Vi: ಒಮ್ಮೆ ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ, ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯ ಇರಲ್ಲ!
Vi ಟೆಲಿಕಾಂನ 365 ದಿನಗಳ ವ್ಯಾಲಿಡಿಟಿ ಯೋಜನೆಗಳು ಆಕರ್ಷಕ ಎನಿಸಿವೆ
Vi ಟೆಲಿಕಾಂನ ವಾರ್ಷಿಕ ಯೋಜನೆಯಲ್ಲಿ ಡೇಟಾ, SMS ಹಾಗೂ ಉಚಿತ ವಾಯ್ಸ್ ಕರೆ ಸೌಲಭ್ಯ ಲಭ್ಯ
Vi ಟೆಲಿಕಾಂನ ಕೆಲವು ವಾರ್ಷಿಕ ಪ್ಲಾನಿನಲ್ಲಿ ಹೆಚ್ಚುವರಿ 50GB ಡೇಟಾ ಸಿಗಲಿದೆ
ಭಾರತೀಯ ಟೆಲಿಕಾಂ ವಲಯದಲ್ಲಿ Vi ಸಂಸ್ಥೆ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. Vi ಕಂಪನಿಯು ತನ್ನ ಗ್ರಾಹಕರಿಗಾಗಿ ಹಲವು ಭಿನ್ನ ಪ್ರಯೋಜನಗಳ ಪ್ರೀಪೇಯ್ಡ್ ಪ್ಲಾನ್ ಆಯ್ಕೆ ನೀಡಿದೆ. ಆ ಪೈಕಿ ಪ್ರತಿದಿನ ಅಧಿಕ ಡೇಟಾ ಸೌಲಭ್ಯದ ಜೊತೆಗೆ 365 ದಿನಗಳ ವಾರ್ಷಿಕ ವ್ಯಾಲಿಡಿಟಿ ಪ್ರಯೋಜನ ಪಡೆದಿರುವ ಯೋಜನೆಗಳು ಹೆಚ್ಚು ಆಕರ್ಷಕ ಎನಿಸಿಕೊಂಡಿವೆ. ವಾರ್ಷಿಕ ವ್ಯಾಲಿಡಿಟಿ ಯೋಜನೆಗಳ ಬೆಲೆ ದುಬಾರಿ ಎನಿಸಿದರು ಈ ಪ್ಲಾನ್‌ಗಳಲ್ಲಿ ಅಧಿಕ ಡೇಟಾ ಜೊತೆಗೆ ಕೆಲವು ಸೇವೆಗಳಿಗೆ ಚಂದಾದಾರಿಕೆ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಹಾಗಾದರೇ Vi ಟೆಲಿಕಾಂ ಕಂಪನಿಯ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಡ್ಯುಯಲ್ ಸೆಲ್ಫಿ ಕ್ಯಾಮೆರಾ ಇರುವ Xiaomi 14 Civi ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ!
Vi ಕಂಪನಿಯ 3499 ರೂ.ಗಳ ಯೋಜನೆ ಸೌಲಭ್ಯಗಳು
Vi ಟೆಲಿಕಾಂನ 3499 ರೂ.ಗಳ ಈ ಯೋಜನೆ ವಾರ್ಷಿಕ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಲ್ಲಿ ಒಂದಾಗಿದೆ. ಸಂಸ್ಥೆಯ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟಾರೇ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ ಆರಂಭಿಕ 90 ದಿನಗಳ ಅವಧಿಗೆ ಹೆಚ್ಚುವರಿ 50GB ಡೇಟಾ ಸೌಲಭ್ಯ ದೊರೆಯುತ್ತದೆ.

Vi ಕಂಪನಿಯ 3599 ರೂ.ಗಳ ಯೋಜನೆ ಪ್ರಯೋಜನಗಳು
Vi ಟೆಲಿಕಾಂನ 3599 ರೂ.ಗಳ ಈ ಯೋಜನೆಯು ಸಹ ವಾರ್ಷಿಕ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಆಗಿದೆ. ಇನ್ನು ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟಾರೇ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗಲಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಆಗಲಿದೆ. ಅಲ್ಲದೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ ವೀಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನ ಸಹ ಲಭ್ಯ.
Vi ಕಂಪನಿಯ 3799 ರೂ.ಗಳ ಪ್ಲಾನ್ ಮಾಹಿತಿ
Vi ಟೆಲಿಕಾಂನ 3799 ರೂ.ಗಳ ಈ ಯೋಜನೆ ವಾರ್ಷಿಕ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಲ್ಲಿ ಒಂದಾಗಿದೆ. ಸಂಸ್ಥೆಯ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟಾರೇ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಲಭ್ಯ ಇದೆ. ಹಾಗೆಯೇ ಆರಂಭಿಕ 90 ದಿನಗಳ ಅವಧಿಗೆ ಹೆಚ್ಚುವರಿ 50GB ಡೇಟಾ ಸೌಲಭ್ಯ ದೊರೆಯುತ್ತದೆ.
Vi ಕಂಪನಿಯ 3699 ರೂ.ಗಳ ಪ್ಲಾನ್ ಮಾಹಿತಿ
Vi ಟೆಲಿಕಾಂನ 3699 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟಾರೇ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ JioHotstar ಚಂದಾದಾರಿಕೆ ಲಭ್ಯ ಇದೆ. ಹಾಗೆಯೇ ಆರಂಭಿಕ 90 ದಿನಗಳ ಅವಧಿಗೆ ಹೆಚ್ಚುವರಿ 50GB ಡೇಟಾ ಸೌಲಭ್ಯ ದೊರೆಯುತ್ತದೆ.
Vi ಕಂಪನಿಯ 3999 ರೂ.ಗಳ ಪ್ಲಾನ್ ಮಾಹಿತಿ
Vi ಟೆಲಿಕಾಂನ 3999 ರೂ.ಗಳ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ JioHotstar ಹಾಗೂ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಲಭ್ಯ.
Vi ಕಂಪನಿಯ 4999 ರೂ.ಗಳ ಪ್ಲಾನ್ ಮಾಹಿತಿ
Vi ಟೆಲಿಕಾಂನ 4999 ರೂ.ಗಳ ಈ ಪ್ಲಾನ್ ದುಬಾರಿ ಯೋಜನೆ ಆಗಿದೆ. ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ, JioHotstar, SonyLIV, ZEE5, Lionsgate Play ಸೇರಿದಂತೆ 20 OTT ಪ್ಲಾಟ್‌ಫಾರ್ಮ್ ಗಳಿಗೆ ಚಂದಾದಾರಿಕೆ ಲಭ್ಯ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile