ಸಖತ್‌ ಸ್ಟೈಲಿಶ್‌ ಡಿಸೈನ್‌ ಹೊಂದಿರುವ Oppo Find X8 Pro ಬೆಲೆಯಲ್ಲಿ ಭರ್ಜರಿ ಇಳಿಕೆ!

HIGHLIGHTS

Amazon ವೆಬ್‌ಸೈಟ್‌ನಲ್ಲಿ Oppo Find X8 Pro ಮೊಬೈಲ್‌ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ

Oppo Find X8 Pro ಮೊಬೈಲ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ

Oppo Find X8 Pro ಮೊಬೈಲ್‌ MediaTek Dimensity 9400 ಪ್ರೊಸೆಸರ್‌ ಒಳಗೊಂಡಿದೆ

ಸಖತ್‌ ಸ್ಟೈಲಿಶ್‌ ಡಿಸೈನ್‌ ಹೊಂದಿರುವ Oppo Find X8 Pro ಬೆಲೆಯಲ್ಲಿ ಭರ್ಜರಿ ಇಳಿಕೆ!

ಜನಪ್ರಿಯ Oppo ಕಂಪನಿಯು ಹಲವು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಆ ಪೈಕಿ ಇತ್ತೀಚಿನ Oppo Find X8 Pro ಸಹ ಒಂದಾಗಿದೆ. ಸದ್ಯ ಈ ಆಕರ್ಷಕ ಮೊಬೈಲ್‌ Amazon ಇ ಕಾಮರ್ಸ್‌ ತಾಣದಲ್ಲಿ ಸಖತ್ ಬೆಲೆ ಇಳಿಕೆ ಪಡೆದಿದ್ದು ಭಾರೀ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಇನ್ನು ಈ ಮೊಬೈಲ್‌ ಮುಂಭಾಗದಲ್ಲಿ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರುವ ಜೊತೆಗೆ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ MediaTek Dimensity 9400 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. Amazon ಪ್ಲಾಟ್‌ಫಾರ್ಮ್ ನಲ್ಲಿ ಈ ಫೋನಿಗೆ ಲಭ್ಯ ಇರುವ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio ಟೆಲಿಕಾಂ ಈ ಪ್ಲಾನ್‌ಗಳಲ್ಲಿ Netflix ಚಂದಾದಾರಿಕೆ ಉಚಿತ! ಪ್ರತಿದಿನ Data, ಉಚಿತ ವಾಯ್ಸ್ ಕರೆಗಳು ಲಭ್ಯ

Oppo Find X8 Pro ಬೆಲೆಯಲ್ಲಿ ಸಖತ್ ಇಳಿಕೆ

Oppo ಮೊಬೈಲ್‌ ಬ್ರ್ಯಾಂಡ್‌ನ Oppo Find X8 Pro ಮೊಬೈಲ್‌ ಬೊಂಬಾಟ್‌ ಬೆಲೆ ಇಳಿಕೆ ಪಡೆದಿದೆ. Amazon ಇ ಕಾಮರ್ಸ್‌ ತಾಣದಲ್ಲಿ 16GB RAM + 512GB ವೇರಿಯಂಟ್‌ನ ಈ ಮೊಬೈಲ್‌ 1,09,999 ರೂಗಳ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಆದರೆ ಇದೀಗ 86,990 ರೂಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಆಫರ್‌ ಸಹ ಪಡೆಯಬಹುದು. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಭಿನ್ನ ಯೋಜನೆಗಳ EMI ಆಯ್ಕೆಗಳನ್ನು ಪಡೆಯಬಹುದು. ಇನ್ನು ಈ ಫೋನ್‌ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Oppo Find X8 Pro ಮೊಬೈಲ್‌ನ ಪ್ರಮುಖ ಫೀಚರ್ಸ್‌

Oppo Find X8 Pro ಮೊಬೈಲ್‌ 6.78 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ ಅತ್ಯುತ್ತಮ ರೆಸಲ್ಯೂಶನ್ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯ ಹೊಂದಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 4,500 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸೌಲಭ್ಯ ಒಳಗೊಂಡಿದೆ. ಇದು Dolby Vision ಸಪೋರ್ಟ್‌ ಕೂಡಾ ಪಡೆದಿದೆ. ಅಂದಹಾಗೆ ಈ ಮೊಬೈಲ್‌ MediaTek Dimensity 9400 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಹಾಗೆಯೇ Oppo Find X8 Pro ಮೊಬೈಲ್‌ ಕ್ಯಾಮೆರಾ ವಿಭಾಗದಿಂದಲೂ ಆಕರ್ಷಕ ಎನಿಸುತ್ತದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದ್ದು 50MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಹಾಗೆಯೇ ಇದರ ಉಳಿದ ಮೂರು ಕ್ಯಾಮೆರಾಗಳು ಸಹ 50MP ಸೆನ್ಸರ್ ಸೌಲಭ್ಯ ಅನ್ನು ಪಡೆದಿವೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್‌ 32MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 5,910mAh ಬ್ಯಾಟರಿ ಜೊತೆಗೆ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo