ಇಂದು ಮಾರುಕಟ್ಟೆ ಪ್ರವೇಶಿಸಲಿದೆ OnePlus N6 Lite ಸ್ಮಾರ್ಟ್‌ಫೋನ್‌; ನಿರೀಕ್ಷಿತ ಫೀಚರ್ಸ್‌ ನೋಡಿ

HIGHLIGHTS

ಇಂದು (ಸೆಪ್ಟೆಂಬರ್ 22 ರಂದು) ಒನ್‌ಪ್ಲಸ್‌ N6 ಲೈಟ್ ಲಾಂಚ್

ಒನ್‌ಪ್ಲಸ್‌ N6 ಲೈಟ್ ಫೋನ್‌ ಡ್ಯುಯಲ್‌ ಕ್ಯಾಮೆರಾ ಪಡೆದಿರಲಿದೆ

ಒನ್‌ಪ್ಲಸ್‌ N6 ಲೈಟ್ ಫೋನ್‌ 7,000mAh ಬ್ಯಾಟರಿ ಹೊಂದಿರಲಿದೆ

ಇಂದು ಮಾರುಕಟ್ಟೆ ಪ್ರವೇಶಿಸಲಿದೆ OnePlus N6 Lite ಸ್ಮಾರ್ಟ್‌ಫೋನ್‌; ನಿರೀಕ್ಷಿತ ಫೀಚರ್ಸ್‌ ನೋಡಿ

ಒನ್‌ಪ್ಲಸ್‌ ಮೊಬೈಲ್‌ ಕಂಪನಿಯು ತನ್ನ N6 ಸರಣಿಯಲ್ಲಿ ಇದೀಗ OnePlus N6 Lite ಮೊಬೈಲ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್‌ ಇಂದು (ಸಪ್ಟಂಬರ್ 22 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಮೊಬೈಲ್‌ ಬಿಡುಗಡೆ ಕುರಿತು ಈಗಾಗಲೇ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ MIL-STD-810H ಮಿಲಿಟರಿ-ದರ್ಜೆಯ ಬಾಳಿಕೆಯನ್ನು ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ 7,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಪವರ್ ಅನ್ನು ಪಡೆದುಕೊಂಡಿರುವ ಬಹುತೇಕ ಪಕ್ಕಾ ಆಗಿದೆ. ಅಲ್ಲದೇ ಇದು ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಸಾಧ್ಯತೆಗಳು ಇವೆ. ಹಾಗಾದರೆ ಒನ್‌ಪ್ಲಸ್‌ N6 ಲೈಟ್ ಮೊಬೈಲ್‌ನ ಲಾಂಚ್‌ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vi ಟೆಲಿಕಾಂನ 625 ರೂ.ಗಳ ಪ್ಲಾನ್‌ನಲ್ಲಿ ಜಬರ್ದಸ್ತ್‌ ಡೇಟಾ ಜೊತೆಗೆ 60 ದಿನಗಳ ವ್ಯಾಲಿಡಿಟಿ

ಇಂದು OnePlus N6 Lite ಫೋನ್‌ ಲಾಂಚ್

ಒನ್‌ಪ್ಲಸ್‌ ಕಂಪನಿಯು ತನ್ನ ಹೊಸ ಒನ್‌ಪ್ಲಸ್‌ N6 ಲೈಟ್ ಮೊಬೈಲ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಲು ಸಜ್ಜಾಗಿದೆ. ಅಂದಹಾಗೆ ಈ ಮೊಬೈಲ್‌ ಇಂದು (ಸಪ್ಟಂಬರ್ 22 ರಂದು) ಮಧ್ಯಾಹ್ನ 12 ಗಂಟೆಗೆ ಲಾಂಚ್ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಬಳಿಕ ಅಮೆಜಾನ್‌ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್‌ ಸ್ಟೋರ್‌ ಮೂಲಕ ಸೇಲ್‌ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್‌ Midnight Hype ಮತ್ತು Neo Green ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.

OnePlus N6 Lite launch in India on September 22 battery design and other specs revealed
OnePlus N6 Lite

ಒನ್‌ಪ್ಲಸ್‌ N6 ಲೈಟ್ ಫೋನಿನ ನಿರೀಕ್ಷಿತ ಫೀಚರ್ಸ್‌

ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಡಲಿರುವ ಒನ್‌ಪ್ಲಸ್‌ N6 ಲೈಟ್ ಸ್ಮಾರ್ಟ್‌ಫೋನ್‌ 6.75 ಇಂಚಿನ ಫ್ಲಾಟ್ ಡಿಸ್‌ಪ್ಲೇ ಡಿಸ್‌ಪ್ಲೇ ಹೊಂದಿರಲಿದ್ದು, ಇದರೊಂದಿಗೆ ಈ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಪಡೆದಿರಲಿದೆ. ಹಾಗೆಯೇ ಇದು MIL-STD-810H ಮಿಲಿಟರಿ-ದರ್ಜೆಯ ಬಾಳಿಕೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ 7,000mAh ಬ್ಯಾಟರಿಯನ್ನು ಪಡೆದಿರಲಿದೆ. ಒಮ್ಮೆ ಚಾರ್ಜ್ ಮಾಡಿದರೆ ಮೂರು ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಒನ್‌ಪ್ಲಸ್‌ N6 ಲೈಟ್ ಸ್ಮಾರ್ಟ್‌ಫೋನ್‌ ಹಿಂಬದಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿರಲಿದೆ. ಈ ಮೊಬೈಲ್‌ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದು AI Clear Face ಮತ್ತು AI Eraser ನಂತಹ ಅನೇಕ AI-ಚಾಲಿತ ಫೀಚರ್ಸ್‌ಗಳೊಂದಿಗೆ ಬರಲಿದೆ. ಈ ಫೋನ್ ಮಿಲಿಟರಿ-ದರ್ಜೆಯ ಬಾಳಿಕೆಯನ್ನು (durability) ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಇದರ ಚಿಪ್‌ಸೆಟ್ ಮತ್ತು ಕ್ಯಾಮೆರಾ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile