iQOO Neo 10R ಸ್ಮಾರ್ಟ್‌ಫೋನ್‌ Snapdragon 8s Gen 3 ಚಿಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

HIGHLIGHTS

ಭಾರತದಲ್ಲಿ ಮುಂಬರಲಿರುವ ಹೊಸ iQOO Neo 10R ಸ್ಮಾರ್ಟ್‌ಫೋನ್‌ ಮಾಹಿತಿ.

iQOO Neo 10R ಸ್ಮಾರ್ಟ್‌ಫೋನ್‌ Snapdragon 8s Gen 3 ಚಿಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ.

iQOO Neo 10R ಸ್ಮಾರ್ಟ್‌ಫೋನ್‌ Snapdragon 8s Gen 3 ಚಿಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

Upcoming iQOO Neo 10R: ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪನಿ ಐಕ್ಯೂ (iQOO) ತನ್ನ ಮುಂಬರಲಿರುವ ಹೊಸ iQOO Neo 10R ಸ್ಮಾರ್ಟ್‌ಫೋನ್‌ Snapdragon 8s Gen 3 ಚಿಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಮುಂಬರಲಿರುವ ಲೇಟೆಸ್ಟ್ ಸ್ಮಾರ್ಟ್ಫೋನ್ ಆರಂಭಿಕ 8GB RAM ಸುಮಾರು 30,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಐಕ್ಯೂ ಕಂಪನಿ R ಸರಣಿಯಲ್ಲಿ ಇದನ್ನು ಸೇರಿಸಲಿದ್ದು ಇದರ ಬಗ್ಗೆ ಸ್ವತಃ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಒಂದಿಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ.

Digit.in Survey
✅ Thank you for completing the survey!

ಭಾರತದಲ್ಲಿ iQOO Neo 10R ಸ್ಮಾರ್ಟ್‌ಫೋನ್‌ ನಿರೀಕ್ಷಿತ ಬೆಲೆ

iQOO Neo 10R ನೀಡಿರುವ ಟೀಸರ್‌ಗಳು ಫೋನ್‌ನ ಪ್ರೊಸೆಸರ್ ಮತ್ತು ವಿನ್ಯಾಸದ ವಿವರಗಳನ್ನು ಈ ಕೆಳಗೆ ಪರಿಶೀಲಿಸಬಹುದು. ಈ ಮುಂಬರಲಿರುವ ಹೊಸ iQOO Neo 10R ಸ್ಮಾರ್ಟ್‌ಫೋನ್‌ ಒಟ್ಟು ಎರಡು ರೂಪಾಂತರಗಳಲ್ಲಿ 8GB RAM ಮತ್ತು 128GB ಸ್ಟೋರೇಜ್ ಬೆಲೆ ಸುಮಾರು 27,999 ರೂಗಳಾಗಿವೆ.

Upcoming iQOO Neo 10R

ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನು ಸುಮಾರು 29,999 ರೂಗಳಿಗೆ ಬಿಳಿ ನೀಲಿ ಮಿಶ್ರಣ ಮತ್ತು ಬಿಳಿ ಕೇಸರಿ ಮಿಶ್ರಣದ ಬಣ್ಣಗಳಲ್ಲಿ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಲ್ಲದೆ ಕಂಪನಿ ಬಿಡೂಡುಗಡೆಯ ಸಮಯದಲ್ಲಿ ಆಯ್ದ ಬ್ಯಾಂಕ್ ಕಾರ್ಡ್ ಮೇಲೆ ಉತ್ತಮ ಡಿಸ್ಕೌಂಟ್‌ಗಳನ್ನು ಸಹ ನಿರೀಕ್ಷಿಸಬಹುದು.

Also Read: Jio Plans 2025: ಇದೇ ಕಾರಣಕ್ಕಾಗಿ ಅನ್ಲಿಮಿಟೆಡ್ ಕರೆ ಮತ್ತು SMS ಸಿಗುವ ಈ ಹೊಸ Jio ಪ್ಲಾನ್ ಗ್ರಾಹಕರಿಗೆ ಇಷ್ಟವಾಗುತ್ತಿದೆ!

iQOO Neo 10R ಸ್ಮಾರ್ಟ್‌ಫೋನ್‌ ಫೀಚರ್ ಮತ್ತು ವಿಶೇಷಣೆಗಳೇನು?

iQOO Neo 10R ಸ್ಮಾರ್ಟ್‌ಫೋನ್‌ 144Hz ರಿಫ್ರೆಶ್ ದರದೊಂದಿಗೆ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಬೃಹತ್ 6400mAh ಬ್ಯಾಟರಿಯನ್ನು ಹೊಂದಿದೆ. ಇದು ಭಾರೀ ಬಳಕೆಯ ದಿನದ ಮೂಲಕ ಸುಲಭವಾಗಿ ಉಳಿಯುತ್ತದೆ. ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS ಅನ್ನು ಬಾಕ್ಸ್‌ನ ಹೊರಗೆ ರನ್ ಮಾಡಬಹುದು ಮತ್ತು ಹೊಸ iQOO Neo 10R ಸ್ಮಾರ್ಟ್‌ಫೋನ್‌ ಒಟ್ಟು ಎರಡು ರೂಪಾಂತರಗಳಲ್ಲಿ 8GB RAM ಮತ್ತು 128GB ಸ್ಟೋರೇಜ್ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರಬಹುದು.

Upcoming iQOO Neo 10R

iQOO Neo 10R ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆಟಪ್ 50MP ಮೆಗಾಪಿಕ್ಸೆಲ್ Sony LYT-600 ಪ್ರೈಮರಿ ಸೆನ್ಸರ್ 4K 60fps ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯವನ್ನು ಒಳಗೊಂಡಿರಬಹುದು. 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಳಿಗಾಗಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. iQOO Neo 10R ಸ್ಮಾರ್ಟ್‌ಫೋನ್‌ ಅಮೆಜಾನ್ ಮತ್ತು ಬಹುಶಃ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo