200MP ಕ್ಯಾಮೆರಾದ Vivo V60e ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ಬೆಲೆ ಸೋರಿಕೆ! ಫೀಚರ್ಗಳಂತೂ ಸೂಪರ್!
ಮುಂಬರಲಿರುವ Vivo V60e ಬಿಡುಗಡೆಗೂ ಮುಂಚೆ ಬೆಲೆ ಬಹಿರಂಗ
Vivo V60e ನಾಳೆ ಅಂದ್ರೆ 7ನೇ ಅಕ್ಟೋಬರ್ 2025 ರಂದು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ
200MP ಕ್ಯಾಮೆರಾ ಫೋನ್ ಮತ್ತು ಇಂಟಸ್ಟಿಂಗ್ ಫೀಚರ್ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.
ಭಾರತದಲ್ಲಿ ನಾಳೆ ಅಂದರೆ 7ನೇ ಅಕ್ಟೋಬರ್ 2025 ರಂದು ಮುಂಬರಲಿರುವ ಹೊಸ Vivo V60e 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೆ ಸಜ್ಜಾಗಿದೆ. ಕಂಪನಿಯು ತನ್ನ ಸೋಷಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ಈ ಸ್ಮಾರ್ಟ್‌ಫೋನ್‌ನ ಹಲವಾರು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ವಿವೋ ಸ್ಮಾರ್ಟ್ಫೋನ್ 200MP ಕ್ಯಾಮೆರಾದೊಂದಿಗೆ ದೊಡ್ಡ 6500mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್‌ನಂತಹ ಫೀಚರ್ಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ಈ ಫೋನ್ ಫೋನ್ IP68/IP69 ನೀರು ಮತ್ತು ಧೂಳು ನಿರೋಧಕ ರೇಟಿಂಗ್‌ಗಳು ಮತ್ತು ಕರ್ವ್ ಡಿಸ್ಪ್ಲೇ ಮತ್ತು Vivo V60e ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ತನ್ನ ಬೆಲೆ ಇಂಟರ್ನೆಟ್ ಮೂಲಕ ಸೋರಿಕೆಯಾಗಿದ್ದು ಇದರ ಬೆಲೆಗೆ ಫೀಚರ್ಗಳಂತೂ ಸೂಪರ್ ಅನ್ನೋದು ನೋಡುಗರ ಅಭಿಪ್ರಾಯ.
SurveyAlso Read: RBI New Rules: ಆರ್‌ಬಿಐ ಹೊಸ ನಿಯಮ, ಅಪ್ಪಿತಪ್ಪಿ ನಿಮ್ಮ EMI ಮಿಸ್ ಆದ್ರೆ ಬ್ಯಾಂಕ್ ನಿಮ್ಮ ಫೋನ್ ಲಾಕ್ ಮಾಡುತ್ತೆ!
Vivo V60e ನಿರೀಕ್ಷಿತ ಬೆಲೆ?
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಟಿಪ್‌ಸ್ಟರ್ ಒಬ್ಬರು ಫೋನ್‌ನ ಬೆಲೆಯನ್ನು ಹಂಚಿಕೊಂಡಿದ್ದಾರೆ. ಈ ವಿವೋ ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದರ 8GB RAM + 128GB, 8GB RAM + 256GB ಮತ್ತು 12GB RAM + 256GB ಹೊಂದಿದೆ. ಇದರ ಆರಂಭಿಕ ಬೆಲೆ ₹28,999 ಎಂದು ನಿರೀಕ್ಷಿಸಲಾಗಿದೆ. ಇತರ ಎರಡು ರೂಪಾಂತರಗಳ ಬೆಲೆ ಕ್ರಮವಾಗಿ ₹30,999 ಮತ್ತು ₹31,999. ದೀಪಾವಳಿಗೆ ಮೊದಲು ವಿವೋ ಈ ಫೋನ್ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
- 8GB RAM + 128GB: ರೂ. 28,999
- 8GB RAM + 256GB: ರೂ. 30,999
- 12GB RAM + 256GB: ರೂ. 31,999

Vivo V60e ನಿರೀಕ್ಷಿತ ಫೀಚರ್ಗಳೇನು?
ವಿವೋ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ ಎಂದು ದೃಢಪಡಿಸಿದೆ. ಇದು 200MP ಮುಖ್ಯ ಅಲ್ಟ್ರಾ ಕ್ಲಿಯರ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಇದು 30x ಸೂಪರ್ ಜೂಮ್ ಅನ್ನು ಸಹ ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ ಫೋನ್ ಹಿಂಭಾಗದಲ್ಲಿ 8MP ಸೆಕೆಂಡರಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿರುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಇದು 50MP ಕ್ಯಾಮೆರಾವನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ ಫೋನ್ ಹಿಂಭಾಗದಲ್ಲಿ ಔರಾ ಲೈಟ್ ಅನ್ನು ಹೊಂದಿರುತ್ತದೆ.
Also Read: Moto G35 5G ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಮಾರಾಟದಲ್ಲಿ ಲಭ್ಯ! ಬೆಲೆ ಮತ್ತು ಆಫರ್ಗಳೇನು?
ಈ ವಿವೋ ಫೋನ್ 90W ವೇಗದ ಚಾರ್ಜಿಂಗ್ ಜೊತೆಗೆ 6,500mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ FuntouchOS 15 ಅನ್ನು ರನ್ ಮಾಡುತ್ತದೆ. ಕಂಪನಿಯು ಆರು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು ನೀಡುವುದಾಗಿ ಹೇಳಿಕೊಂಡಿದೆ. ಫೋನ್ IP68/IP69 ರೇಟಿಂಗ್ ಹೊಂದಿದ್ದು ಧೂಳು ಮತ್ತು ನೀರಿನಿಂದ ರಕ್ಷಿಸುತ್ತದೆ.
ಈ ಫೋನ್ 6.7 ಇಂಚಿನ ಬಾಗಿದ AMOLED ಡಿಸ್ಪ್ಲೇಯನ್ನು ಹೊಂದಿದ್ದು ಅತ್ಯಂತ ತೆಳುವಾದ ಬೆಜೆಲ್‌ಗಳನ್ನು ಹೊಂದಿರುತ್ತದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 120Hz ರಿಫ್ರೆಶ್ ದರದಂತಹ ವೈಶಿಷ್ಟ್ಯಗಳು ಫೋನ್‌ನಲ್ಲಿ ಲಭ್ಯವಿರುತ್ತವೆ. ಈ ವಿವೋ ಫೋನ್ 5G ಸಂಪರ್ಕದೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ ಜೊತೆಗೆ 12GB RAM ಮತ್ತು 256GB ವರೆಗೆ ಸಂಗ್ರಹಣೆಯನ್ನು ಹೊಂದಿರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile