ಭಾರತದಲ್ಲಿ OPPO K14x ಮೊಬೈಲ್‌ ಬಿಡುಗಡೆಗೆ ಸಜ್ಜು! ಲಾಂಚ್‌ ದಿನಾಂಕ ಹಾಗೂ ಫೀಚರ್ಸ್‌ ಏನು?

HIGHLIGHTS

OPPO K14x ಮೊಬೈಲ್‌ ಇದೇ ಫೆಬ್ರವರಿ 10 ರಂದು ಬಿಡುಗಡೆ ಸಾಧ್ಯತೆ

OPPO K14x ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರುವ ನಿರೀಕ್ಷೆಗಳು ಇವೆ

OPPO K14x ಫೋನ್‌ MediaTek Dimensity 6300 ಚಿಪ್‌ಸೆಟ್‌ ಹೊಂದಿರುವ ನಿರೀಕ್ಷೆ ಇದೆ

ಭಾರತದಲ್ಲಿ OPPO K14x ಮೊಬೈಲ್‌ ಬಿಡುಗಡೆಗೆ ಸಜ್ಜು! ಲಾಂಚ್‌ ದಿನಾಂಕ ಹಾಗೂ ಫೀಚರ್ಸ್‌ ಏನು?

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾದ OPPO ಸಂಸ್ಥೆಯು ಈಗಾಗಲೇ ಭಾರತದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ OPPO ಕಂಪನಿಯು ತನ್ನ ಹೊಸ K ಸರಣಿಯಲ್ಲಿ ಹೊಸದೊಂದು ಮೊಬೈಲ್‌ ಪರಿಚಯಿಸಲು ಸಜ್ಜಾಗಿದೆ. ಆದರೆ ಸಂಸ್ಥೆಯು ಫೋನಿನ ಹೆಸರನ್ನು ಇನ್ನು ಅಧಿಕೃತವಾಗಿ ಘೋಷಿಸದಿದ್ದರೂ, Flipkart ತಾಣದಲ್ಲಿ ಆರಂಭಿಸಿರುವ ಮೈಕ್ರೋ ಸೈಟ್‌ ಮುಂಬರುವ ಫೋನ್‌ OPPO K14x ಎಂದು ಸೂಚಿಸುತ್ತದೆ. ಅಂದಹಾಗೆ ನೂತನ OPPO K14x ಮೊಬೈಲ್‌ ಸಂಸ್ಥೆಯ ಈ ಹಿಂದಿನ ಒಪ್ಪೋ K13x ಫೋನಿನ ಉತ್ತರಾಧಿಕಾರಿಯಾಗಿ ಲಗ್ಗೆ ಇಡಲಿದೆ ಎನ್ನಲಾಗಿದೆ. ಹಾಗಾದರೇ OPPO K14x ಫೋನಿನ ನಿರೀಕ್ಷಿತ ಫೀಚರ್ಸ್‌ ಏನು ಎನ್ನುವ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ದೈತ್ಯ Samsung Galaxy S24 Ultra ಫೋನ್‌ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್‌! ಆಫರ್‌ ಮಾಹಿತಿ ಇಲ್ಲಿದೆ

OPPO K14x ಮೊಬೈಲ್‌ ಲಾಂಚ್‌ ದಿನಾಂಕ

ಒಪ್ಪೋ ಸಂಸ್ಥೆಯು OPPO K14x ಮೊಬೈಲ್‌ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಬಗ್ಗೆ ಒಪ್ಪೋ ಈಗಾಗಲೇ ಟೀಸರ್‌ ಅನ್ನು ಪ್ರಾರಂಭಿಸಿದೆ. ಇನ್ನು ಭಾರತೀಯ ಮೊಬೈಲ್‌ ಮಾರುಕಟ್ಟೆಗೆ OPPO K14x ಮೊಬೈಲ್‌ ಇದೇ ಫೆಬ್ರವರಿ 10 ರಂದು ಬಿಡುಗಡೆ ಆಗುವ ಸಾಧ್ಯತೆಗಳು ಇವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಇನ್ನು OPPO K14x ಭಾರತದಲ್ಲಿ ಸುಮಾರು 15,000 ರೂ.ಗಳ ಪ್ರೈಸ್‌ಟ್ಯಾಗ್‌ನೊಂದಿಗೆ ಎಂಟ್ರಿ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿಂದಿನ ಒಪ್ಪೋ K13x ಮೊಬೈಲ್‌ ಕಳೆದ ವರ್ಷ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಆಗಿತ್ತು.

ಅಂದಹಾಗೆ ಮುಂಬರುವ ಹೊಸ OPPO K14x ಫೋನಿನ ಬಗ್ಗೆ ಯಾವುದೇ ಅಧಿಕೃತ ಫೀಚರ್ಸ್‌ಗಳ ಹಂಚಿಕೊಂಡಿಲ್ಲ. ಸಂಸ್ಥೆಯು ಬಹಿರಂಗಪಡಿಸಿರುವುದು ವಿನ್ಯಾಸದ ಟೀಸರ್ ಆಗಿದೆ. ಈ ಫೋನ್ ಅಸ್ತಿತ್ವದಲ್ಲಿರುವ K ಸರಣಿ ವಿನ್ಯಾಸದ ಮಾದರಿಯನ್ನು ಹೋಲುತ್ತದೆ ಎಂದು ಸೂಚಿಸುತ್ತದೆ. ಕೆಲವು ಮಾಹಿತಿಗಳ ಪ್ರಕಾರ OPPO K14x ಮೊಬೈಲ್‌ MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರುವ ನಿರೀಕ್ಷೆಗಳು ಇವೆ ಎನ್ನಲಾಗಿದೆ. ಕಳೆದ ವರ್ಷ ಬಿಡುಗಡೆ ಆಗಿರುವ ಒಪ್ಪೋ K13x ಮೊಬೈಲ್‌ ಸಹ ಅದೇ ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿತ್ತು. ಹಾಗೆಯೇ ಸಂಸ್ಥೆಯು ಉತ್ತಮ ಸಾಫ್ಟ್‌ವೇರ್ ಆಪ್ಟಿಮೈಸೇಶನ್ ಮತ್ತು ಥರ್ಮಲ್ ನಿರ್ವಹಣೆ ಗಳಂತಹ ಕೆಲವು ಅಪ್‌ಡೇಟ್‌ ಫೀಚರ್ಸ್‌ಗಳನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

ಇನ್ನು OPPO ಕಂಪನಿಯ ಮುಂಬರುವ K ಸರಣಿಯ ಹೊಸ ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ ಕ್ಯಾಮೆರಾ ವಿಭಾಗಗಳಲ್ಲಿ ಹೆಚ್ಚಿನ ಅಪ್‌ಡೇಟ್‌ ಮಾಡುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್‌ ವಿನ್ಯಾಸವು ಸಮತಟ್ಟಾದ ಹಿಂಭಾಗ ಮತ್ತು ಕರ್ವ್ ರಚನೆ ಹೊಂದಿರುವ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಪಡೆದಿರಲಿದೆ ಎಂದು ತೋರುತ್ತದೆ. ಇನ್ನು ಇದರ ಕ್ಯಾಮೆರಾ ವಿನ್ಯಾಸವು ನೋಡುವುದಾದರೆ, ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸೆನ್ಸಾರ್‌ಗಳ ಇರಲಿವೆ ಇದರೊಂದಿಗೆ LED ಫ್ಲಾಷ್ ಅನ್ನು ಒಳಗೊಂಡಿರುವಂತೆ ತೋರುತ್ತದೆ. ಆದಾಗ್ಯೂ ಒಪ್ಪೋ ಕಂಪನಿಯು ಅಧಿಕೃತವಾಗಿ ಯಾವುದೇ ವಿವರಗಳನ್ನು ಇನ್ನೂ ದೃಢಪಡಿಸಿಲ್ಲ ಎನ್ನುವುದನ್ನು ಗಮನಿಸಬೇಕು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo