ವಾವ್! ಬರೋಬ್ಬರಿ 15000mAh ಪವರ್ಫುಲ್ ಬ್ಯಾಟರಿ ಮತ್ತು ‘AC Phone’ ಬಿಡುಗಡೆಗೆ ಸಜ್ಜಾಗಿರುವ realme!
Realme ತನ್ನ ಹೊಸ 15000mAh ಬ್ಯಾಟರಿಯ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾಗಿದೆ.
ರಿಯಲ್‌ಮಿ ಇದರ ಕಾನ್ಸೆಪ್ಟ್ ಸ್ಮಾರ್ಟ್ಫೋನ್ (Concept Phone) #realme828FanFest ಅಲ್ಲಿ ಪರಿಚಯಿಸಲಿದೆ.
ಈ ಸ್ಮಾರ್ಟ್ಫೋನ್ ಅನ್ನು ನಾಳೆ ಅಂದರೆ 28ನೇ ಆಗಸ್ಟ್ 2025 ರಂದು ಮೊದಲ ಬಾರಿಗೆ ತಮ್ಮ ಫ್ಯಾನ್ ಫೆಸ್ಟ್ ಅಲ್ಲಿ ತೋರಿಸಲಿದೆ.
Realme AC Phone: ಇತ್ತೀಚೆಗೆ ಸಿಲಿಕಾನ್-ಕಾರ್ಬನ್ ಬ್ಯಾಟರಿ ತಂತ್ರಜ್ಞಾನದ ಕಾರಣದಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿ ಕಾಣಲು ಶುರುವಾಗಿದೆ. ಸಾಮಾನ್ಯವಾಗಿ ನೀವು POCO F7 ಫೋನಲ್ಲಿ 7500mAh ಬ್ಯಾಟರಿ ಮತ್ತು Realme GT 7 ಸ್ಮಾರ್ಟ್ ಫೋನಲ್ಲಿ 7000mAh ಬ್ಯಾಟರಿಯೊಂದಿಗೆ ಈಗಾಗಲೇ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವುದನ್ನು ಕಾಣಬಹುದು. ಅಲ್ಲದೆ ರಿಯಲ್‌ಮಿ ತನ್ನ ಹೊಸ “AC Phone” ಅನ್ನು ನಾಳೆ ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಆದರೆ ಈಗ ಮೊದಲ ಬಾರಿಗೆ ರಿಯಲ್‌ಮಿ ಬ್ರಾಂಡ್ ತನ್ನ ಮುಂಬರಲಿರುವ ಸ್ಮಾರ್ಟ್ ಫೋನ್‌ನಲ್ಲಿ ಬರೋಬ್ಬರಿ 15000mAh ಮಹಾ ಬ್ಯಾಟರಿ ನೀಡುವ ಸಾಧ್ಯತೆಗಳಿವೆ.
SurveyRealme AC Phone ವಿಶೇಷತೆಗಳೇನು?
ಈ ಫೋನ್‌ನಲ್ಲಿ ವಿಶೇಷ ಏರ್ ಕೂಲಿಂಗ್ ತಂತ್ರಜ್ಞಾನ ಇರುತ್ತದೆ. ಇದು ಗೇಮಿಂಗ್ ಹಾಗೂ ಅತಿ ಹೆಚ್ಚು ಬಳಕೆಯ ಸಮಯದಲ್ಲಿ ಫೋನ್ ಬಿಸಿಯಾಗದಂತೆ ತಡೆಗಟ್ಟುತ್ತದೆ. ಜೊತೆಗೆ ದೊಡ್ಡ ಬ್ಯಾಟರಿ, ಪವರ್ಫುಲ್ ಪ್ರೊಸೆಸರ್ ಮತ್ತು ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದೆ ಎಂದು ಕಂಪನಿ ಟೀಸರ್‌ನಲ್ಲಿ ಸೂಚಿಸಿದೆ. ಇದು ವಿಶ್ವದ ಮೊದಲ AC ಫೋನ್ ಆಗಿ ಗುರುತಿಸಲ್ಪಡುವ ನಿರೀಕ್ಷೆ ಇದೆ.ಭಾರತದಲ್ಲಿ ಕಂಪನಿ ಮೊಟ್ಟ ಮೊದಲ ‘Realme AC Phone’ ಅನ್ನು ನಾಳೆ ಅಂದ್ರೆ 28 ನೇ ಆಗಸ್ಟ್ 2025 ರಂದು ಪರಿಚಯಿಸಲಿದೆ.
Cool gameplay deserves a cooler phone.
— realme (@realmeIndia) August 26, 2025
realme Chill Fan Phone has a built-in AC that keeps your phone frosty while you play on fire.
Catch it at #realme828FanFest, 28th Aug, 12 PM — streaming live on Facebook!
Know More: https://t.co/c8wHve6fZ2#FreeToBeReal… pic.twitter.com/3LD9T1j6wQ
ಈಗಾಗಲೇ 10,000mAh ಕಾನ್ಸೆಪ್ಟ್ ಫೋನ್ ಬಿಡುಗಡೆಗೊಳಿಸಿದೆ:
ಇದು ಸಂಪೂರ್ಣ ಹೊಸ ವಿಚಾರವಲ್ಲ ಯಾಕೆಂದರೆ ರಿಯಲ್‌ಮಿ ಈ ವರ್ಷದ ಆರಂಭದಲ್ಲಿ 10,000mAh ಬ್ಯಾಟರಿಯ ಕಾನ್ಸೆಪ್ಟ್ ಫೋನ್ ಪ್ರದರ್ಶಿಸಿತ್ತು. ಈಗ 15,000mAh ಬ್ಯಾಟರಿ ಬಗ್ಗೆ ಟೀಸರ್ ಬಿಟ್ಟಿರುವುದರಿಂದ ಕಂಪನಿ ಇನ್ನಷ್ಟು ಶಕ್ತಿ ತುಂಬಲು ಸಜ್ಜಾಗಿದೆ. ಟೀಸರ್‌ನಲ್ಲಿ 50 ಗಂಟೆಗಳ ನಿರಂತರ ಸ್ಟ್ರೀಮಿಂಗ್ ಸಾಧ್ಯ ಎಂದು ಹೇಳಲಾಗಿದೆ. ಇದು ಬಹಳ ದೊಡ್ಡ ಅಂಕಿಯಾಗಿದೆ. ಅಲ್ಲದೆ ಇದರ ಬಗ್ಗೆ ಇಂದು ಚೀನಾದಲ್ಲಿ ಮಾಹಿತಿ ನೀಡಿರುವ ಕಂಪನಿ ತನ್ನ Realme Global ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದರ ಟೀಸರ್ ಹಂಚಿಕೊಂಡಿದೆ.
Also Read: Apple Awe-Dropping: ಮುಂದಿನ ತಿಂಗಳು iPhone 17 ಸೇರಿ ವಿಶೇಷ ಬಿಡುಗಡೆಗೆ ಸಜ್ಜಾಗಿರುವ ಆಪಲ್!
320W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 15,000mAh ಬ್ಯಾಟರಿ
ರಿಯಲ್‌ಮಿ ತನ್ನ ಚಾರ್ಜಿಂಗ್ ತಂತ್ರಜ್ಞಾನದಲ್ಲೂ ಮಿತಿಗಳನ್ನು ಮುರಿಯುತ್ತಿದೆ. ಈಗಾಗಲೇ ಕಂಪನಿಯು 320W ಫಾಸ್ಟ್ ಚಾರ್ಜ್ ಅನ್ನು SuperSonic Charge ಎನ್ನುವ ಮೂಲಕ ಪ್ರದರ್ಶಿಸಿದೆ. ಇದು 4420mAh ಬ್ಯಾಟರಿಯನ್ನು ಕೇವಲ 4 ನಿಮಿಷಗಳಲ್ಲಿ 0 ರಿಂದ 100% ಚಾರ್ಜ್ ಮಾಡುತ್ತದೆ. ಆದರೆ 15,000mAh ಬ್ಯಾಟರಿಯಂತಹ ದೊಡ್ಡ ಸಾಮರ್ಥ್ಯವಿರುವ ಫೋನ್ ಅನ್ನು ಕೂಡ ಈ ರೀತಿಯ ಅತಿವೇಗದ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಚಾರ್ಜ್ ಮಾಡಲು ಸಾಧ್ಯವಿದ್ದು ನೀವೇ ಲೆಕ್ಕ ಹಾಕಿ ಫುಲ್ ಚಾರ್ಜ್ ಮಾಡಲು ಎಷ್ಟು ಸಮಯ ಹಿಡಿಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile