Vivo X300 Series ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

HIGHLIGHTS

Vivo X300 Series ಸದ್ದಿಲ್ಲದೇ ತನ್ನ ತಾಯ್ನಾಡಿನಲ್ಲಿ ಬಿಡುಗಡೆ.

Vivo X300 Series ಅಡಿಯಲ್ಲಿ Vivo X300 ಮತ್ತು Vivo X300 Pro ಫೋನ್ಗಳು ಪರಿಚಯ.

Vivo X300 Series ಪ್ರಸ್ತುತ ಚೀನಾದಲ್ಲಿ ಬಿಡುಗಡೆಯಾಗಿದ್ದು ಪ್ರಸ್ತುತ ಭಾರತದ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

Vivo X300 Series ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

ಚೀನಾದ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ವಿವೋ ನೆನ್ನೆ ಸದ್ದಿಲ್ಲದೇ ತನ್ನ ಹೊಸ Vivo X300 Series ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಈ ಸರಣಿಯಡಿಯಲ್ಲಿ Vivo X300 ಮತ್ತು Vivo X300 Pro ಎಂಬ ಎರಡು ಹೊಸ ಸ್ಮಾರ್ಟ್ ಫೋನ್ಗಳನ್ನು ಪರಿಚಯಿಸಿದೆ. ಅಲ್ಲದೆ ಪ್ರಸ್ತುತ ಚೀನಾದಲ್ಲಿ ಬಿಡುಗಡೆಯಾಗಿದ್ದು ಪ್ರಸ್ತುತ ಭಾರತದ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಹಾಗಾದ್ರೆ ಈ ಸ್ಮಾರ್ಟ್ಫೋನ್ಗಳ ಬೆಲೆ, ಫೀಚರ್ ಮತ್ತು ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Digit.in Survey
✅ Thank you for completing the survey!

Vivo X300 ಫೀಚರ್ ಮತ್ತು ವಿಶೇಷತೆಗಳೇನು?

ಮೊದಲಿಗೆ Vivo X300 ಫೋನ್ ಬಗ್ಗೆ ಮಾತನಾಡುವುದಾದರೆ ಇದು 6.31 ಇಂಚಿನ ಫ್ಲಾಟ್ LTPO AMOLED ಪರದೆಯನ್ನು ಹೊಂದಿದೆ. ಇದು1.5 ಕೆರೆಸಲ್ಯೂಶನ್ ಮತ್ತು120Hz ರಿಫ್ರೆಶ್ ರೇಟ್‌ನೊಂದಿಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ಬರುತ್ತದೆ. ಈ ಫೋನ್‌ನಲ್ಲಿ 200MP ಪ್ರೈಮರಿ ಕ್ಯಾಮೆರಾ ಹೊಂದಿದ್ದು OIS ಫೀಚರ್ ಜೊತೆಗೆ ಬರುತ್ತದೆ. ಇದರ ಜೊತೆಗೆ 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಕೊನೆಯದಾಗಿ ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

Vivo X300 Series silently launched

ಫೋನ್ ವೇಗದ MediaTek Dimesity 9500 ಪ್ರೊಸೆಸರ್ನಿಂದ ಕೆಲಸ ಮಾಡುತ್ತಿದೆ. ಇದು LPDDR5x RAM ಮತ್ತು UFS4.1ಸ್ಟೋರೇಜ್‌ನಲ್ಲಿದೆ. ಇದು Android 16 ಆಧಾರಿತ OriginOS 6 ಆಪರೇಟಿಂಗ್ ಸಿಸ್ಟಮ್‌ನಿಂದ ಕಾರ್ಯ ನಿರ್ವಹಿಸುತ್ತದೆ. Vivo X300 ಸ್ಮಾರ್ಟ್ಫೋನ್ 6040mAh ಬ್ಯಾಟರಿಯನ್ನು ಹೊಂದಿದ್ದು ಫಾಸ್ಟ್ ಚಾರ್ಜ್ ಮಾಡಲು 90W ವೈರ್ಡ್ ಚಾರ್ಜಿಂಗ್ ಮತ್ತು 40W ವವಯರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Also Read: ಹೊಸ Driving License ಬೇಕಾ? ಮೊದಲು ಮನೆಯಿಂದಲೇ ಲರ್ನಿಂಗ್ ಲೈಸೆನ್ಸ್ ಪಡೆಯುವುದು ಹೇಗೆ ತಿಳಿಯಿರಿ!

ವಿವೋ X300 Pro ಫೀಚರ್ ಮತ್ತು ವಿಶೇಷತೆಗಳೇನು?

ಎರಡನೇಯದಾಗಿ ಇದರ Vivo X300 Pro ಬಗ್ಗೆ ಮಾತನಾಡುವುದಾದರೆ ಇದು ದೊಡ್ಡದಾದ 6.78 ಇಂಚಿನ ಫ್ಲಾಟ್ LTPO AMOLED ಪರದೆಯನ್ನು ಹೊಂದಿದೆ. ಇದು ಕೂಡ1.5 ಕೆರೆಸಲ್ಯೂಶನ್ ಮತ್ತು120Hz ರಿಫ್ರೆಶ್ ರೇಟ್ ಹೊಂದಿದೆ. ಇದು ಕೂಡ ಮೂರು ಕ್ಯಾಮೆರಾಗಳ ಸೆಟಪ್ ಹೊಂದಿದ್ದು ಈ ಫೋನ್‌ನಲ್ಲಿ 200MP ಪ್ರೈಮರಿ ಕ್ಯಾಮೆರಾ ಹೊಂದಿದ್ದು ಗಿಂಬಲ್ OIS ಫೀಚರ್ ಜೊತೆಗೆ ಬರುತ್ತದೆ. ಇದರ ಜೊತೆಗೆ 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಕೊನೆಯದಾಗಿ ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

Vivo X300 Series silently launched

ಫೋನ್ ಸಹ ಅದೇ ಫಾಸ್ಟ್ MediaTek Dimesity 9500 ಪ್ರೊಸೆಸರ್ನಿಂದ ಕೆಲಸ ಮಾಡುತ್ತಿದೆ. ಇದು LPDDR5x RAM ಮತ್ತು UFS4.1ಸ್ಟೋರೇಜ್‌ನಲ್ಲಿದೆ. ಇದು Android 16 ಆಧಾರಿತ OriginOS 6 ಆಪರೇಟಿಂಗ್ ಸಿಸ್ಟಮ್‌ನಿಂದ ಕಾರ್ಯ ನಿರ್ವಹಿಸುತ್ತದೆ. Vivo X300 ಸ್ಮಾರ್ಟ್ಫೋನ್ 6510mAh ಬ್ಯಾಟರಿಯನ್ನು ಹೊಂದಿದ್ದು ಫಾಸ್ಟ್ ಚಾರ್ಜ್ ಮಾಡಲು 90W ವೈರ್ಡ್ ಚಾರ್ಜಿಂಗ್ ಮತ್ತು 40W ವವಯರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo