Reliance Jio ಗಣರಾಜ್ಯೋತ್ಸವದ ಪ್ರಯುಕ್ತ ತನ್ನ ಈ ಯೋಜನೆಗಳ ಬೆಲೆಯನ್ನು ಕಡಿತಗೊಳಿಸಿದೆ.
Reliance Jio ಹೊಸ ಪ್ಲಾನ್ ಬೆಲೆ 84 ದಿನಗಳ ಪ್ಲಾನ್ ಬೆಲೆ 448 ಮತ್ತು ವಾರ್ಷಿಕ 1748 ರೂಗಳಾಗಿವೆ.
ಜಿಯೋ TRAI ಆರ್ಡರ್ ಬಂದ ಮೇಲೆ 2 ಅತ್ಯುತ್ತಮ ವಾಯ್ಸ್ ಮತ್ತು SMS ಯೋಜನೆಗಳನ್ನು ಪರಿಚಯಿಸಿತ್ತು.
Jio Plans 2025: ಭಾರತದ ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ TRAI ಆರ್ಡರ್ ಬಂದ ಮೇಲೆ 2 ಅತ್ಯುತ್ತಮ ವಾಯ್ಸ್ ಮತ್ತು SMS ಯೋಜನೆಗಳನ್ನು ಪರಿಚಯಿತ್ತು ಆದರೆ ಗಣರಾಜ್ಯೋತ್ಸವದ ಪ್ರಯುಕ್ತ ತನ್ನ ಈ ಯೋಜನೆಗಳ ಬೆಲೆಯನ್ನು ಕಡಿತಗೊಳಿಸಿದೆ. ಅದರಲ್ಲೂ ಮುಖ್ಯವಾಗಿ ವಾರ್ಷಿಕ ಯೋಜನೆಯಲ್ಲಿ 210 ರೂಗಳ ಭಾರಿ ಬೆಲೆಯನ್ನು ಕಡಿಮೆಗೊಳಿಸಿದೆ. ಅನ್ಲಿಮಿಟೆಡ್ ವಾಯ್ಸ್ ಕರೆ ಮತ್ತು SMS-ಮಾತ್ರ ನೀಡುವ ಈ ಹೊಸ ಪ್ಲಾನ್ ಬೆಲೆ 84 ದಿನಗಳ ಪ್ಲಾನ್ ಬೆಲೆ 448 ಮತ್ತು ವಾರ್ಷಿಕ 1748 ರೂಗಳಾಗಿವೆ.
Surveyಈ ಬಾರಿ ಯೋಜನೆಯು ಹಿಂದಿನಂತೆ 365 ದಿನಗಳ ಮಾನ್ಯತೆಯೊಂದಿಗೆ ಬರುವುದಿಲ್ಲ. ಬದಲಿಗೆ ರಿಲಯನ್ಸ್ ಜಿಯೋ ತನ್ನ ಮಾನ್ಯತೆಯನ್ನು 336 ದಿನಗಳಿಗೆ ಇಳಿಸಿದೆ. ಇದರಿಂದಾಗಿ ಬೆಲೆಯಲ್ಲಿನ ಈ ಬದಲಾವಣೆಯು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅಲ್ಲದೆ ಎಂದಿನಂತೆ ಜಿಯೋ ತನ್ನ ವೆಬ್‌ಸೈಟ್‌ನಲ್ಲಿ ಗಣರಾಜ್ಯೋತ್ಸವದ ಕೊಡುಗೆಗಳೊಂದಿಗೆ ಕಾಲೋಚಿತ ಬ್ಯಾನರ್ ಅನ್ನು ನವೀಕರಿಸಿದೆ. ವಾರ್ಷಿಕ ಯೋಜನೆಗಳ ಮೇಲೆ ಕೂಪನ್‌ಗಳನ್ನು ನೀಡುತ್ತದೆ.
Also Read: Jio Republic Day Offer 2025: ಗಣರಾಜ್ಯೋತ್ಸವದ ಪ್ರಯುಕ್ತ ಹೊಸ ಪ್ಲಾನ್ ಪರಿಚಯಿಸಿದ ಜಿಯೋ!
ಜಿಯೋದ ಅನ್ಲಿಮಿಟೆಡ್ ವಾಯ್ಸ್ ಕರೆ ಮತ್ತು SMS ಉಚಿತ (Jio Plans 2025):
ರಿಲಯನ್ಸ್ ಜಿಯೋ ಈಗ ₹448 ರಿಂದ ಪ್ರಾರಂಭವಾಗುತ್ತದೆ. ಈ ಮೊದಲು ಈ ಯೋಜನೆಯ ಬೆಲೆ ₹458 ರಷ್ಟಿತ್ತು ಅದನ್ನು ₹10 ರಷ್ಟು ಕಡಿಮೆ ಮಾಡಲಾಗಿದೆ.ಆದರೆ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಯೋಜನೆಯು ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು 1,000 SMS ಗಳನ್ನು ಒಳಗೊಂಡಿದ್ದು ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ (ಪ್ರೀಮಿಯಂ ಅಲ್ಲದ) ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವೂ ಸೇರಿದೆ.

ರಿಲಯನ್ಸ್ ಜಿಯೋ ಈ ಯೋಜನೆಯನ್ನು ತನ್ನ ಮೌಲ್ಯ (Value) ಕೊಡುಗೆಗಳ ಅಡಿಯಲ್ಲಿ ವರ್ಗೀಕರಿಸುತ್ತದೆ. ಈ ಯೋಜನೆ ಈಗ ದಿನಕ್ಕೆ ಸುಮಾರು ₹5 ರೂಗಳ ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಿದೆ. ರಿಲಯನ್ಸ್ ಜಿಯೋದ ₹1748 ಯೋಜನೆಯು ಈಗ ಅನ್ಲಿಮಿಟೆಡ್ ವಾಯ್ಸ್ ಕರೆ ಮತ್ತು 3600 SMS ಗಳನ್ನು 336 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ಹಿಂದಿನ ₹1958 ಯೋಜನೆಗಿಂತ ₹210 ರೂಗಳ ಬೆಲೆ ಕಡಿತಗೊಳಿಸಿ 365 ದಿನಗಳ ಮಾನ್ಯತೆಯನ್ನು ನೀಡಿತು.
Jio ನಿಜಕ್ಕೂ ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ.
ಇದರರ್ಥ ಜಿಯೋ ಈ ಯೋಜನೆಯ ಮಾನ್ಯತೆಯನ್ನು 29 ದಿನಗಳು (ಸರಿಸುಮಾರು 1 ತಿಂಗಳು) ಕಡಿಮೆ ಮಾಡಿದೆ ಮತ್ತು ಬೆಲೆಯನ್ನು ಕಡಿಮೆ ಮಾಡಿದೆ. ಇದು ದೀರ್ಘಾವಧಿಯ ಕೊಡುಗೆಯಾಗಿ ಗ್ರಾಹಕರಿಗೆ ಅಗ್ಗವಾಗಿದೆ. ಈ ಯೋಜನೆ ಈಗ ಗ್ರಾಹಕರಿಗೆ ದಿನಕ್ಕೆ ₹ 5.20 ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಿದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ (ಪ್ರೀಮಿಯಂ ಅಲ್ಲದ) ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವೂ ಸೇರಿದೆ. ರಿಲಯನ್ಸ್ ಜಿಯೋ ಈ ಯೋಜನೆಯನ್ನು ‘ಮೌಲ್ಯ’ ಕೊಡುಗೆಗಳ ಅಡಿಯಲ್ಲಿ ವರ್ಗೀಕರಿಸುತ್ತದೆ. ಏರ್‌ಟೆಲ್ ಕನಿಷ್ಠ ಯೋಜನೆಯ ಸಿಂಧುತ್ವ ಅಥವಾ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile