Realme 15T ಜಬರ್ದಸ್ತ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ 50MP ಸೇಲ್ಫಿ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ!
Realme 15T 5G ಸ್ಮಾರ್ಟ್ ಫೋನ್ ಇಂದು ಅನ್ನು ಅಧಿಕೃತವಾಗಿ ಬಿಡುಗಡೆಯಾಗಿದೆ.
Realme 15T 5G ಸ್ಮಾರ್ಟ್ ಫೋನ್ 50MP AI ಕ್ಯಾಮೆರಾ ಮತ್ತು 7000mAh ಬ್ಯಾಟರಿಯೊಂದಿಗೆ ಬರುತ್ತದೆ.
Realme 15T 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ 18,999 ರೂಗಳಿಗೆ ಖರೀದಿಸಬಹುದು.
ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ತನ್ನ ಹೊಚ್ಚ ಹೊಸ Realme 15T 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ತರಲಿದ್ದು ಬಿಡುಗಡೆಗೆ ಮುಂಚೆ ಈಗಾಗಲೇ ಇದರ ಮೈಕ್ರೋ ಸೈಟ್ ಪೇಜ್ ಲೈವ್ ಮಾಡಿದೆ. ಸ್ಮಾರ್ಟ್ ಫೋನ್ MediaTek Dimensity 6400 MAX ಪ್ರೊಸೆಸರ್ ಮತ್ತು 7000mAh ಬ್ಯಾಟರಿಯೊಂದಿಗೆ ಆಕರ್ಷಕ ಫೀಚರ್ಗಳೊಂದಿಗೆ ಪ್ಯಾಕ್ ಮಾಡಲಾಗಿದೆ. ಸ್ಮಾರ್ಟ್ಫೋನ್ ಆರಂಭಿಕ ಬೆಲೆ ನೋಡುವುದಾದರೆ ಸುಮಾರು ರೂಗಳಿಗೆ ಪರಿಚಯಿಸಲಾಗಿದೆ. Realme 15T 5G ಸ್ಮಾರ್ಟ್ಫೋನ್ ಆಫರ್ 18,999 ರೂಗಳ ಬೆಲೆಯೊಂದಿಗೆ ಜಬರ್ದಸ್ತ್ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
SurveyRealme 15T 5G ಆಫರ್ ಬೆಲೆ ಎಷ್ಟು?
ಈ Realme 15T 5G ಸ್ಮಾರ್ಟ್ಫೋನ್ ಒಟ್ಟು ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು ಆರಂಭಿಕ 8GB RAM ಮತ್ತು 128GB ಸ್ಟೋರೇಜ್ 20,999 ರೂಗಳು ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ 22,999 ರೂಗಳು ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ 24,999 ರೂಗಳಾಗಿವೆ. ಆದರೆ ಕಂಪನಿ ಬಿಡುಗಡೆಯ ಭಾಗವಾಗಿ ಪ್ರತಿಯೊಂದು ವೇರಿಯೆಂಟ್ ಮೇಲೆ ಬರೋಬ್ಬರಿ 2000 ರೂಗಳ ಆಯ್ದ ಬ್ಯಾಂಕ್ ಕಾರ್ಡ್ ಡಿಸ್ಕೌಂಟ್ ಸಹ ನೀಡುತ್ತಿದೆ. ಈ ಮೂಲಕ ನೀವು ಆರಂಭಿಕ Realme 15T 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ 18,999 ರೂಗಳಿಗೆ ಖರೀದಿಸಬಹುದು.

Realme 15T 5G ಸ್ಮಾರ್ಟ್ಫೋನ್ ಪ್ರಿ-ಆರ್ಡರ್ ಆಫರ್
ಸ್ಮಾರ್ಟ್ಫೋನ್ ಪ್ರೀಮಿಯಂ ಫೀಚರ್ಗಳನ್ನು ಕೈಗೆಟಕುವ ಬೆಲೆಗೆ ಪರಿಚಯಿಸಿದೆ. ಸ್ಮಾರ್ಟ್ಫೋನ್ ಪ್ರಿ-ಆರ್ಡರ್ ಇಂದಿನಿಂದ ಅಂದರೆ 2 ಸೆಪ್ಟೆಂಬರ್ನಿಂದ 5ನೇ ಸೆಪ್ಟೆಂಬರ್ ವರೆಗೆ ಲಭ್ಯವಿರುತ್ತದೆ. ಈ ಪ್ರಿ-ಆರ್ಡರ್ ಮಾಡುವ ಗ್ರಾಹಕರಿಗೆ ಉಚಿತವಾಗಿ Realme Buds T01 ಪಡೆಯಬಹುದು. ಈ ಸ್ಮಾರ್ಟ್ಫೋನ್ ಅಧಿಕೃತವಾಗಿ 6ನೇ ಸೆಪ್ಟೆಂಬರ್ 2025 ರಿಂದ Flipkart ಮತ್ತು realme.com ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Also Read: eSIM ಅಂದ್ರೆ ಏನು? ಸಾಮಾನ್ಯ ಸಿಮ್‌ಗಿಂತ ಎಷ್ಟು ಭಿನ್ನವಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
Realme 15T 5G ಪ್ರಮುಖ ಫೀಚರ್ಗಳೇನು?
ರಿಯಲ್‌ಮಿ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ರಿಯಲ್‌ಮಿ 15T 5G ಫೋನ್ ಉತ್ತಮ ಫೀಚರ್‌ಗಳನ್ನು ಹೊಂದಿದೆ. ಈ ಫೋನ್ ದೊಡ್ಡ 6.57 ಇಂಚಿನ ಫುಲ್ HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುವುದರಿಂದ ಫೋನ್ ಬಳಸುವಾಗ ತುಂಬಾ ನಯವಾಗಿ ಮತ್ತು ವೇಗವಾಗಿ ಕೆಲಸ ಮಾಡುತ್ತದೆ. ಫೋಟೋ ತೆಗೆಯಲು ಇದರ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 2MP ಮೊನೊಕ್ರೋಮ್ ಕ್ಯಾಮೆರಾ ಇದೆ. ಇದರ ಮುಂಭಾಗದ ಕ್ಯಾಮೆರಾ ಕೂಡ 50MP ಆಗಿದ್ದು, ಸೆಲ್ಫಿಗಳಿಗೆ ತುಂಬಾ ಉತ್ತಮವಾಗಿದೆ.

Realme 15T 5G ಬ್ಯಾಟರಿ ಮತ್ತು ಹಾರ್ಡ್ವೇರ್
ಇದು ಮೀಡಿಯಾಟೆಕ್ Dimensity 6400 MAX ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುವುದರಿಂದ ಆಟಗಳನ್ನು ಅಥವಾ ಹಲವು ಕೆಲಸಗಳನ್ನು ಒಟ್ಟಿಗೆ ಮಾಡಲು ಇದು ಶಕ್ತಿಶಾಲಿಯಾಗಿದೆ. ಈ ನ ಪ್ರಮುಖ ವೈಶಿಷ್ಟ್ಯವೆಂದರೆ 7000mAh ಫೋನ್ ಬ್ಯಾಟರಿ ಇದು ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ. ಜೊತೆಗೆ ಇದು 60W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಆಂಡ್ರಾಯ್ಡ್ 15-ಆಧಾರಿತ ರಿಯಲ್‌ಮಿ UI 6.0 ಆಪರೇಟಿಂಗ್ ಸಿಸ್ಟಮ್ ಮತ್ತು ಇದು ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಡಿಸ್ಪ್ಲೇನಲ್ಲಿ ಹೊಂದಿದೆ. ಈ ಫೋನ್ ನೀರು ಮತ್ತು ಧೂಳಿನಿಂದ ರಕ್ಷಿಸಲು IP66, IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile