Realme ಮುಂದಿನ ವಾರ ತನ್ನ ಹೊಸ Game of Thrones Edition ಪರಿಚಯಿಸಲು ಸಜ್ಜಾಗಿದೆ
Realme 15 Pro 5G ಸ್ಮಾರ್ಟ್ ಫೋನ್ ಸೀಮಿತ ಆವೃತ್ತಿಯೂ Game of Thrones Edition ಮೂಲಕ ಪ್ರೇರಿತ.
Realme 15 Pro 5G ಸ್ಮಾರ್ಟ್ ಫೋನ್ ಹೊಸ ಆವೃತ್ತಿ ಇದೆ 8ನೇ ಅಕ್ಟೋಬರ್ 2025 ರಂದು ಬಿಡುಗಡೆಯಾಗಲಿದೆ.
ಈ ಫೋನ್ ವಿಶಿಷ್ಟ ವಿನ್ಯಾಸ, ನ್ಯಾನೊ-ಕೆತ್ತನೆಯ ಮೋಟಿಫ್‌ಗಳು ಮತ್ತು ಕಸ್ಟಮ್ UI ಥೀಮ್‌ಗಳನ್ನು ಒಳಗೊಂಡಿರುತ್ತದೆ.
ಭಾರತದಲ್ಲಿ Realme 15 Pro 5G ಸ್ಮಾರ್ಟ್ ಫೋನ್ ಸೀಮಿತ ಆವೃತ್ತಿಯೂ Game of Thrones Edition ಮೂಲಕ ಪ್ರೇರಿತವಾಗಿದ್ದು ಇದೆ 8ನೇ ಅಕ್ಟೋಬರ್ 2025 ರಂದು ಬಿಡುಗಡೆಯಾಗಲಿದೆ. ಈ ಹ್ಯಾಂಡ್‌ಸೆಟ್ ಸೀಮಿತ ಆವೃತ್ತಿಯ ರೂಪಾಂತರವಾಗಿರುತ್ತದೆ. ಇದು ಪ್ರಮಾಣಿತ ರೂಪಾಂತರಕ್ಕೆ ಹೋಲಿಸಿದರೆ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಚಿತ್ರಗಳು ಸ್ಟೈಲಿಶ್ ವಿನ್ಯಾಸ ಮತ್ತು ನ್ಯಾನೊ-ಕೆತ್ತಿದ ಮೋಟಿಫ್‌ಗಳ ಕಲ್ಪನೆಯನ್ನು ನೀಡುತ್ತವೆ. ಈ Realme 15 Pro 5G ಸ್ಮಾರ್ಟ್ ಫೋನ್ ಸೀಮಿತ ಆವೃತ್ತಿಯೂ ಎಂಟು ಋತುಗಳವರೆಗೆ ನಡೆದ Game of Thrones Edition ಮೂಲಕ ಪ್ರೇರಿತವಾದ ಕಸ್ಟಮ್ UI ಥೀಮ್‌ಗಳನ್ನು ಹೊಂದಿರುತ್ತದೆ.
Surveyಭಾರತದಲ್ಲಿ Realme 15 Pro 5G – Game of Thrones Edition ಬಿಡುಗಡೆ:
ಕಂಪನಿಯು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ Realme 15 Pro 5G ಗೇಮ್ ಆಫ್ ಥ್ರೋನ್ಸ್ ಆವೃತ್ತಿಯು8ನೇ ಅಕ್ಟೋಬರ್ 2025 ರಂದು ಮಧ್ಯಾಹ್ನ 2:30 ಕ್ಕೆ ಭಾರತೀಯ ಕಾಲಮಾನ ಬಿಡುಗಡೆಯಾಗಲಿದೆ ಎಂದು ಘೋಷಿಸಿತು. ಇದು ಸೀಮಿತ ಆವೃತ್ತಿಯ ಉಡುಗೊರೆ ಪೆಟ್ಟಿಗೆಯಲ್ಲಿ ಬರಲಿದೆ. ಇದು HBO ಸರಣಿಯ ಕಾಲ್ಪನಿಕ ಪಾತ್ರವಾದ ಡೇನೆರಿಸ್ ಟಾರ್ಗರಿಯನ್‌ಗೆ ಸಂಬಂಧಿಸಿದ ಡ್ರ್ಯಾಗನ್ ಎಗ್ ಮರದ ಪೆಟ್ಟಿಗೆಯಿಂದ ಪ್ರೇರಿತವಾಗಿದೆ ಎಂದು Realme ಹೇಳುತ್ತದೆ.

ಈ ಪೆಟ್ಟಿಗೆಯಲ್ಲಿ ವೆಸ್ಟೆರೋಸ್‌ನ ಚಿಕಣಿ ಪ್ರತಿಕೃತಿ, ಐರನ್ ಸಿಂಹಾಸನದಿಂದ ಪ್ರೇರಿತವಾದ ಫೋನ್ ಸ್ಟ್ಯಾಂಡ್ ಮತ್ತು ಮನೆಗಳ ಲಾಂಛನಗಳನ್ನು ಒಳಗೊಂಡ ಸಂಗ್ರಹಯೋಗ್ಯ ಕಾರ್ಡ್‌ಗಳು ಇರುತ್ತವೆ. ಕಾಸ್ಮೆಟಿಕ್ ಬದಲಾವಣೆಗಳ ಭಾಗವಾಗಿ ಮುಂಬರುವ ಹ್ಯಾಂಡ್‌ಸೆಟ್ ಕಸ್ಟಮೈಸ್ ಮಾಡಿದ ಐಸ್ ಮತ್ತು ಫೈರ್ UI ಥೀಮ್‌ಗಳನ್ನು ಒಳಗೊಂಡಿರುತ್ತದೆ. ಇದು ಗೇಮ್ ಆಫ್ ಥ್ರೋನ್ಸ್ ಕಾರ್ಯಕ್ರಮದ ಹೌಸ್ ಸ್ಟಾರ್ಕ್ ಮತ್ತು ಹೌಸ್ ಟಾರ್ಗರಿಯನ್ ಅವರಿಂದ ಸ್ಫೂರ್ತಿ ಪಡೆದಿದೆ.
Also Read: Motorola Razr 60 ಸ್ಮಾರ್ಟ್ ಫೋನ್ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಬರೋಬ್ಬರಿ 10,000 ರೂಗಳ ಕಡಿತದೊಂದಿಗೆ ಲಭ್ಯ!
Realme 15 Pro 5G ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:
ರಿಯಲ್‌ಮಿ ಸ್ಮಾರ್ತಫೋನ್ 6.8 ಇಂಚಿನ 1.5K (2800×1280 ಪಿಕ್ಸೆಲ್‌ಗಳು) AMOLED ಪರದೆಯನ್ನು 144Hz ವರೆಗೆ ರಿಫ್ರೆಶ್ ದರದೊಂದಿಗೆ 2,500Hz ವರೆಗೆ ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6,500 nits ವರೆಗೆ ಸ್ಥಳೀಯ ಪೀಕ್ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. Realme 15 Pro 5G 50MP ಮೆಗಾಪಿಕ್ಸೆಲ್ ಸೋನಿ IMX896 ಪ್ರೈಮರಿ ಸೆನ್ಸರ್ ಮತ್ತು 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.

ಈ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 7 ಜೆನ್ 4 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12GB ವರೆಗಿನ LPDDR4X RAM ಮತ್ತು 512GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ರಿಯಲ್‌ಮಿ 15 ಪ್ರೊ 5G ಸ್ಮಾರ್ಟ್‌ಫೋನ್ 7,000mAh ಬ್ಯಾಟರಿಯನ್ನು ಹೊಂದಿದ್ದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಇದು IP66 + IP68 + IP69 ರೇಟಿಂಗ್ ಅನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile