Jio vs Airtel vs Vi 3599 ರೂಗಳ ಪ್ಲಾನ್‌: 365 ದಿನಗಳ ವ್ಯಾಲಿಡಿಟಿಗೆ ಯಾವ ಯೋಜನೆ ಉತ್ತಮ?

HIGHLIGHTS

Jio, Airtel ಮತ್ತು Vi: 3599 ರೂಗಳ ಪ್ಲಾನ್‌ ವಾರ್ಷಿಕ ಅವಧಿಯ ಮಾನ್ಯತೆ ಪಡೆದಿದೆ

ಮೂರು ಟೆಲಿಕಾಂ ಕಂಪನಿಗಳ ಪ್ಲಾನ್‌ನಲ್ಲಿ ಅನಿಯಮಿತ ವಾಯ್ಸ್‌ ಕರೆಗಳ ಸೌಲಭ್ಯ ಲಭ್ಯ

ಜಿಯೋದ ಈ ವಾರ್ಷಿಕ ಪ್ಲಾನಿನಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನ ಲಭ್ಯ

Jio vs Airtel vs Vi 3599 ರೂಗಳ ಪ್ಲಾನ್‌: 365 ದಿನಗಳ ವ್ಯಾಲಿಡಿಟಿಗೆ ಯಾವ ಯೋಜನೆ ಉತ್ತಮ?

Jio, Airtel ಹಾಗೂ Vi ಟೆಲಿಕಾಂ ಸಂಸ್ಥೆಗಳು ಆಕರ್ಷಕ ಯೋಜನೆಗಳ ಮೂಲಕ ತಮ್ಮದೇ ಗ್ರಾಹಕ ಬಳಗವನ್ನು ಹೊಂದಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಹಾಗೂ ಪೋಸ್ಟ್‌ಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಆಯ್ಕೆಗಳು ಸೇರಿವೆ. ಇನ್ನು ಕೆಲವು ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಪ್ರಯೋಜನದಿಂದ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಅಂತಹ ಪ್ಲಾನ್‌ ನೋಡುವುದಾರರೆ Jio, Airtel ಹಾಗೂ Vi ಟೆಲಿಕಾಂಗಳ 3599 ರೂಗಳ ಪ್ಲಾನ್‌ ಡೇಟಾ, ವ್ಯಾಲಿಡಿಟಿ, ವಾಯ್ಸ್‌ ಕರೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಒಳಗೊಂಡಿವೆ. ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂ 3599 ರೂಗಳ ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್‌? ಪ್ರಯೋಜನಗಳೆನು ಮುಂದೆ ನೋಡೋಣ ತಿಳಿಯೋಣ.

Digit.in Survey
✅ Thank you for completing the survey!

Also Read : Vivo V70 ಮತ್ತು Vivo V70 Elite ಫೋನ್‌ಗಳ ಬೆಲೆ ಲೀಕ್‌; ಕುತೂಹಲ ಹೆಚ್ಚಿಸಿದ ಫೀಚರ್ಸ್‌

Airtel ಟೆಲಿಕಾಂನ 3599 ರೂ.ಗಳ ರೀಚಾರ್ಜ್‌ ಯೋಜನೆ

ಭಾರ್ತಿ ಏರ್‌ಟೆಲ್‌ನ 3599 ರೂ.ಗಳ ರೀಚಾರ್ಜ್‌ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ 5G + ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆ ಜೊತೆಗೆ ಹೆಚ್ಚುವರಿಯಾಗಿ ಒಂದು ವರ್ಷದ Adobe Premiere Express ಚಂದಾದಾರಿಕೆಯು ಲಭ್ಯ.

Jio
Airtel vs Jio vs Vodafone idea

Jio ಟೆಲಿಕಾಂನ 3599 ರೂ.ಗಳ ರೀಚಾರ್ಜ್‌ ಯೋಜನೆ

ರಿಲಯನ್ಸ್ Jio 3599 ರೂ.ಗಳ ರೀಚಾರ್ಜ್‌ ಪ್ಲಾನ್‌ ಸಹ ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದ್ದು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 912.5GB ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆ ಜೊತೆಗೆ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.

Vi ಟೆಲಿಕಾಂನ 3599 ರೂ.ಗಳ ರೀಚಾರ್ಜ್‌ ಯೋಜನೆ

ವೊಡಾಫೋನ್‌ ಐಡಿಯಾ ಟೆಲಿಕಾಂನ 3599 ರೂ.ಗಳ ರೀಚಾರ್ಜ್‌ ಪ್ಲಾನ್‌ ವಾರ್ಷಿಕ ಅವಧಿಯ ಮಾನ್ಯತೆ ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲಾನ್‌ ವೀಕೆಂಡ್‌ ಡೇಟಾ ರೋಲ್‌ಓವರ್‌ ಸೌಲಭ್ಯವನ್ನು ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo