Airtel ಗ್ರಾಹಕರಿಗೆ ಸಿಹಿಸುದ್ದಿ! ಈ ಎರಡು ಪ್ಲಾನ್‌ಗಳಲ್ಲಿ ಇನ್ನು Unlimited Data ಸಿಗುತ್ತೆ!

HIGHLIGHTS

Airtel ಟೆಲಿಕಾಂನ 399ರೂ.ಗಳ ಮತ್ತು 449ರೂ.ಗಳ ಪ್ಲಾನ್‌ಗಳಲ್ಲಿ ಅನಿಯಮಿತ ಡೇಟಾ

Airtel ಕಂಪನಿಯ ಈ ಪ್ಲಾನ್‌ಗಳಲ್ಲಿ Adobe Express Premium ಚಂದಾದಾರಿಕೆ ಲಭ್ಯ

Airtel ಕಂಪನಿಯ ಈ ಎರಡು ಪ್ಲಾನ್‌ಗಳು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ

Airtel ಗ್ರಾಹಕರಿಗೆ ಸಿಹಿಸುದ್ದಿ! ಈ ಎರಡು ಪ್ಲಾನ್‌ಗಳಲ್ಲಿ ಇನ್ನು Unlimited Data ಸಿಗುತ್ತೆ!

Airtel Plans: ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿರುವ ಭಾರ್ತಿ Airtel ಹಲವು ಆಕರ್ಷಕ ಯೋಜನೆಗಳ ಆಯ್ಕೆಗಳನ್ನು ಒಳಗೊಂಡಿದೆ. ಇದೀಗ Airtel ಸಂಸ್ಥೆಯು ತನ್ನ 399 ರೂ.ಗಳ ಮತ್ತು 449 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್‌ ಯೋಜನೆಗಳನ್ನು ಅಪ್‌ಡೇಟ್‌ ಮಾಡಿದ್ದು ಪ್ಲಾನ್ ಬೆಲೆಗಳನ್ನು ಬದಲಾಯಿಸದೆ ಅನಿಯಮಿತ 4G ಮತ್ತು 5G ಡೇಟಾವನ್ನು ಲಭ್ಯ ಮಾಡಿದೆ. ಸಂಸ್ಥೆಯ ಈ ಪ್ರೀಪೇಯ್ಡ್‌ ಪ್ಲಾನ್‌ಗಳು ಹೊಸ ಯೋಜನೆಗಳಲ್ಲ. ಆದರೆ ಈ ಯೋಜನೆಗಳ ಡೇಟಾ ಪ್ರಯೋಜನವನ್ನು Unlimited ಎಂದು ಬದಲಾಯಿಸಲಾಗಿದೆ. ಅನ್‌ಲಿಮಿಟೆಡ್‌ ಕೊಡುಗೆಯು 399 ರೂ.ಗಳ ಮತ್ತು 449 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ. ಹಾಗಾದರೆ Airtel ಕಂಪನಿಯ 399 ರೂ.ಗಳ ಮತ್ತು 449 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio ಟೆಲಿಕಾಂ ಈ ಪ್ಲಾನ್‌ಗಳಲ್ಲಿ Netflix ಚಂದಾದಾರಿಕೆ ಉಚಿತ! ಪ್ರತಿದಿನ Data, ಉಚಿತ ವಾಯ್ಸ್ ಕರೆಗಳು ಲಭ್ಯ

Airtel 399 ರೂ.ಗಳ ಪ್ಲಾನ್‌ ಪ್ರಯೋಜನಗಳು

ಭಾರ್ತಿ Airtel ಸಂಸ್ಥೆಯ 399 ರೂಗಳ ಪ್ಲಾನ್‌ ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಸೌಲಭ್ಯ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಿಕೊಂಡಿದೆ. ಇನ್ನು Airtel ನ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ Unlimited + 2.5GB ಪ್ರತಿದಿನ ಡೇಟಾ ಸೌಲಭ್ಯ ಸಹ ಲಭ್ಯ ಆಗಲಿದೆ. ಇಲ್ಲದೇ ವ್ಯಾಲಿಡಿಟಿ ಅವಧಿಯಲ್ಲಿ ದೇಶದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ 100 SMS ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್‌ ಮೊಬೈಲ್‌ ಚಂದಾದಾರಿಕೆ, ಒಂದು ವರ್ಷದ Adobe Express Premium ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ.

Airtel 449 ರೂ.ಗಳ ಪ್ಲಾನ್‌ ಪ್ರಯೋಜನಗಳು

ಭಾರ್ತಿ Airtel ಸಂಸ್ಥೆಯ 449 ರೂಗಳ ಪ್ಲಾನ್‌ ಅನಿಯಮಿತ ಡೇಟಾ ಪ್ರಯೋಜನ ಬಯಸುವ ಬಳಕೆದಾರರಿಗೆ ಅತ್ಯುತ್ತಮ ಎನಿಸಿಕೊಂಡಿದೆ. ಅಂದಹಾಗೆ ಈ ಪ್ರೀಪೇಯ್ಡ್‌ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ Unlimited + 4 GB ಪ್ರತಿದಿನ ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಹಾಗೆಯೇ ವ್ಯಾಲಿಡಿಟಿ ಅವಧಿಯಲ್ಲಿ ದೇಶದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ 100 SMS ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ.

ಇದರೊಂದಿಗೆ ಜಿಯೋ ಹಾಟ್‌ಸ್ಟಾರ್‌ ಮೊಬೈಲ್‌ ಚಂದಾದಾರಿಕೆ, ಒಂದು ವರ್ಷದ Adobe Express Premium ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಈ ಯೋಜನೆಯು Google One (30GB ಕ್ಲೌಡ್ ಸ್ಟೋರೇಜ್) ಪ್ರಯೋಜನ ಸಹ ಪಡೆದುಕೊಂಡಿದೆ. ಅಲ್ಲದೇ 28 ದಿನಗಳಿಗೆ SonyLIV ಆಕ್ಸಸ್‌ ಸೌಲಭ್ಯ ಜೊತೆಗೆ ಉಚಿತ HelloTunes ಅನ್ನು ಒಳಗೊಂಡಿದೆ. ಈ ಬೆಲೆ ವಿಭಾಗದಲ್ಲಿ ಏರ್‌ಟೆಲ್‌ನ ಈ ಯೋಜನೆಗಳು ಜಿಯೋ ಹಾಗೂ ವಿ ಟೆಲಿಕಾಂನ ಪ್ಲಾನ್‌ಗಳಿಗಿಂತ ಆಕರ್ಷಕವಾಗಿ ಕಾಣಿಸಿವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo