Jio ಟೆಲಿಕಾಂ ಈ ಪ್ಲಾನ್‌ಗಳಲ್ಲಿ Netflix ಚಂದಾದಾರಿಕೆ ಉಚಿತ! ಪ್ರತಿದಿನ Data, ಉಚಿತ ವಾಯ್ಸ್ ಕರೆಗಳು ಲಭ್ಯ
Jio ಟೆಲಿಕಾಂನ ಎರಡು ಯೋಜನೆಗಳಲ್ಲಿ Netflix ಚಂದಾದಾರಿಕೆ ಉಚಿತ
Netflix ಜೊತೆಗೆ ಉಚಿತ ಡೇಟಾ, SMS ಮತ್ತು ಉಚಿತ ವಾಯ್ಸ್ ಕರೆ ಸೌಲಭ್ಯ ಸಿಗಲಿವೆ
Jio ಟೆಲಿಕಾಂ ಈ ಎರಡು ಪ್ಲಾನ್ ಆಕರ್ಷಕ ವ್ಯಾಲಿಡಿಟಿ ಪಡೆದಿವೆ
Jio Netflix Plans: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ Jio ಕಂಪನಿಯು ಭಿನ್ನ ಕೊಡುಗೆಗಳ ಮೂಲಕ ಗಟ್ಟಿಯಾಗಿ ನೆಲೆಯೂರಿದೆ. ಕಂಪನಿಯು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಆಯ್ಕೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಅಲ್ಲದೇ ಕೆಲವು ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾ ಪ್ರಯೋಜನ ನೀಡಿದರೆ, ಮತ್ತೇ ಕೆಲವು ಯೋಜನೆಗಳಲ್ಲಿ OTT ಚಂದಾದಾರಿಕೆಯ ಪ್ರಯೋಜನ ಒದಗಿಸಿದೆ. ಆ ಪೈಕಿ ಜಿಯೋದ ಎರಡು ಪ್ರೀಪೇಯ್ಡ್ ಯೋಜನೆಗಳು Netflix ಚಂದಾದಾರಿಕೆಯ ಸೌಲಭ್ಯದ ಮೂಲಕ ಗ್ರಾಹಕರನ್ನು ಸೆಳೆದಿವೆ. ಈ ಎರಡು ಪ್ಲಾನ್‌ಗಳು ಓಟಿಟಿ ಜೊತೆಗೆ ದೈನಂದಿನ ಡೇಟಾ ಸೌಲಭ್ಯ, ಉಚಿತ ವಾಯ್ಸ್ ಕರೆಗಳ ಪ್ರಯೋಜನ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಸಹ ಪಡೆದಿವೆ. ಹಾಗಾದರೆ Netflix ಚಂದಾದಾರಿಕೆ ಪಡೆದಿರುವ ಜಿಯೋ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ನಾಳೆ Realme P4 Power ಮೊಬೈಲ್ ಮಾರಾಟ ಪ್ರಾರಂಭ! 10,001mAh ಬ್ಯಾಟರಿ ಸೌಲಭ್ಯ ಇದೆ
Jio 1299 ರೂ.ಗಳ ಪ್ಲಾನ್ ಪ್ರಯೋಜನಗಳು
ರಿಲಯನ್ಸ್ Jio ಸಂಸ್ಥೆಯ 1299ರೂ ಪ್ಲಾನ್ ಓಟಿಟಿ ಸೌಲಭ್ಯ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಿಕೊಂಡಿದೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಹ ಲಭ್ಯ ಆಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 168GB ಡೇಟಾ ಪ್ರಯೋಜನ ಸಿಗಲಿದೆ. ಇಲ್ಲದೇ ದೇಶದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ 100 SMS ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಇದರೊಂದಿಗೆ Netflix ಮೊಬೈಲ್ ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ ಹಾಗೂ JioTV, JioAICloud ಸೌಲಭ್ಯ ಕೂಡಾ ಲಭ್ಯ ಇರಲಿವೆ.

Jio 1799 ರೂ.ಗಳ ಪ್ಲಾನ್ ಪ್ರಯೋಜನಗಳು
ರಿಲಯನ್ಸ್ Jio ಸಂಸ್ಥೆಯ 1799 ಪ್ಲಾನ್ ಓಟಿಟಿ ಚಂದಾದಾರಿಕೆ ಬಯಸುವ ಬಳಕೆದಾರರಿಗೆ ಅತ್ಯುತ್ತಮ ಎನಿಸಿಕೊಂಡಿದೆ. ಅಂದಾಹಗೆ ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ಸಹ ಲಭ್ಯ ಆಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 252GB ಡೇಟಾ ಪ್ರಯೋಜನ ಸಿಗಲಿದೆ. ಇಲ್ಲದೇ ದೇಶದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ 100 SMS ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಇದರೊಂದಿಗೆ Netflix ಮೊಬೈಲ್ ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ ಹಾಗೂ JioTV, JioAICloud ಸೌಲಭ್ಯ ಕೂಡಾ ಲಭ್ಯ ಇರಲಿವೆ.
ನೆಟ್‌ಫ್ಲಿಕ್ಸ್ ಚಂದಾದಾರಿಕೆಯಂತೆ ಜಿಯೋ ಟೆಲಿಕಾಂ ತನ್ನ ಇತರೆ ಕೆಲವು ಪ್ರೀಪೇಯ್ಡ್ ಯೋಜನೆಗಳಲ್ಲಿ ಅಮೆಜಾನ್ ಪ್ರೈಮ್. ಜೀ5, ಸೋನಿ ಲೈವ್, ಸನ್‌ನೆಕ್ಸ್ಟ್, ಫ್ಯಾನ್‌ಕೋಡ್, ಡಿಸ್ಕವರಿ+ ಸೇರಿದಂತೆ ಕೆಲವು ಓಟಿಟಿಗಳ ಚಂದಾದಾರಿಕೆ ನೀಡಿದೆ. ಜಿಯೋದ 445 ರೂ ಗಳ ಪ್ಲಾನ್ ಒಂದರಲ್ಲಿ 10 OTT ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯನ್ನು ಒದಗಿಸಿದೆ. ಹಾಗೆಯೇ ಈ ಯೋಜನೆಯಲ್ಲಿ 28 ದಿನಗಳ ವ್ಯಾಲಿಡಿಟಿ, ಪ್ರತಿದಿನ 2GB ಡೇಟಾ ಹಾಗೂ 100 SMS ಸೇರಿದಂತೆ ಅನಿಯಮಿತ ಉಚಿತ ವಾಯ್ಸ್ ಕರೆಯ ಸೌಲಭ್ಯ ಸಹ ಸಿಗಲಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile