ಇಂದಿನಿಂದ Redmi Note 15 Pro ಸರಣಿಯ ಫೋನ್‌ಗಳ ಮಾರಾಟ ಪ್ರಾರಂಭ! ಆಫರ್‌ ಹಾಗೂ ಫೀಚರ್ಸ್‌

HIGHLIGHTS

ಭಾರತದಲ್ಲಿ Redmi Note 15 Pro ಸರಣಿಯ ಮೊಬೈಲ್‌ಗಳ ಸೇಲ್‌ ಶುರು

Redmi Note 15 Pro ಸರಣಿಯು ಎರಡು ಮಾಡೆಲ್‌ಗಳನ್ನು ಒಳಗೊಂಡಿದೆ

Redmi Note 15 Pro ಸರಣಿಯ ಫೋನ್‌ಗಳಿಗೆ ಬ್ಯಾಂಕ್‌ ಆಫರ್‌ ಸಹ ಲಭ್ಯ ಇದೆ

ಇಂದಿನಿಂದ Redmi Note 15 Pro ಸರಣಿಯ ಫೋನ್‌ಗಳ ಮಾರಾಟ ಪ್ರಾರಂಭ! ಆಫರ್‌ ಹಾಗೂ ಫೀಚರ್ಸ್‌

Xiaomi ಸಂಸ್ಥೆಯ ಸಬ್‌ ಬ್ರ್ಯಾಂಡ್‌ ಆಗಿರುವ ರೆಡ್ಮಿ ಕಳೆದ ವಾರ ಬಿಡುಗಡೆ ಮಾಡಿರುವ Redmi Note 15 Pro 5G ಮೊಬೈಲ್‌ ಸರಣಿಯು ಭಾರತದಲ್ಲಿ ಇಂದಿನಿಂದ (ಫೆಬ್ರವರಿ 4 ರಿಂದ) ಮಾರಾಟ ಪ್ರಾರಂಭಿಸಿದೆ. ಅಂದಹಾಗೆ ಈ ಸರಣಿಯು ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ Redmi Note 15 Pro 5G ಮತ್ತು Redmi Note 15 Pro+ 5G ಮಾಡೆಲ್‌ ಆಗಿವೆ. ಇನ್ನು ಈ ಎರಡು ಫೋನ್‌ಗಳು ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿವೆ ಜೊತೆಗೆ 120Hz ಸ್ಕ್ರೀನ್‌ ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡಿವೆ. ಅಲ್ಲದೇ ಈ ಮೊಬೈಲ್‌ಗಳು 6,500mAh ಬ್ಯಾಟರಿ ಸಪೋರ್ಟ್‌ ಪಡೆದಿವೆ. ಹಾಗಾದರೇ Redmi Note 15 Pro ಸರಣಿಯ ಫೀಚರ್ಸ್, ಸೇಲ್ ಹಾಗೂ ಬೆಲೆ ಮಾಹಿತಿ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಸಖತ್‌ ಸ್ಟೈಲಿಶ್‌ ಡಿಸೈನ್‌ ಹೊಂದಿರುವ Oppo Find X8 Pro ಬೆಲೆಯಲ್ಲಿ ಭರ್ಜರಿ ಇಳಿಕೆ!

Redmi Note 15 Pro 5G ಸರಣಿಯ ಸೇಲ್‌ ಪ್ರಾರಂಭ

ಭಾರತದಲ್ಲಿ Redmi Note 15 Pro 5G ಮೊಬೈಲ್‌ ಸರಣಿಯು Amazon ತಾಣದ ಮೂಲಕ ಇಂದು (ಫೆಬ್ರವರಿ 4 ರಿಂದ) ಮಾರಾಟ ಶುರು ಮಾಡಿದೆ. Redmi Note 15 Pro 5G ಮೊಬೈಲ್‌ನ ಆರಂಭಿಕ 8GB RAM +128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 29,999 ರೂಗಳು ಆಗಿದೆ. ಹಾಗೆಯೇ ಇದರ 8GB + 256GB ಸ್ಟೋರೇಜ್‌ ವೇರಿಯಂಟ್‌ 31,999 ರೂಗಳ ಬೆಲೆಯಲ್ಲಿ ಲಭ್ಯ ಇದೆ. ಅದೇ ರೀತಿ Redmi Note 15 Pro+ 5G ಫೋನಿನ ಆರಂಭಿಕ 8GB RAM +128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 37,999 ರೂಗಳು ಆಗಿದೆ. ಹಾಗೆಯೇ ಇದರ 12GB + 256GB ಸ್ಟೋರೇಜ್‌ ವೇರಿಯಂಟ್‌ 39,999 ರೂಗಳ ಬೆಲೆಯಲ್ಲಿ ಲಭ್ಯ. ಅಲ್ಲದೇ 12GB + 512GB ಸ್ಟೋರೇಜ್‌ ವೇರಿಯಂಟ್‌ ದರವು 43,999 ರೂಗಳು ಆಗಿದೆ. ಆಸಕ್ತ ಖರೀದಿದಾರರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ EMI ಗಳನ್ನು ಬಳಸಿಕೊಂಡು ರೂ. 3,000 ವರೆಗಿನ ಇನ್‌ಸ್ಟಂಟ್‌ ರಿಯಾಯಿತಿಯನ್ನು ಪಡೆಯಬಹುದು.

Redmi Note Note 15 Pro

Redmi Note 15 Pro 5G ಫೀಚರ್ಸ್‌ ಹೀಗಿವೆ

Redmi Note 15 Pro 5G ಮೊಬೈಲ್‌ 6.83 ಇಂಚಿನ AMOLED ಡಿಸ್‌ಪ್ಲೇ ಪಡೆದಿದ್ದು, ಇದು 1.5K 1,280 x 2,772 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಜೊತೆಗೆ 3,200 ನಿಟ್‌ಗಳ ಬ್ರೈಟ್ನೆಸ್‌ ಪಡೆದಿದೆ. ಹಾಗೆಯೇ ಇದು MediaTek Dimensity 7400-Ultra ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕೆಲಸ ಮಾಡಲಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಪ್ರಾಥಮಿಕ ಕ್ಯಾಮೆರಾ 200MP ಸೆನ್ಸಾರ್ ಆಗಿದ್ದು ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್‌ನಲ್ಲಿದೆ. ಇದರೊಂದಿಗೆ 20MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 45W ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,580mAh ಬ್ಯಾಟರಿಯನ್ನು ಹೊಂದಿದೆ.

Redmi Note 15 Pro+ 5G ಫೀಚರ್ಸ್‌ ಹೀಗಿವೆ

ಈ ಮೊಬೈಲ್‌ ಸಹ 6.83 ಇಂಚಿನ AMOLED ಡಿಸ್‌ಪ್ಲೇ ಹೊಂದಿರುವ ಜೊತೆಗೆ 1.5K 1,280 x 2,772 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಜೊತೆಗೆ 3,200 ನಿಟ್‌ಗಳ ಬ್ರೈಟ್ನೆಸ್‌ ಒಳಗೊಂಡಿದೆ. ಇದರ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಇದು Snapdragon 7s Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕಾರ್ಯ ನಿರ್ವಹಿಸಲಿದೆ. ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು ಕ್ಯಾಮೆರಾಗಳು ಕ್ರಮವಾಗಿ 200MP ಸೆನ್ಸಾರ್ ಮತ್ತು 8MP ಸೆನ್ಸಾರ್‌ನಲ್ಲಿ ಇವೆ. ಇದರೊಂದಿಗೆ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 6,500mAh ಬ್ಯಾಟರಿಯನ್ನು ಪಡೆದಿದ್ದು ಇದಕ್ಕೆ ಪೂರಕವಾಗಿ 100W ವೈರ್ಡ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ವೈರ್ಡ್ ಚಾರ್ಜಿಂಗ್‌ ವ್ಯವಸ್ಥೆ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo