ.ಗಳ ವಾರ್ಷಿಕ ಪ್ಲಾನ್ ಸೀಮಿತ ಅವಧಿಯ ಕೊಡುಗೆ ಆಗಿದೆ
BSNL Annual Plans: ಭಾರತೀಯ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ BSNL ಟೆಲಿಕಾಂ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. BSNL ಕಂಪನಿಯು ಈಗಾಗಲೇ ತನ್ನ ಗ್ರಾಹಕರಿಗಾಗಿ ಭಿನ್ನ ದರಗಳಲ್ಲಿ ಕೆಲವು ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದೆ. ಆ ಲಿಸ್ಟ್‌ನಲ್ಲಿನ ಎರಡು ವಾರ್ಷಿಕ ಯೋಜನೆಗಳು ಗಮನ ಸೆಳೆಯುವಂತಿವೆ. ಈ ನೂತನ ಯೋಜನೆಗಳು ಪೂರ್ಣ ವಾರ್ಷಿಕ ವ್ಯಾಲಿಡಿಟಿ ಸೇವೆಯನ್ನು ಒದಗಿಸಲಿವೆ. ಈ ಯೋಜನೆಗಳು ಉಚಿತ ವಾಯ್ಸ್ ಕರೆ, ಡೇಟಾ, ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಒಳಗೊಂಡಿವೆ. ಅಂದಹಾಗೆ ಈ ಯೋಜನೆಗಳು ಅಧಿಕ ವ್ಯಾಲಿಡಿಟಿ ಮತ್ತು ಸ್ಥಿರ ಬಳಕೆಯನ್ನು ಬಯಸುವ ಗ್ರಾಹಕರಿಗೆ ಹೆಚ್ಚು ಉಪಯುಕ್ತ ಎನಿಸುತ್ತವೆ. ಹಾಗಾದರೆ BSNL ಟೆಲಿಕಾಂನ ವಾರ್ಷಿಕ ಮಾನ್ಯತೆಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಶೀಘ್ರದಲ್ಲೇ Google Pixel 10a ಬಿಡುಗಡೆ! ನಿರೀಕ್ಷಿತ ಫೀಚರ್ಸ್ ಮತ್ತು ಬೆಲೆ ಮಾಹಿತಿ ಇಲ್ಲಿದೆ
BSNL 2,626 ರೂ.ಗಳ ವಾರ್ಷಿಕ ಪ್ಲಾನ್ ಪ್ರಯೋಜನಗಳು
BSNL ಸಂಸ್ಥೆಯ 2,626 ರೂ.ಗಳ ಪ್ಲಾನ್ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆ ಆಗಿದೆ. ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2.6GB ಡೇಟಾ ಪ್ರಯೋಜನ ಪಡೆಯುತ್ತಾರೆ. ಡೇಟಾ ಪ್ರಯೋಜನಗಳ ಜೊತೆಗೆ ಈ ಪ್ಲಾನ್ ಭಾರತದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನು ಸೌಲಭ್ಯ ಒದಗಿಸುತ್ತದೆ. ಸ್ಥಳೀಯ ಕರೆ ಅಥವಾ ರಾಷ್ಟ್ರೀಯ ಕರೆ ಆಗಿರಲಿ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಳಕೆದಾರರು ವಾಯ್ಸ್ ಕರೆಗಳನ್ನು ಮಾಡಲು ಅವಕಾಶ ಇರಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ.

BSNL 2,799 ರೂ.ಗಳ ವಾರ್ಷಿಕ ಪ್ಲಾನ್ ಸೌಲಭ್ಯಗಳು
BSNL ಸಂಸ್ಥೆಯ ಹೊಸ 2,799 ರೂ.ಗಳ ಪ್ಲಾನಿನಲ್ಲಿ ಬಳಕೆದಾರರಿಗೆ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಪಡೆಯುತ್ತಾರೆ. ಇನ್ನು ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ ಕಡಿಮೆ ಆಗುವುದು. ಡೇಟಾ ಸೌಲಭ್ಯಗಳ ಜೊತೆಗೆ ಈ ಯೋಜನೆಯಲ್ಲಿ ಭಾರತದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನು ಸೌಲಭ್ಯ ಸಿಗಲಿದೆ. ಸ್ಥಳೀಯ ಕರೆ ಅಥವಾ ರಾಷ್ಟ್ರೀಯ ಕರೆ ಆಗಿರಲಿ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಳಕೆದಾರರು ವಾಯ್ಸ್ ಕರೆಗಳನ್ನು ಮಾಡಲು ಅವಕಾಶ ಇರಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ.
BSNL ವಾರ್ಷಿಕ ಪ್ಲಾನ್‌ಗಳ ಲಭ್ಯತೆ
BSNL ಭಾರತ್ ಕನೆಕ್ಟ್ 26 ಯೋಜನೆಯಡಿ ಹೊಸ 2,626 ರೂ.ಗಳ ವಾರ್ಷಿಕ ಪ್ಲಾನ್ ಸೀಮಿತ ಅವಧಿಗೆ ಲಭ್ಯವಿದೆ. ಈ ಯೋಜನೆಯು ಫೆಬ್ರವರಿ 24, 2026 ರ ವರೆಗೆ ರೀಚಾರ್ಜ್ ಲಭ್ಯ ಇರಲಿದೆ ಎನ್ನಲಾಗಿದೆ. ಇನ್ನು BSNL 2,799 ರೂ.ಗಳ ವಾರ್ಷಿಕ ಪ್ಲಾನ್ ಕಡೆಯ ದಿನಾಂಕದ ಬಗ್ಗೆ ಯಾವುದೇ ಅಪ್‌ಡೇಟ್ ಮಾಹಿತಿ ಇಲ್ಲ. BSNL ಗ್ರಾಹಕರು BSNL ಸೆಲ್ಫ್‌ಕೇರ್ ಆಪ್, BSNL ವೆಬ್‌ಸೈಟ್ ಅಥವಾ ಇತರೆ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಯೋಜನೆಗಳನ್ನು ರೀಚಾರ್ಜ್ ಮಾಡಬಹುದು.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile