ಭಾರತದಲ್ಲಿ Infinix Note Edge 5G ಬಿಡುಗಡೆಗೆ ದಿನಾಂಕ ಫಿಕ್ಸ್! ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್ ತಿಳಿಯಿರಿ
ಫೆಬ್ರವರಿ 18 ರಂದು Infinix Note Edge 5G ಭಾರತದಲ್ಲಿ ಲಾಂಚ್
ಈ ಮೊಬೈಲ್ ಮೂರು ಕಲರ್ ಆಯ್ಕೆಗಳನ್ನು ಪಡೆದಿರುವ ನಿರೀಕ್ಷೆ ಇದೆ
ಮುಂಬರುವ ಈ ಫೋನ್ 6,500mAh ಬ್ಯಾಟರಿ ಹೊಂದಿರುವುದು ಪಕ್ಕಾ ಎನ್ನಲಾಗಿದೆ
Infinix ಮೊಬೈಲ್ ಕಂಪನಿಯು Infinix Note Edge 5G ಮೊಬೈಲ್ ಅನ್ನು ಇತ್ತೀಚಿಗೆ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿತು. ಇದೀಗ ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಶೀಘ್ರದಲ್ಲೇ ಈ ಮೊಬೈಲ್ ಬಿಡುಗಡೆ ಆಗಲಿದ್ದು, ಈ ಫೋನ್‌ಗಾಗಿ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಈಗ ತೆರೆಯಲಾಗಿದೆ. ಮುಂಬರುವ ಈ ಮೊಬೈಲ್ MediaTek ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿರುವುದು ಪಕ್ಕಾ ಎನ್ನಲಾಗಿದೆ ಹಾಗೆಯೇ ಈ ಫೋನ್ ಭಾರತದಲ್ಲಿ ಮೂರು ಕಲರ್ ಆಯ್ಕೆಗಳೊಂದಿಗೆ ಲಗ್ಗೆ ಇಡಬಹುದು ಎಂದು ಹೇಳಲಾಗಿದೆ. ಇನ್ನುಳಿದಂತೆ Infinix Note Edge 5G ಸ್ಮಾರ್ಟ್‌ಫೋನಿನ ನಿರೀಕ್ಷಿತ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Lava Yuva Star 3 ಮೊಬೈಲ್ ಕಡಿಮೆ ಬೆಲೆಯಲ್ಲಿ ಲಾಂಚ್! 5000mAh ಬ್ಯಾಟರಿ ಸೌಲಭ್ಯ ಪಡೆದಿದೆ
Infinix Note Edge 5G ನಿರೀಕ್ಷಿತ ಬೆಲೆ ಹಾಗೂ ಲಭ್ಯತೆ
Infinix Note Edge 5G ಮೊಬೈಲ್ ಇದೇ ಫೆಬ್ರವರಿ ಮೂರನೇ ವಾರದಲ್ಲಿ (February 18 ರಂದು) ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ತಾಣದಲ್ಲಿ Infinix Note Edge 5G ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಈಗ ಲಭ್ಯವಿದೆ. ಈ ಫೋನ್ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಅಂದಹಾಗೆ ಈ ಮೊಬೈಲ್ ಸ್ಟೆಲ್ಲರ್ ಬ್ಲೂ, ಸಿಲ್ಕ್ ಗ್ರೀನ್ ಮತ್ತು ಲೂನಾರ್ ಟೈಟಾನಿಯಂ ಕಲರ್‌ಗಳ ಆಯ್ಕೆಯನ್ನು ಒಳಗೊಂಡಿರುವುದು ಪಕ್ಕಾ ಆಗಿದೆ.

Infinix Note Edge 5G ನಿರೀಕ್ಷಿತ ಫೀಚರ್ಸ್ ಹೀಗಿವೆ
Infinix Note Edge 5G ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.78 ಇಂಚಿನ 1.5K 3D ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಅಲ್ಲದೇ ಈ ಫೋನ್ ಸ್ಕ್ರೀನ್ 4,500 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿರಲಿದೆ. ಹಾಗೆಯೇ ಈ ನೂತನ ಮೊಬೈಲ್ MediaTek Dimensity 7100 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರುವ ಸಾಧ್ಯತೆಗಳು ಅಧಿಕವಾಗಿವೆ. ಇದಕ್ಕೆ ಪೂರಕವಾಗಿ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನೇನು ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ Infinix Note Edge 5G ಮೊಬೈಲ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು. ಅಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಬಹುದು. ಅದೇ ರೀತಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಬಹುದು. ಇದರೊಂದಿಗೆ ಈ ಫೋನ್ JBL ಟ್ಯೂನ್ಡ್ ಡ್ಯುಯಲ್ ಸ್ಪೀಕರ್ ಸೆಟ್‌ಅಪ್ ಪಡೆದಿರುವ ನಿರೀಕ್ಷೆಗಳು ಇವೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಒಳಗೊಂಡಿರಲಿದೆ ಎನ್ನಲಾಗಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile