Lava Yuva Star 3 ಮೊಬೈಲ್‌ ಕಡಿಮೆ ಬೆಲೆಯಲ್ಲಿ ಲಾಂಚ್‌! 5000mAh ಬ್ಯಾಟರಿ ಸೌಲಭ್ಯ ಪಡೆದಿದೆ

HIGHLIGHTS

Lava Yuva Star 3 ಸ್ಮಾರ್ಟ್‌ಫೋನ್‌ ದರವು 7,499 ರೂಗಳು ಆಗಿದೆ

ಲಾವಾ ಸಂಸ್ಥೆಯ ಈ 5000mAh ಬ್ಯಾಟರಿ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ

Lava Yuva Star 3 ಮೊಬೈಲ್‌ ಮಾರ್ಚ್‌ನಿಂದ ಖರೀದಿಗೆ ಲಭ್ಯವಾಗಲಿದೆ

Lava Yuva Star 3 ಮೊಬೈಲ್‌ ಕಡಿಮೆ ಬೆಲೆಯಲ್ಲಿ ಲಾಂಚ್‌! 5000mAh ಬ್ಯಾಟರಿ ಸೌಲಭ್ಯ ಪಡೆದಿದೆ

ಸ್ವದೇಶಿ ಬ್ರ್ಯಾಂಡ್ Lava ಇದೀಗ ಭಾರತದಲ್ಲಿ ಮತ್ತೊಂದು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಹೌದು, ಲಾವಾ ಮೊಬೈಲ್‌ ಕಂಪನಿಯು ನೂತನವಾಗಿ Lava Yuva Star 3 ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನೂತನವಾಗಿ ಎಂಟ್ರಿ ಕೊಟ್ಟಿರುವ ಈ ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 13MP ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಹಾಗೆಯೇ Lava Yuva Star 3 ಮೊಬೈಲ್‌ ರೆಡ್‌ಮಿ, ರಿಯಲ್‌ಮಿ ಮತ್ತು ಇನ್ಫಿನಿಕ್ಸ್‌ನಂತಹ ಕಂಪನಿಗಳ ಎಂಟ್ರಿ ಲೆವಲ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಅಂದಹಾಗೆ ಈ ಫೋನ್‌ ಎರಡು ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೆ Lava Yuva Star 3 ಮೊಬೈಲ್‌ನ ಬೆಲೆ ಹಾಗೂ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio vs Airtel vs Vi 3599 ರೂಗಳ ಪ್ಲಾನ್‌: 365 ದಿನಗಳ ವ್ಯಾಲಿಡಿಟಿಗೆ ಯಾವ ಯೋಜನೆ ಉತ್ತಮ?

Lava Yuva Star 3 ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ಲಾವಾ ಕಂಪನಿಯು ಹೊಸದಾಗಿ Lava Yuva Star 3 ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನಿನ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 7,499 ರೂಗಳು ಆಗಿದೆ. ಇನ್ನು ಈ ಫೋನ್‌ ಎರಡು ಕಲರ್‌ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ ಇಂಡಸ್ ಬ್ಲ್ಯಾಕ್ ಮತ್ತು ಸಿಯಾಚಿನ್ ವೈಟ್ ಆಗಿವೆ. ಅಂದಹಾಗೆ Lava Yuva Star 3 ಮೊಬೈಲ್‌ ಇದೇ ಮಾರ್ಚ್‌ನಿಂದ ದೇಶಾದ್ಯಂತ ರೀಟೆಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Lava Yuva Star 3

Lava Yuva Star 3 ಫೋನಿನ ಫೀಚರ್ಸ್‌

ಲಾವಾ ಸಂಸ್ಥೆಯ Lava Yuva Star 3 ಮೊಬೈಲ್‌ 144Hz ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡ 6.75 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ HD+ ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು 90Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಜೊತೆಗೆ 2.5D ಕರ್ವ್ಡ ಗ್ಲಾಸ್‌ ಒಳಗೊಂಡಿದೆ. ಅಂದಹಾಗೆ ಈ ಫೋನ್‌ ಆಕ್ಟಾ ಕೋರ್ Unisoc SC9863A ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಇದರೊಂದಿಗೆ 4GB RAM + 64GB ವೇರಿಯಂಟ್‌ ಆಯ್ಕೆ ಪಡೆದಿದೆ.

ಇನ್ನು Lava Yuva Star 3 ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಜೊತೆಗೆ 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 340 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಹಾಗೂ 615 ನಿಮಿಷಗಳ ಯೂಟ್ಯೂಬ್ ಪ್ಲೇಬ್ಯಾಕ್ ಮತ್ತು 30 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆ ಎಂದು ಲಾವಾ ಹೇಳಿಕೊಂಡಿದೆ. ಹಾಗೆಯೇ Lava Yuva Star 3 ಮೊಬೈಲ್‌ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo