ಭಾರತಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಡಲಿದೆ Xiaomi 17 ಸರಣಿ! ನಿರೀಕ್ಷಿತ ಫೀಚರ್ಸ್‌ ಹೀಗಿವೆ

HIGHLIGHTS

Xiaomi 17 ಸರಣಿಯು ಮಾರ್ಚ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಆಗುವ ಸಾಧ್ಯತೆ

Xiaomi 17 ಸರಣಿಯು Xiaomi 17 ಮತ್ತು Xiaomi 17 Ultra ಮಾಡೆಲ್‌ ಹೊಂದಿರಲಿದೆ

Xiaomi 17 ಸರಣಿಯ ಫೋನ್‌ಗಳು Leica ಕ್ಯಾಮೆರಾ ವ್ಯವಸ್ಥೆ ಪಡೆದಿರಲಿವೆ

ಭಾರತಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಡಲಿದೆ Xiaomi 17 ಸರಣಿ! ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಚೀನಾ ಮೂಲದ Xiaomi ಮೊಬೈಲ್‌ ಕಂಪನಿಯು ತನ್ನ Xiaomi 17 ಸರಣಿಯನ್ನು ಇದೀಗ ಜಾಗತಿಕವಾಗಿ ಲಾಂಚ್ ಮಾಡಲು ಸಜ್ಜಾಗುತ್ತಿದೆ ಎನ್ನಲಾಗಿದೆ. ಈ ಸರಣಿಯು Xiaomi 17 ಮತ್ತು Xiaomi 17 Ultra ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಕಂಪನಿಯು ಈ ಮೊಬೈಲ್‌ಗಳನ್ನು ಮುಂಬರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ಕಾರ್ಯಕ್ರಮಗಿಂತ ಮುಂಚಿತವಾಗಿ ಬಿಡುಗಡೆ ಮಾಡಲಿದೆ. ಇದೇ ಮಾರ್ಚ್ ಆರಂಭದಲ್ಲಿ ದೇಶಿಯ ಮಾರುಕಟ್ಟೆಗೆ Xiaomi 17 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಲೀಕ್‌ ಮಾಹಿತಿಗಳಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಸದ್ಯದಲ್ಲೇ ಬರ್ತಿದೆ Infinix Note 60 ಸ್ಮಾರ್ಟ್‌ಫೋನ್‌ ಸರಣಿ! ಬಿಡುಗಡೆ ಮುನ್ನವೇ ಫೀಚರ್ಸ್‌ ಲೀಕ್

Xiaomi 17 ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಶಿಯೋಮಿ ಸಂಸ್ಥೆಯ ಮುಂಬರುವ Xiaomi 17 ಮೊಬೈಲ್‌ 6.3 ಇಂಚಿನ OLED ಮಾದರಿಯ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್‌ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿರಲಿದೆ. ಇನ್ನು ಇದು Leica ಲೆನ್ಸ್ ಒಳಗೊಂಡ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದ್ದು ಇದರ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್‌ ಆಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಬರಲಿವೆ ಎನ್ನಲಾಗಿದೆ. ಅಂದಹಾಗೆ ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರಬಹುದು.

Xiaomi 17 Ultra ನಿರೀಕ್ಷಿತ ಫೀಚರ್ಸ್‌ ಹೀಗಿವೆ

Xiaomi ಮೊಬೈಲ್‌ ಸಂಸ್ಥೆಯ ನೂತನ Xiaomi 17 Ultra ಇದು 120Hz ರಿಫ್ರೆಶ್ ರೇಟ್ ಜೊತೆಗೆ ವಿಶಾಲ 6.9 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಈ ಮೊಬೈಲ್‌ ಕೂಡಾ ಕ್ವಾಲ್ಕಮ್‌ನ ಇತ್ತೀಚಿನ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇನ್ನು ಇದು Leica ಲೆನ್ಸ್ ಒಳಗೊಂಡ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದ್ದು ಇದರ ಮುಖ್ಯ ಕ್ಯಾಮೆರಾವು 200MP ಟೆಲಿಫೋಟೋ ಸೆನ್ಸಾರ್‌ ಆಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಬರಲಿವೆ ಎನ್ನಲಾಗಿದೆ. ಅಂದಹಾಗೆ ಈ ಫೋನ್‌ 6,800mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಸಪೋರ್ಟ್‌ ಪಡೆದಿರಬಹುದು.

Xiaomi 17 ಸರಣಿಯ ನಿರೀಕ್ಷಿತ ಬಿಡುಗಡೆ ದಿನಾಂಕ

Xiaomi 17 ಸರಣಿಯು Xiaomi ಸಂಸ್ಥೆಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ಲೈನ್‌ಅಪ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಈ ಹೊಸ Xiaomi 17 ಮತ್ತು Xiaomi 17 Ultra ಮೊಬೈಲ್‌ ಇದೇ ಮಾರ್ಚ್ 2026 ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ. ಇನ್ನು ಕೆಲವು ಲೀಕ್ ವರದಿಗಳ ಪ್ರಕಾರ ಫೆಬ್ರವರಿ 2026 ರ ಅಂತ್ಯದ ವೇಳೆಗೆ ಲಾಂಚ್‌ ಆಗಬಹುದು ಎಂದು ಹೇಳಲಾಗುತ್ತಿದೆ. Xiaomi 17 ಮತ್ತು Xiaomi 17 Ultra ಬಿಡುಗಡೆ ಆದ ಒಂದು ತಿಂಗಳ ಬಳಿಕ Xiaomi 17T ಮೊಬೈಲ್‌ ಸಹ ಲಾಂಚ್‌ ಆಗುವ ನಿರೀಕ್ಷೆಗಳಿವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo