ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾದ Samsung Galaxy F70e ಫೋನ್‌! ನಿರೀಕ್ಷಿತ ಫೀಚರ್ಸ್‌ ಏನು?

HIGHLIGHTS

Samsung Galaxy F70e ಮೊಬೈಲ್‌ ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ

Samsung Galaxy F70e ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರುವ ನಿರೀಕ್ಷೆಗಳು ಇವೆ

Samsung Galaxy F70e ಫೋನ್‌ MediaTek Dimensity 6300 ಚಿಪ್‌ಸೆಟ್‌ ಹೊಂದಿರುವ ನಿರೀಕ್ಷೆ ಇದೆ

ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾದ Samsung Galaxy F70e ಫೋನ್‌! ನಿರೀಕ್ಷಿತ ಫೀಚರ್ಸ್‌ ಏನು?

ದಕ್ಷಿಣ ಕೊರಿಯಾದ ಟೆಕ್ ದೊಡ್ಡಣ್ಣ Samsung ಕಂಪನಿಯು ತನ್ನ F ಸರಣಿಯಲ್ಲಿ ಹೊಸದಾಗಿ Samsung Galaxy F70 ಸರಣಿ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಬಗ್ಗೆ ಕಂಪನಿಯು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಈಗಾಗಲೇ ಟೀಸರ್‌ ಅನ್ನು ಹೊರಹಾಕಿದೆ. ಇದು ದೇಶಿಯ ಮಾರುಕಟ್ಟೆಗೆ Samsung Galaxy F70 ಸರಣಿ ಬರುವುದನ್ನು ಸೂಚಿಸುತ್ತದೆ. ಈ ಸರಣಿಯು ಎಷ್ಟು ಫೋನ್‌ ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ ಈ ಸರಣಿಯಲ್ಲಿನ Samsung Galaxy F70 ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಎಂಟ್ರಿ ಕೊಡುಗ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ Samsung Galaxy F70e ಹಾಗೂ Samsung Galaxy F70 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಭಾರತದಲ್ಲಿ OPPO K14x ಮೊಬೈಲ್‌ ಬಿಡುಗಡೆಗೆ ಸಜ್ಜು! ಲಾಂಚ್‌ ದಿನಾಂಕ ಹಾಗೂ ಫೀಚರ್ಸ್‌ ಏನು?

Samsung Galaxy F70: ಲಾಂಚ್‌ ದಿನಾಂಕ ಮತ್ತು ನಿರೀಕ್ಷಿತ ಬೆಲೆ

ಸ್ಯಾಮ್‌ಸಂಗ್‌ ಸಂಸ್ಥೆಯ ಮುಂಬರುವ Samsung Galaxy F70 ಸರಣಿಯು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿದೆ. ಅಲ್ಲದೇ ಕೆಲವು ಲೀಕ್ ಮಾಹಿತಿಗಳ ಪ್ರಕಾರ ಈ ಸರಣಿಯಲ್ಲಿನ ಗ್ಯಾಲಕ್ಸಿ F70e ಮಾಡೆಲ್‌ ಇಂದು (ಫೆ 2 ರಂದು) ಅನಾವರಣಗೊಳ್ಳಬಹುದು ಎನ್ನಲಾಗಿದೆ. ಲೀಕ್ ಮಾಹಿತಿಯಂತೆ ಗ್ಯಾಲಕ್ಸಿ F70e ಫೋನ್‌ ಬಜೆಟ್‌ ಫೋನ್ ಆಗಿರಲಿದ್ದು ಇದೇ ಫೆಬ್ರವರಿ 9 ರಂದು ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಇದರ ನಿರೀಕ್ಷಿತ ಬೆಲೆ 10,000 ರಿಂದ 15,000 ರೂಗಳ ರೇಂಜ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

Samsung Galaxy F70e ಫೀಚರ್ಸ್‌

ಟಿಪ್‌ಸ್ಟರ್ ಮಾಹಿತಿ ಪ್ರಕಾರ Samsung Galaxy F70e ಮೊಬೈಲ್‌ 120Hz ರಿಫ್ರೆಶ್ ರೇಟ್‌ ಮತ್ತು ವಾಟರ್‌ಡ್ರಾಪ್ ನಾಚ್ ಹೊಂದಿರುವ 6.7 ಇಂಚಿನ HD+ ಡಿಸ್‌ಪ್ಲೇ ಪಡೆದಿರಲಿದೆ. ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು 6GB RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್‌ ಪಡೆದಿರಲಿದೆ. ಅಲ್ಲದೇ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಆಗಿರಲಿದೆ. ಇದರೊಂದಿಗೆ 6,000mAh ಬ್ಯಾಟರಿ ಸಪೋರ್ಟ್‌ ಕೂಡಾ ಪಡೆದಿರಲಿದೆ.

Samsung Galaxy F70 ನಿರೀಕ್ಷಿತ ಫೀಚರ್ಸ್‌

Samsung Galaxy F70 ಮೊಬೈಲ್‌ 20:9 ಆಕಾರ ಅನುಪಾತದೊಂದಿಗೆ 6.7 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಪಡೆದಿರಲಿದೆ. ಅಲ್ಲದೇ ಇದರ ಸ್ಕ್ರೀನ್‌ 1080 x 2400 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿಸ್‌ಪ್ಲೇಯು ಸೂಪರ್ AMOLED ಇನ್ಫಿನಿಟಿ U ಮಾದರಿಯಲ್ಲಿ ಇರಲಿದೆ. ಹಾಗೆಯೇ ಇದು ಆಕ್ಟಾ-ಕೋರ್ ಕ್ವಾಲ್ಕಾಮ್ SnapdragSon 675 SoC ಚಿಪ್‌ಸೆಟ್‌ ಪ್ರೊಸೆಸರ್‌ ಬಲ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 6GB RAM ಬೆಂಬಲ ಹಾಗೂ 128GB ಸ್ಟೋರೇಜ್‌ ಪಡೆದಿರುವ ಸಾಧ್ಯತೆಗಳು ಇವೆ. ಅಲ್ಲದೇ ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು ಅವಕಾಶಗಳು ಇರಲಿವೆ ಎನ್ನಲಾಗಿದೆ.

Samsung Galaxy F70 ಮೊಬೈಲ್‌ ಹಿಂಬದಿಯ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್, 8 ಸೆಕೆಂಡರಿ ಕ್ಯಾಮೆರಾ ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಜೊತೆಗೆ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಕೂಡ ಪಡೆದಿರಲಿದೆ. ಹಾಗೆಯೇ ಇದು 25W ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಜೊತೆಗೆ 4,500mAh ಬ್ಯಾಟರಿ ಪಡೆದಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo