Motorola Edge 60 ಭಾರತದಲ್ಲಿ ಬಿಡುಗಡೆಯಾಗಿದೆ! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು ತಿಳಿಯಿರಿ!
Motorola Edge 60 ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
Motorola Edge 60 ಸ್ಮಾರ್ಟ್ಫೋನ್ MediaTek Dimensity 7400 ಚಿಪ್‌ಸೆಟ್ ಹೊಂದಿದೆ.
Motorola Edge 60 ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರ ಮತ್ತು 5500mAh ಬ್ಯಾಟರಿಯನ್ನು ಒಳಗೊಂಡಿದೆ.
ಮೊಟೊರೊಲಾ ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ Motorola Edge 60 ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದು ಮೊಟೊರೊಲಾ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಆಗಿದ್ದು 12GB RAM, 50MP ಕ್ಯಾಮೆರಾ ಮತ್ತು 5500mAh ದೊಡ್ಡ ಬ್ಯಾಟರಿಯಂತಹ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. Motorola Edge 60 ಸ್ಮಾರ್ಟ್ಫೋನ್ ನಿಮಗೆ MediaTek Dimensity 7400 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಮೊಟೊರೊಲಾ ಸ್ಮಾರ್ಟ್‌ಫೋನ್‌ನಲ್ಲಿ ವಿಶೇಷತೆಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ಭಾರತದಲ್ಲಿ Motorola Edge 60 ವಿಶೇಷಣಗಳೇನು?
ಮೊಟೊರೊಲಾದ ಈ ಲೇಟೆಸ್ಟ್ ಸ್ಮಾರ್ಟ್‌ಫೋನ್ 6.67 ಇಂಚಿನ (2712 x 1220 ಪಿಕ್ಸೆಲ್‌ಗಳು) 1.5K 10-ಬಿಟ್ POLED ಡಿಸ್ಟ್ರೇಯನ್ನು ಹೊಂದಿದ್ದು ಇದು 120Hz ರಿಫ್ರೆಶ್ ದರವನ್ನು ನೀಡುತ್ತದೆ. ಪರದೆಯು 4500 ನಿಟ್ಸ್ ಗರಿಷ್ಠ ಹೊಳವನ್ನು ಬೆಂಬಲಿಸುತ್ತದೆ. ಪರದೆಯ ರಕ್ಷಣೆಗಾಗಿ ಹ್ಯಾಂಡ್‌ಸೆಟ್‌ನಲ್ಲಿ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಫೋನ್ 2.6 GHz ಆಕ್ಷಾ-ಕೋರ್ MediaTek Dimensity 7400 ಚಿಪ್‌ಸೆಟ್ ಅನ್ನು 4nm ಪ್ರೊಸೆಸರ್ ಪ್ರೊಸೆಸರ್ ಅನ್ನು ಹೊಂದಿದೆ. ಗ್ರಾಫಿಕ್ಸ್ ಗಾಗಿ, ಹ್ಯಾಂಡ್‌ಸೆಟ್ ಮಾಲಿ-G615 MC2 GPU ಅನ್ನು ಹೊಂದಿದೆ.
ಮೊಟೊರೊಲಾದಿಂದ ಬಂದ ಈ ಇತ್ತೀಚಿನ ಫೋನ್ 12GB RAM ಜೊತೆಗೆ 256GB ಸ್ಟೋರೇಜ್ ಬರುತ್ತದೆ. ಮೈಕ್ರೋ SD ಕಾರ್ಡ್ ಮೂಲಕ ಸ್ಟೋರೇಜ್ 1TB ವರೆಗೆ ವಿಸ್ತರಿಸಬಹುದು. ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 15 ನೊಂದಿಗೆ ಬರುತ್ತದೆ ಮತ್ತು ಕಂಪನಿಯು 3 ವರ್ಷಗಳವರೆಗೆ OS ನವೀಕರಣಗಳನ್ನು ಮತ್ತು 4 ವರ್ಷಗಳವರೆಗೆ ಸೆಕ್ಯುರಿಟಿ ಅಪ್ಡೇಟ್ಗಳನ್ನು ಪಡೆಯುವುದಾಗಿ ಭರವಸೆ ನೀಡಿದೆ. Motorola Edge 60 ಸ್ಮಾರ್ಟ್ಫೋನ್ ಹೈಬ್ರಿಡ್ ಡ್ಯುಯಲ್ ಸಿಮ್ ಅನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ: Vi 180 Days Plan: ವೊಡಾಫೋನ್ ಐಡಿಯಾ ಬರೋಬ್ಬರಿ 6 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ನೀಡುತ್ತಿದೆ!
Motorola Edge 60 ಕ್ಯಾಮೆರಾ ಮತ್ತು ಬ್ಯಾಟರಿ
ಭಾರತದಲ್ಲಿ ಬಿಡುಗಡೆಯಾದ ಈ Motorola Edge 60 ಸ್ಮಾರ್ಟ್ ಫೋನ್‌ನಲ್ಲಿ 50MP ಪ್ರೈಮರಿ ಬ್ಯಾಕ್ ಕ್ಯಾಮೆರಾವನ್ನು f/1.8, OIS ಅಪರ್ಚರ್ ಹೊಂದಿದೆ. ಹ್ಯಾಂಡ್‌ಸೆಟ್‌ನಲ್ಲಿ ಅಲ್ಫಾ-ವೈಡ್ ಕ್ಯಾಮೆರಾವನ್ನು f/2.0 ಅಪರ್ಚರ್ ಹೊಂದಿದ್ದು ಇದು ಮ್ಯಾಕ್ರೋ ಆಯ್ಕೆಯನ್ನು ಬೆಂಬಲಿಸುತ್ತದೆ. ಫೋನ್‌ನಲ್ಲಿ 10MP ಮೆಗಾಪಿಕ್ಸೆಲ್ 3x ಟೆಲಿಫೋಟೋ ಕ್ಯಾಮೆರಾವನ್ನು f/2.0 ಅಪರ್ಚರ್ ಹೊಂದಿದೆ. ಸ್ಮಾರ್ಟ್ಫೋನ್ OIS, 30x ಸೂಪರ್ ಜೂಮ್ ಮತ್ತು 4K 30fps ವರೆಗೆ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 50MP ಫ್ರಂಟ್ ಕ್ಯಾಮೆರಾವನ್ನು ಸ್ಮಾರ್ಟ್ಫೋನ್ ಹೊಂದಿದೆ.
ಮುಂಭಾಗದ ಕ್ಯಾಮೆರಾವನ್ನು f/2.0 ಅಪರ್ಚರ್ ಹೊಂದಿದ್ದು ಇದು 4K 30fps ವರೆಗೆ ವೀಡಿಯೊ ರೆಕಾರ್ಡಿಂಗ್ ಅನ್ನು ನೀಡುತ್ತದೆ. ಈ ಮೊಟೊರೊಲಾ ಸ್ಮಾರ್ಟ್ ಫೋನ್ USB ಟೈಪ್-ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಡಾಲ್ಟಿ ಅಟ್ರ್ಯಾಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಹ್ಯಾಂಡ್‌ಸೆಟ್‌ಗೆ ಪವರ್ ತುಂಬಲು 68W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5500mAh ಬ್ಯಾಟರಿಯನ್ನು ಒದಗಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile