ಶೀಘ್ರದಲ್ಲೇ Google Pixel 10a ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಮತ್ತು ಬೆಲೆ ಮಾಹಿತಿ ಇಲ್ಲಿದೆ

HIGHLIGHTS

Google Pixel 10a ಮೊಬೈಲ್‌ ಇದೇ ಮಾರ್ಚ್ 5, 2026 ರಂದು ಬಿಡುಗಡೆ ಆಗುವ ಸಾಧ್ಯತೆ

Google Pixel 10a ಫೋನ್‌ ಆರಂಭಿಕ ವೇರಿಯಂಟ್‌ ಬೆಲೆ 49,999 ರೂಗಳು ಎನ್ನಲಾಗಿದೆ

Google Pixel 10a ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದೆ ಎನ್ನಲಾಗಿದೆ

ಶೀಘ್ರದಲ್ಲೇ Google Pixel 10a ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಮತ್ತು ಬೆಲೆ ಮಾಹಿತಿ ಇಲ್ಲಿದೆ

ಸರ್ಚ್ ಇಂಜಿನ್ ದೈತ್ಯ Google ಸಂಸ್ಥೆಯು ತನ್ನ Pixel ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಸಂಸ್ಥೆಯು ಇತ್ತೀಚಿಗೆ ಗೂಗಲ್‌ ಪಿಕ್ಸಲ್‌ 10 ಸರಣಿಯನ್ನು ಪರಿಚಯಿಸಿದ್ದು, ಇದೀಗ Google Pixel 10a ಮೊಬೈಲ್‌ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಇನ್ನು ಇತ್ತೀಚಿಗಿನ ಕೆಲವು ಲೀಕ್‌ ಮಾಹಿತಿಗಳ ಪ್ರಕಾರ ಬರಲಿರುವ Google Pixel 10a ಫೋನ್‌ ಮುಖ್ಯವಾಗಿ ಡಿಸೈನ್‌ ಹಾಗೂ ಫೀಚರ್ಸ್‌ಗಳಲ್ಲಿ ಯಾವುದೇ ದೊಡ್ಡ ಅಪ್‌ಗ್ರೇಡ್‌ ಪಡೆಯುವುದಿಲ್ಲ ಎನ್ನಲಾಗಿದೆ. ಅದಾಗ್ಯೂ ಪ್ರೀಮಿಯಂ ಮೀಡ್‌ ರೇಂಜ್‌ ವಿಭಾಗದಲ್ಲಿ ಲಗ್ಗೆ ಇಡಲಿರುವ ಈ ಸ್ಮಾರ್ಟ್‌ಫೋನಿನ ಕೆಲವು ಲೀಕ್‌ ಫೀಚರ್ಸ್‌ ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ಹಾಗಾದರೇ Google Pixel 10a ಫೋನಿನ ಫೀಚರ್ಸ್‌, ಲಾಂಚ್‌ ಡೇಟ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾದ Samsung Galaxy F70e ಫೋನ್‌! ನಿರೀಕ್ಷಿತ ಫೀಚರ್ಸ್‌ ಏನು?

Google Pixel 10a: ಬಿಡುಗಡೆ ದಿನಾಂಕ ಮತ್ತು ನಿರೀಕ್ಷಿತ ಬೆಲೆ

Google ಸಂಸ್ಥೆಯ ಮುಂಬರುವ Google Pixel 10a ಮೊಬೈಲ್‌ ಇದೇ ಮಾರ್ಚ್ 5, 2026 ರಂದು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 18 ರಿಂದ Flipkart ಮತ್ತು ಗೂಗಲ್ ಇ-ಸ್ಟೋರ್ ಮೂಲಕ ಪೂರ್ವ ಆರ್ಡರ್‌ಗಳಿಗೆ ಲಭ್ಯವಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಗೂಗಲ್‌ ಸಂಸ್ಥೆಯ Google Pixel 10a ಮೊಬೈಲ್‌ ಬೆರ್ರಿ, ಫಾಗ್, ಲ್ಯಾವೆಂಡರ್ ಮತ್ತು ಅಬ್ಸಿಡಿಯನ್ ಕಲರ್‌ಗಳ ಆಯ್ಕೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ. ಇನ್ನು ಈ ಫೋನಿನ 8GB RAM + 128GB ವೇರಿಯಂಟ್‌ 49,999 ರೂಗಳ ಬೆಲೆ ಪಡೆದಿರಬಹುದು. ಹಾಗೆಯೇ 8GB RAM + 256GB ಸ್ಟೋರೇಜ್‌ ವೇರಿಯಂಟ್‌ 69,000 ರೂಗಳ ಪ್ರೈಸ್‌ಟ್ಯಾಗ್‌ನೊಂದಿಗೆ ಲಾಂಚ್‌ ಆಗುವ ಸಾಧ್ಯತೆಗಳು ಇವೆ.

Google Pixel 10a ಫೋನಿನ ನಿರೀಕ್ಷಿತ ಫೀಚರ್ಸ್‌

ಮುಂಬರುವ Google Pixel 10a ಮೊಬೈಲ್‌ 6.3 ಇಂಚಿನ ಪೂರ್ಣ ಹೆಚ್‌ಡಿ+ AMOLED ಡಿಸ್‌ಪ್ಲೇ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಪಡೆದಿರಲಿದ್ದು ಜೊತೆಗೆ 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್ ಜೊತಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ನೂತನ ಮೊಬೈಲ್‌ Tensor G4 chipset ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಪೋರ್ಟ್‌ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆಯಲು ಇದು IP68 ರೇಟಿಂಗ್ ಸೌಲಭ್ಯ ಪಡೆದಿರಬಹುದು.

ಅಲ್ಲದೇ Google Pixel 10a ಮೊಬೈಲ್‌ ತನ್ನ ವರ್ಗದಲ್ಲೇ ಉತ್ತಮ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದೆ. ಈ ಮೊಬೈಲ್‌ 48MP ಪ್ರಾಥಮಿಕ ಕ್ಯಾಮೆರಾವನ್ನು OIS ಸಪೋರ್ಟ್‌ ಜೊತೆಗೆ ಹೊಂದಿರಲಿದೆ. ಹಾಗೆಯೇ 13MP ಅಲ್ಟ್ರಾವೈಡ್ ಸೆನ್ಸರ್‌ ಕ್ಯಾಮೆರಾ ಆಯ್ಕೆ ಕೂಡಾ ಒಳಗೊಂಡಿರಬಹುದು. ಇದಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಹೊಂದಿರಬಹುದು. ಇದರೊಂದಿಗೆ ಈ ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 23W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo